ಚಿತ್ರಗಳು; ಇಟಲಿಯಲ್ಲಿ ವಿಶ್ವನಾಯಕರನ್ನು ಭೇಟಿಯಾದ ಮೋದಿ
ವ್ಯಾಟಿಕನ್, ಅಕ್ಟೋಬರ್ 31; ಇಟಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿಯಾದರು. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಇಟಲಿ ಪ್ರವಾಸ ಕೈಗೊಂಡಿದ್ದಾರೆ.
ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ನಾಯಕರನ್ನು ಭೇಟಿಯಾಗಿದ್ದಾರೆ. ಈ ಕುರಿತು ಫೋಟೋಗಳನ್ನು ನರೇಂದ್ರ ಮೋದಿ ತಮ್ಮ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ಬರುವಂತೆ ಪೋಪ್ ಫ್ರಾನ್ಸಿಸ್ಗೆ ಆಹ್ವಾನವಿತ್ತ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಫ್ರೆಂಚ್ ಅಧ್ಯಕ್ಷ ಇಮಾನುಯೆಲ್ ಮಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸೇರಿದಂತೆ ವಿವಿಧ ನಾಯಕರನ್ನು ಭೇಟಿ ಮಾಡಿದರು.
ಇಟಲಿಯಲ್ಲಿ ಐರೋಪ್ಯ ಒಕ್ಕೂಟಗಳ ಜತೆ ಚರ್ಚೆ ನಡೆಸಿದ ಮೋದಿ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ಮೋದಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಡನ್ ಮೋದಿ ಹೆಗಲ ಮೇಲೆ ಕೈ ಹಾಕಿಕೊಂಡಿದ್ದು, ಇಬ್ಬರು ನಗುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
G20 Summit: ರೋಮ್ಗೆ ಬಂದಿಳಿದ ಪ್ರಧಾನಿ ಮೋದಿ
ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಸೆಪ್ಟೆಂಬರ್ 24ರಂದು ಮೊದಲ ಬಾರಿಗೆ ಶ್ವೇತಭವನದಲ್ಲಿ ಜೋ ಬೈಡನ್ ಭೇಟಿಯಾಗಿದ್ದರು. ಉಭಯ ನಾಯಕರ ಎರಡನೇಯ ಭೇಟಿ ಇದಾಗಿದೆ.
On the sidelines of the @g20org Rome Summit, PM @narendramodi interacts with various leaders. pic.twitter.com/7L3vbpRzUs
— PMO India (@PMOIndia) October 30, 2021
ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ಅಧ್ಯಕ್ಷ ಇಮಾನುಯೆಲ್ ಮಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋಗಳನ್ನು ಸಹ ಟ್ವೀಟ್ ಮಾಡಿದ್ದಾರೆ.
ರೋಮ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಇಟಲಿಗೆ ಆಗಮಿಸಿದ್ದಾರೆ. ಅಕ್ಟೋಬರ್ 30 ಮತ್ತು 31ರಂದು ಶೃಂಗ ಸಭೆ ನಡೆಯುತ್ತಿದೆ.
2020ರ ಡಿಸೆಂಬರ್‌ನಲ್ಲಿ ಇಟಲಿ G20 ಅಧ್ಯಕ್ಷ ಸ್ಥಾನವನ್ನು ಪಡೆದಿದೆ. ಜಿ-20 ಪ್ರಮುಖ ಜಾಗತಿಕ ವೇದಿಕೆಯಾಗಿದ್ದು ಅದು ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರನ್ನು ಒಗ್ಗೂಡಿಸುತ್ತದೆ. 1999 ರಿಂದ ಪ್ರತಿ ವರ್ಷ ಜಿ-20 ಶೃಂಗ ಸಭೆ ನಡೆಯುತ್ತಿದೆ.
ರೋಮ್‌ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಜಿ-20 ಸದಸ್ಯ ರಾಷ್ಟ್ರಗಳು, ಯುರೋಪಿಯನ್ ಯೂನಿಯನ್ ಮತ್ತು ಇತರ ಆಹ್ವಾನಿತ ದೇಶಗಳು ಮತ್ತು ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳ ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ.
ಪೋಪ್ ಭೇಟಿಯಾಗಿದ್ದರು; ಅಕ್ಟೋಬರ್ 30ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ವ್ಯಾಟಿಕನ್‌ನಲ್ಲಿ ಪೋಪ್ ಭೇಟಿಯಾಗಿದ್ದರು. ಅಪೋಸ್ಟೋಲಿಕ್ ಪ್ಯಾಲೇಸ್‌ನಲ್ಲಿ ಪೋಪ್ ಫ್ರಾನ್ಸಿಸ್ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು.
ಎರಡು ದಶಕಗಳ ನಂತರ ಭಾರತದ ಪ್ರಧಾನಮಂತ್ರಿ ಮತ್ತು ಪೋಪ್ ನಡುವಿನ ಮೊದಲ ಭೇಟಿ ಇದಾಗಿತ್ತು. ಜೂನ್ 2000ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೊನೆಯದಾಗಿ ವ್ಯಾಟಿಕನ್‌ಗೆ ಭೇಟಿ ನೀಡಿದ್ದರು ಮತ್ತು ಆಗಿನ ಪೋಪ್ 2ನೇ ಜಾನ್ ಪಾಲ್ ಭೇಟಿ ಮಾಡಿದ್ದರು.
ಭಾರತ ಮತ್ತು ಹೋಲಿ ಸೀ 1948ರಿಂದಲೇ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ ಸ್ನೇಹ ಸಂಬಂಧವನ್ನು ಹೊಂದಿವೆ. ಭಾರತವು ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಕ್ಯಾಥೋಲಿಕ್ ಜನಸಂಖ್ಯೆ ಹೊಂದಿರುವ ಸ್ಥಳವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಪೋಪ್ ಫ್ರಾನ್ಸಿಸ್‌ರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ. ಅದನ್ನು ಅವರು ಸಂತೋಷದಿಂದ ಸ್ವೀಕರಿಸಿದರು. ಪ್ರಧಾನಮಂತ್ರಿಗಳು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪರೋಲಿನ್‌ರನ್ನು ಕೂಡ ಭೇಟಿ ಮಾಡಿದರು.
ಇಂಧನ ಪರಿವರ್ತನೆ; ರೋಮ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ವೇಳೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದರು. ದ್ವಿಪಕ್ಷೀಯ ಸಭೆಯನ್ನು ನಡೆಸಿದರು. 2020ರ ನವೆಂಬರ್ 6 ರಂದು ಭಾರತ ಮತ್ತು ಇಟಲಿ ನಡುವೆ ವರ್ಧಿತ ಪಾಲುದಾರಿಕೆಗಾಗಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ನಂತರ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಹಂಚಿಕೊಂಡರು. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಶುದ್ಧ ಇಂಧನದ ಪರಿವರ್ತನೆಯನ್ನು ವೇಗಗೊಳಿಸುವ ಮಹತ್ವದ ವಿಷಯಗಳು ಒಳಗೊಂಡಂತೆ ಹಲವಾರು ವಲಯಗಳಲ್ಲಿ ಸಹಕಾರವನ್ನು ಬಲಪಡಿಸಲು ಚರ್ಚೆ ನಡೆಸಿದರು.