ಮಂಗಳನ ಅಂಗಳದಲ್ಲಿ ಭಾರತ-ಅಮೆರಿಕ ಜುಗಲ್ ಬಂದಿ

Subscribe to Oneindia Kannada

ವಾಷಿಂಗ್ ಟನ್, ಫೆಬ್ರವರಿ, 29: ಭಾರತದ ಸಂಶೋಧನಾ ಸಾಧನೆಗೆ ಮತ್ತೊಂದು ಗರಿ ಸಿಕ್ಕಿದೆ. ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಭಾರತದ ಮಂಗಳಯಾನದ ಯಶಸ್ಸನ್ನು ಕೊಂಡಾಡಿದ್ದು ಜಂಟಿಯಾಗಿ ಸಂಶೋಧನೆ ನಡೆಸಲು ಆಹ್ವಾನ ನೀಡಿದೆ.

ಭಾರತ ಮತ್ತು ಅಮೆರಿಕ ಜಂಟಿಯಾಗಿ ಮಂಗಳ ಗ್ರಹ ಶೋಧ ನಡೆಸಬಹುದು. ಭಾರತೀಯ ಗಗನ ಯಾತ್ರಿಯೊಬ್ಬರು ಜಂಟಿ ಯೋಜನೆ ಭಾಗವಾಗಿ ಮಂಗಳನ ಮೇಲೆ ಕಾಲಿಡಬಹುದು ಎಂದು ನಾಸಾದ ಜೆಟ್‌ ಪ್ರೊಪಲ್ಶನ್‌ ಲ್ಯಾಬೊರೇಟರಿಯ (ಜೆಪಿಎಲ್‌) ನಿರ್ದೇಶಕ ಚಾರ್ಲ್ಸ್‌ ಎಲಕಿ ಹೇಳಿದ್ದಾರೆ.[ಮಂಗಳನ ಅಂಗಳದ ಬೆರಗುಗೊಳಿಸುವ ಚಿತ್ರಗಳು]

mars

ಮುಂದಿನ ದಶಕದಲ್ಲಿ ಮಂಗಳ ಗ್ರಹ ಯೋಜನೆಯನ್ನು ಹಮ್ಮಿಕೊಳ್ಳಲು ನಾಸಾ ನಿರ್ಧರಿಸಿದೆ. ಸದ್ಯವೇ ಈ ಬಗ್ಗೆ ಸಭೆಯನ್ನು ನಡೆಸಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು. ಮಂಗಳನಲ್ಲಿಗೆ ಮಾನವ ಸಹಿತ ಯಾತ್ರೆಯ ಪೂರ್ವ ಸಿದ್ಧತೆಯನ್ನು ಆರಂಭಿಸಲಾಗುವುದು ಎಂದು ಚಾರ್ಲ್ಸ್ ತಿಳಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ಭಾರತ ಮಂಗಳಯಾನಕ್ಕೆ ಸಂಬಂಧಿಸಿ ಮಾಡಿದ ಸಾಧನೆಯನ್ನು ಮೆಚ್ಚಲೇಬೇಕು. ಇಸ್ರೊದ ಸಾಮರ್ಥ್ಯದ ಬಗ್ಗೆ ಜಗತ್ತು ಅಚ್ಚರಿಗೊಂಡಿದೆ. ಹೀಗಾಗಿ ಇಸ್ರೊ ಜತೆಗೆ ಮಂಗಳ ಗ್ರಹ ಶೋಧ ಕಾರ್ಯಕ್ರಮ ನಡೆಸಲು ನಾಸಾ ಉತ್ಸುಕವಾಗಿದೆ ಎಂದು ಚಾರ್ಲ್ಸ್‌ ಹೇಳಿದ್ದಾರೆ.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?]

ಅಲ್ಲದೇ ಅಮೆರಿಕ, ಯುರೋಪ್‌, ಫ್ರಾನ್ಸ್‌ ಮತ್ತು ಇಟಲಿಯನ್ನು ಒಳಗೊಂಡ ಬಾಹ್ಯಾಕಾಶ ಸಂಶೋಧನಾ ಗುಂಪಿಗೆ ಭಾರತವೂ ಸೇರಬೇಕು. ನಿಸಾರ್‌ ಎಂಬ ಹೆಸರಿನ ವಿನೂತನ ಕಾರ್ಯಕ್ರಮವೊಂದನ್ನು ನಾಸಾ ಮತ್ತು ಇಸ್ರೊ ಸಹಭಾಗಿತ್ವದಲ್ಲಿ 2020ರ ವೇಳೆಗೆ ಆರಂಭಗೊಳ್ಳಲಿದೆ. ಜಗತ್ತಿನಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಗುರುತಿಸುವಿಕೆ, ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯುವುದು, ಹವಾಮಾನ ಬದಲಾವಣೆ ತಿಳಿವಳಿಕೆ ಇದರ ಪ್ರಮುಖ ಉದ್ದೇಶವಾಗಿರುತ್ತದೆ ಎಂದು ಚಾರ್ಲ್ಸ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the Success of Indian Mission Mars India and the America could jointly explore Mars. India's maiden mission to the Red Planet, Mangalyaan,(Maam) has opened the eyes of the world on ISRO's capabilities at undertaking low cost, high value inter-planetary mission.
Please Wait while comments are loading...