ಚೀನಾದಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್

ಬೀಜಿಂಗ್, ಮೇ 16: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಚೀನಾದ ದೈತ್ಯ ಅಂತರ್ಜಾಲ ಮಾರಾಟಗಾರ ಸಂಸ್ಥೆ ಆಲಿಬಾಬದ ಮುಖ್ಯ ನಿರ್ವಹಣಾ ಅಧಿಕಾರಿ ಜ್ಯಾಕ್ ಮಾ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಸಿಇಒ ಗಳನ್ನು ಭೇಟಿ ಮಾಡಿದ್ದಾರೆ.

ಮೇಕ್ ಇನ್ ಇಂಡಿಯಾ ಅಭಿಯಾನದ ಬಗ್ಗೆ ಚೀನಾದ ಬೃಹತ್ ಕಂಪನಿ ಸಿಇಒಗಳಿಗೆ ಮಾಹಿತಿ ನೀಡಿದ ಮೋದಿ ಬಂಡವಾಳ ಹೂಡಿಕೆ ಬಗ್ಗೆ ತಿಳಿಸಿಕೊಟ್ಟರು. "ನಾನು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದೇವೆ. 'ಮೇಕ್ ಇನ್ ಇಂಡಿಯಾ' ಮತ್ತು ಡಿಜಿಟಲ್ ಇಂಡಿಯ ಬಗ್ಗೆಯೂ ಆಸಕ್ತಿಯಿದೆ ಎಂದು ಆಲಿಬಾಬ ಸಿಇಒ ಜ್ಯಾಕ್ ಮಾ ಮೋದಿ ಅವರಿಗೆ ತಿಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.[ಭಾರತ-ಚೀನಾದಿಂದ 24 ಪ್ರಮುಖ ಒಪ್ಪಂದಕ್ಕೆ ಸಹಿ]

narendra modi

ಈ ವೇಳೆ ಮಾತನಾಡಿದ ಪ್ರಧಾನಿ, ಚೀನಾದಿಂದ ನಾವು ಸಾಕಷ್ಟು ವಿಷಯ ತಿಳಿದುಕೊಂಡಿದ್ದೇವೆ. ಭಾರತದಲ್ಲಿ ನಿಮಗೆ ಬಂಡವಾಳ ಹೂಡಿಕೆಗೆ ಎಲ್ಲ ಅವಕಾಶ ನೀಡಲಾಗುವಿದಿ. ಮೇಕ್ ಇನ್ ಇಂಡಿಯಾ ಜತೆ ಹೆಜ್ಜೆ ಹಾಕೋಣ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.[ಭಾರತ-ಚೀನಾ ದ್ವಿಪಕ್ಷೀಯ ಸಹಿ ಕಂಡ ಒಪ್ಪಂದಗಳು]

ಪ್ರಮುಖ ಸಭೆಯಲ್ಲಿ ಆಲಿಬಾಬಾದ ಜಾಕ್ ಮಾ ಸೇರಿದಂತೆ, ಹುವೈ, ಶಾಂಘೈ ಅರ್ಬನ್ ಸೇರಿದಂತೆ ಚೀನಾದ ಪ್ರಮುಖ ಕಂಪನಿಗಳ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು. ಈ ಹಿಂದೆಯೇ ಜಾಕ್ ಮಾ ಭಾರತದಲ್ಲಿ ಹೂಡಿಕೆ ಮಾಡಲು ತಮಗೆ ಆಸಕ್ತಿ ಇದೆ ಎಂದು ಹೇಳಿದ್ದರು. ಇದೀಗ ಸ್ವತಃ ನರೇಂದ್ರ ಮೋದಿ ಅವರೇ ಆಹ್ವಾನ ನೀಡಿದ್ದು ಮುಂದೆ ಯಾವ ಬದಲಾವಣೆಗೆ ಕಾರಣವಾಗಲಿದೆ ಎಂಬುದನ್ನು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+