13 Pics: ವರ್ಷದ ನಂತರ ಭೂಮಿಗೆ ಬಂದ ಗಗನಯಾತ್ರಿ

Subscribe to Oneindia Kannada

ವಾಷಿಂಗ್ ಟನ್ ಡಿಸಿ, ಮಾರ್ಚ್, 02: ಇನ್ನು ಮುಂದೆ ಅಕ್ಕ ಪಕ್ಕದ ಗ್ರಹಗಳು ನಮ್ಮ ಪಕ್ಕದ ಮನೆಯಾಗುತ್ತವೆ, ಪರ ಊರಿಗೆ ಹೋಗಿ ಬಂದಂತೆ ಬೇರೆ ಗೆಲಾಕ್ಸಿಗಳಿಗೂ ಹೋಗಿ ಬರಬಹುದು. ಹಾ ಇದು ಹೇಗೆ ಸಾಧ್ಯ ಎಂದು ನೋಡ್ತಾ ಇದೀರಾ? ,, 340 ದಿನಗಳನ್ನು ಅಂತರಿಕ್ಷದಲ್ಲಿ ಕಳೆದು ಬಂದ ಕೆಲ್ಲಿಯ ಕತೆ ಕೇಳಿದರೆ ಎಲ್ಲವೂ ಸಾಧ್ಯ ಎಂದೆನಿಸುತ್ತದೆ.

ಬಾಹ್ಯಾಕಾಶದಲ್ಲಿ ಸುಮಾರು ಒಂದು ವರ್ಷ ಕಳೆದ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ವಿಜ್ಞಾನಿ ಸ್ಕಾಟ್ ಕೆಲ್ಲಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ. ರಷ್ಯಾದ ಗಗನಯಾತ್ರಿಗಳಾದ ಮಿಖಾಯಿಲ್ ಕೊರ್ನಿಯಕೋ ಮತ್ತು ಸರ್ಜೆ ವೊಲ್ಕೊವ್ ಜತೆ ಕಝಾಕಿಸ್ತಾನ್ ಮರುಭೂಮಿಗೆ ಬಂದಿಳಿದಿದ್ದಾರೆ.[ಅಂತರಿಕ್ಷದಲ್ಲಿವೆ ಒಟ್ಟು 8 ವಾಸಯೋಗ್ಯ ಭೂಮಿಗಳು!]

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅತಿ ಹೆಚ್ಚು ದಿನ ಕಳೆದ ಕೆಲ್ಲಿ ಅನುಭವಗಳನ್ನು ಕೇಳುವ ಆಸೆ ಯಾರಿಗೆ ತಾನೆ ಇರುವುದಿಲ್ಲ. ಸಾಮಾಜಿಕ ತಾಣಗಳಲ್ಲೂ ಸ್ಕಾಟ್ ಕೆಲ್ಲಿಯದ್ದೇ ಚರ್ಚೆ. ಕೆಲ ವಾಹಿನಿಗಳು ನೇರ ಪ್ರಸಾರವನ್ನು ಮಾಡಿದರೆ, ನಾಸಾ ಕ್ಷಣಕ್ಷಣಕ್ಕೂ ಟ್ವೀಟ್ ಮಾಡಿ ಅಪ್ ಡೇಟ್ಸ್ ನ್ನು ಜನರಿಗೆ ನೀಡಿತು. ಅವರ ಒಂದು ವರ್ಷದ ಭೂಮಿಯ ಮೇಲಿನ ಜೀವನವನ್ನು ಚಿತ್ರಗಳಲ್ಲಿ ನೋಡಿಕೊಂಡು ಬರೋಣ....[ಚಿತ್ರಗಳು ನಾಸಾ]

ಮೂರು ವರ್ಷದ ಯೋಜನೆ

ಮೂರು ವರ್ಷದ ಯೋಜನೆ

ಸ್ಕಾಟ್ ಕೆಲ್ಲಿ ಮತ್ತು ರಷ್ಯಾದ ಮಿಖಾಯಿಲ್ ಕೊರ್ನಿಯಕೋ ಮೂರು ವರ್ಷದ ಸಂಶೋಧನೆ ಯೋಜನೆಯನ್ನು ಹಮ್ಮಿಕೊಂಡಿದ್ದರು. ಆದರೆ ಒಂದು ವರ್ಷಕ್ಕೆ ಮುನ್ನವೇ ಹಿಂದಿರುಗಿದ್ದಾರೆ.[ಬಾಹ್ಯಾಕಾಶದಿಂದ ಭುವಿಗಿಳಿದ ಸುನೀತಾ ವಿಲಿಯಮ್ಸ್]

ಮಾನವನ ದೇಹ ಹೇಗೆ ವರ್ತಿಸುತ್ತದೆ?

ಮಾನವನ ದೇಹ ಹೇಗೆ ವರ್ತಿಸುತ್ತದೆ?

ಬಾಹ್ಯಾಕಾಶದಲ್ಲಿ ಮಾನವನ ದೇಹ ಯಾವ ರೀತಿ ವರ್ತನೆ ಮಾಡುತ್ತದೆ ಎಂಬುದನ್ನು ಅರಿತಿದ್ದಾರೆ. ಮುಂದೆ ಯಾನ ಕೈಗೊಳ್ಳುವವರಿಗೆ ಇವರು ಉತ್ತಮ ಮಾರ್ಗದರ್ಶಕರಾಗುವುದರಲ್ಲಿ ಅನುಮಾನವಿಲ್ಲ.

ಸಂಶೋಧನೆ ಸಾಧನಗಳು!

ಸಂಶೋಧನೆ ಸಾಧನಗಳು!

ಕೆಲ್ಲಿ ಇದೀಗ ವಿಜ್ಞಾನಿಗಳ ಪಾಲಿಗೆ ಸಂಶೋಧನೆಯ ಸಾಧನ. ತಿಂಗಳುಕಾಲ ಬಾಹ್ಯಾಕಾಶದಲ್ಲಿದ್ದರೆ ಏನಾಗುತ್ತದೆ?ಮಾನವನ ಎಲುಬಿನ ಮೇಲೆ ಅದು ಬೀರುವ ಪರಿಣಾಮ ಎಂಥದ್ದು? ಈ ಬಗೆಯ ಪ್ರಶ್ನೆಗಳಿಗೆ ಕೆಲ್ಲಿ ಉತ್ತರ ನೀಡಲಿದ್ದಾರೆ.

ವರ್ಷ ಕಳೆದಿದ್ದು ಇದೆ ಮೊದಲು

ವರ್ಷ ಕಳೆದಿದ್ದು ಇದೆ ಮೊದಲು

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅತಿ ಹೆಚ್ಚು ದಿನಗಳನ್ನು ಕಳೆದ ದಾಖಲೆ ಪಟ್ಟಿಗೆ ಕೆಲ್ಲಿ ಸೇರಿದ್ದಾರೆ. ಕೆಲ್ಲಿ ಬರೋಬ್ಬರಿ 340 ದಿನಗಳ ನಂತರ ಭೂಮಿಗೆ ಹಿಂದಿರುಗಿದ್ದಾರೆ.

ಅವಳಿ-ಜವಳಿ

ಅವಳಿ-ಜವಳಿ

ಸ್ಕಾಟ್ ಕೆಲ್ಲಿ ಮತ್ತು ಮಾರ್ಕ್ ಕೆಲ್ಲ ಅವಳಿ ಸಹೋದರರು. ವಿಜ್ಞಾನಿಗಳಿಗೆ ಇದು ಸಹ ಸಹಾಯ ಮಾಡಲಿದ್ದು ಒಬ್ಬ ಸಹೋದರ ಇಷ್ಟು ದಿನ ಅಂತರಿಕ್ಷದಲ್ಲಿದ್ದರೆ ಇನ್ನೊಬ್ಬರು ಭೂಮಿ ಮೇಲೆ ಇದ್ದರು.

ಮಂಗಳ ಗ್ರಹಕ್ಕೆ ಯಾನ?

ಮಂಗಳ ಗ್ರಹಕ್ಕೆ ಯಾನ?

ಮಂಗಳ ಗ್ರಹಕ್ಕೆ ಮಾನವನನ್ನು ಕಳಿಸುವ ಬಗ್ಗೆ ವಿಜ್ಞಾನಿಗಳು ಚರ್ಚೆ ಆರಂಭಿಸಿದ್ದಾರೆ. ಬಾಹ್ಯಾಕಾಶದ ವಾತಾವರಣದ ಬಗ್ಗೆ ಕೆಲ್ಲಿಯಿಂದ ಕೇಳಿ ತಿಳಿದು ವಿಜ್ಞಾನಿಗಳು ಒಂದು ಹೆಜ್ಜೆ ಮುಂದೆ ಇಡಲಿದ್ದಾರೆ.

ಕೆಲ್ಲಿ ಪ್ರಯಾಣ ಹೇಗಿತ್ತು

ಕೆಲ್ಲಿ ಯಾವ ಸಮಯಕ್ಕೆ ಅಂತಾರಾಷ್ಟ್ಈಯ ಬಾಹ್ಯಾಕಾಶ ನಿಲ್ದಾಣವನ್ನು ತೊರೆದರು? ಯಾವ ಸಮಯಕ್ಕೆ ಭೂಮಿಯನ್ನು ತಲುಪಿದರು? ಎಂಬುದನ್ನು ವಿವರಿಸುವ ನಾಸಾ ಟ್ವೀಟ್.

ಬಾಹ್ಯಾಕಾಶದಿಂದ ಭೂಮಿಗೆ ಬಂದ!

ವರ್ಷದ ನಂತರ ಬಾಹ್ಯಾಕಾಶದಿಂದ ಭೂಮಿಗೆ ಬಂದ!

ಬಾಹ್ಯಾಕಾಶದಿಂದ ಹೊರಟ ಕೆಲ್ಲಿ

ಕೆಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ತೊರೆದಿದ್ದನ್ನು ನಾಸಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದನ್ನು ನೋಡಿಕೊಂಡು ಬನ್ನಿ..

ಭೂಮಿಗೆ ಬಂದ ಕೆಲ್ಲಿ

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದ ಕೆಲ್ಲಿಯನ್ನು ಸುರಕ್ಷಿತವಾಗಿ ಬರಮಾಡಿಕೊಳ್ಳಲಾಯಿತು.

ಯಶಸ್ಸಿನ ಗುಟ್ಟು

ಭೂಮಿಗೆ ಹಿಂದಿರುಗಿದ ನಂತರ ಸ್ಕಾಟ್ ಕೆಲ್ಲಿ ತಮ್ಮ ಹೆಬ್ಬೆರಳನ್ನು ಮೇಲಕ್ಕೆ ಮಾಡಿ ಸಾಧನೆಯ ಸಂಕೇತ ತೋರಿಸಿದರು.

ಮುಂದೇನಾಗಬಹುದು?

ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಬಂದ ನಂತರ ಹೊಸ ಹೊಸ ಸಂಶೋಧನೆಗಳು ನಡೆದರೆ ಏನಾಗುತ್ತದೆ. ಬೇರೆ ಗ್ರಹಗಳು ನಮಗೆ ಪಕ್ಕದ ಮನೆಯಾಗುತ್ತವೆ ಎಂದು ಬಿಂಬಿಸುವ ನಾಸಾದ ವಿಡಿಯೋ.

ಕೆಲ್ಲಿ ಪ್ರಯಾಣದ ಸಂಪೂರ್ಣ ವಿಡಿಯೋ

ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಕೆಲ್ಲಿ ಭೂಮಿಯನ್ನು ತಲುಪುವವರೆಗಿನ ಸಂಪೂರ್ಣ ವಿಡಿಯೋವನ್ನು ನೋಡಿಕೊಂಡು ಬನ್ನಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NASA astronaut Scott Kelly and Russian cosmonauts Mikhail Kornienko and Sergey Volkov have landed in the Kazakhstan desert after leaving the International Space Station, NASA and Russian mission control said.
Please Wait while comments are loading...