• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧೀಜಿ, ವಿವೇಕಾನಂದರ ಕನಸು ನನಸು ಮಾಡಿ: ಮೋದಿ

By Mahesh
|

ಸಿಡ್ನಿ, ನ.17: ಆಸ್ಟ್ರೇಲಿಯಾ ಪ್ರವಾಸ ನಿರತ ಭಾರತ ಪ್ರಧಾನಿ ಮೋದಿ ಅವರು ಬ್ರಿಸ್ಬೇನ್ ನಂತರ ಸಿಡ್ನಿಗೆ ಸೋಮವಾರ ಬೆಳಗ್ಗೆ ಆಗಮಿಸಿದ್ದಾರೆ. ಮೋದಿ ಅವರನ್ನು ಅನಿವಾಸಿ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಎಲ್ಲೆಡೆ 'ಮೋದಿ ಮೋದಿ' ಎಂಬ ಜಯಘೋಷ ಕೇಳಿ ಬರುತ್ತಿದೆ. ಸಿಡ್ನಿ ಸಿಟಿಯಲ್ಲಿ ಮೋದಿ ಅವರ ಕಾರ್ಯಕ್ರಮಗಳ ಅಪ್ಡೇಟ್ಸ್ ಈ ಪುಟದಲ್ಲಿ ನಿಮಗೆ ಸಿಗಲಿದೆ.

15.00: ಮೋದಿ ಭಾಷಣದ ಬಗ್ಗೆ ರೋರಿ ಮೆಡ್ ಕಾಫ್ ಅವರ ಪ್ರತಿಕ್ರಿಯೆ

14.35: ಆಸ್ಟ್ರೇಲಿಯನ್ನರಿಗೆ ವೀಸಾ ಆನ್ ಅರೈವಲ್ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಎರಡು ದೇಶಗಳ ನಡುವಿನ ಪ್ರವಾಸೋದ್ಯಮ ಅಭಿವೃದ್ಧಿ ನಮ್ಮ ಉದ್ದೇಶ ಎಂದಿದ್ದಾರೆ.

14.33: ವರ್ಕಿಂಗ್ ಡೇ ದಿನ ವಿಶೇಷ ರೈಲಿನಲ್ಲಿ ಇಲ್ಲಿಗೆ ಆಗಮಿಸಿರುವ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ದೇವರು ನೀಡಿರುವ ಸಮಯದಲ್ಲಿ ನಿಮ್ಮ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳುತ್ತೇನೆ.

14.32: ನಿಮ್ಮ ದೂರು, ಸಲಹೆಗಳನ್ನು ಇಲ್ಲಿ ನೀಡಿ

14.30: ಮಹಾತ್ಮಾ ಗಾಂಧೀಜಿ ಅವರ ಪುನರ್ ಆಗಮನವನ್ನು 2015ರಲ್ಲಿ ಸಂಭ್ರಮದಿಂದ ಆಚರಿಸಿ.

14.25: OCI ಹಾಗೂ PIO ನಡುವಿನ ಗೊಂದಲ ನಿವಾರಣೆಯಾಗಿದೆ.

14.20: ಕಾನೂನಿನ ಬಗ್ಗೆ ಜನರಿಗಿರುವ ಭಯವನ್ನು ಹೋಗಲಾಡಿಸಲು ಬೇಡದೆ ಇರುವ ಕಾನೂನು ಮುಕ್ತಗೊಳಿಸಿ ಜನರು ಶಾಂತಿಯಿಂದ ಬಾಳುವಂತೆ ಮಾಡುವ ಸಮಾಜ ಸೃಷ್ಟಿ ನನ್ನ ಗುರಿ.

14.15: 2020ರ ವೇಳೆಗೆ ಇಡೀ ವಿಶ್ವಕ್ಕೆ ಮಾನವ ಸಂಪನ್ಮೂಲ ಕೊರತೆ ಎದುರಾಗಲಿದೆ. ಆಗ ಜಗತ್ತು ಭಾರತದ ಕಡೆಗೆ ತಿರುಗಿ ನೋಡಬೇಕಿದೆ. ಭಾರತ ಬರೀ ಇಂಜಿನಿಯರುಗಳನ್ನು ರಫ್ತು ಮಾಡುವುದಿಲ್ಲ, ಶಿಕ್ಷಕರು, ನರ್ಸ್ ಗಳು, ವಿಜ್ಞಾನಿಗಳನ್ನು ಇಡೀ ವಿಶ್ವಕ್ಕೆ ಕಳಿಸಲು ಸಮರ್ಥವಾಗಿರುತ್ತದೆ.

14.12: ಭಾರತೀಯ ರೈಲ್ವೆಯಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆ ಎಫ್ ಡಿಐ ಸಾಧ್ಯವಾಗಿದೆ. ಭಾರತದ ಸಂಪರ್ಕ ಜೀವನಾಡಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದೆ.

14.10: ಭಾರತದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗುವಂತೆ ಅನಿವಾಸಿ ಭಾರತೀಯರಿಗೆ ಮೋದಿ ಕರೆ ನೀಡಿದ್ದಾರೆ.

14.05: ಮೇಕ್ ಇನ್ ಇಂಡಿಯಾದ ಉದ್ದೇಶ ಸರ್ವತೋಮುಖ ಅಭಿವೃದ್ಧಿಯಾಗಿದೆ.

14.00: ಸ್ವಚ್ಛತಾ ಅಭಿಯಾನ ಯೋಜನೆ ಸಾಕಾರಗೊಳಿಸುವುದು ಜನರ ಕೈಲಿದೆ. ಮಹಾತ್ಮಾ ಗಾಂಧಿಜೀ ಕಂಡ ಕನಸು ನನಸು ಮಾಡುವುದು ನಮ್ಮ ಕರ್ತವ್ಯವಾಗಿದೆ.

13.50: ಜನಧನ ಯೋಜನೆ ಬಗ್ಗೆ ವಿವರಿಸಿದ ಮೋದಿ

13.45: ಪ್ರಧಾನಿ ಜನಧನ ಯೋಜನೆ ಬಗ್ಗೆ ವಿವರಿಸಿದ ಮೋದಿ ಅವರು, ಸಾರ್ವಜನಿಕರು ಸರ್ಕಾರದೊಡನೆ ಕೈ ಜೋಡಿಸುವ ಅವಕಾಶ ಎಲ್ಲರಿಗೂ ಸಿಗಬೇಕಿದೆ ಎಂದರು.

13.42: ದೇಶದ ಯುವ ಶಕ್ತಿ ಬಗ್ಗೆ ಮೋದಿ ಮಾತು

13.40: ಕ್ರಿಕೆಟ್ ಇಲ್ಲದೆ ಎರಡು ದೇಶಗಳು ಬದುಕಲು ಸಾಧ್ಯವಿಲ್ಲ, ಎರಡು ದೇಶಕ್ಕೂ ತನ್ನದೇ ಆದ ಇತಿಹಾಸ, ಸಂಸ್ಕೃತಿಯ ಬುನಾದಿ ಇದೆ. ಸಮಾನ ಮನಸ್ಕ ಜನರಿದ್ದಾರೆ.

13.35: ದೇಶಕ್ಕಾಗಿ ಬದುಕಲು ಕಲಿಯಿರಿ ಎಂದು ಮೋದಿ ಕರೆ

13.30: ದೇಶಕ್ಕೆ ಸ್ವಾತಂತ್ಯ ಸಿಕ್ಕ ನಂತರ ಜನಿಸಿದ ನಾನು ಪ್ರಧಾನಿಯಾಗಿರುವುದು ನನ್ನ ಸೌಭಾಗ್ಯ, 28 ವರ್ಷಗಳ ನಂತರ ನಿಮ್ಮನ್ನು ಕಾಣಲು ಇಲ್ಲಿಗೆ ಬಂದಿರುವುದು ಸಂತೋಷ.

13.28: ಸ್ವಾಮಿ ವಿವೇಕಾನಂದ ಎರಡನೇ ಕನಸು ಕಂಡಿದ್ದರು. ನಾನು ನನ್ನ ಕಣ್ಣ ಮುಂದೆ ಭಾರತ ಮಾತೆಯ ರೂಪವನ್ನು ನೋಡುತ್ತೇನೆ. ಮತ್ತೆ ಭಾರತ ಮಾತೆ ವಿಶ್ವ ಗುರುವಾಗಿ ಹೊರಹೊಮ್ಮುತ್ತಾರೆ. ಭಾರತ ಮಾತೆ ಎಲ್ಲರನ್ನೂ ಮುನ್ನಡೆಸಬೇಕು ವಿವೇಕಾನಂದರ ಕನಸು ಸುಳ್ಳಾಗಲು ಸಾಧ್ಯವಿಲ್ಲ

13.25: ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅಭೂತಪೂರ್ವ ಭಾಷಣ ಮಾಡಿದ ನಂತರ ಸಿಡ್ನಿಯಲ್ಲಿ ಎನ್ನಾರೈಗಳ ಉದ್ದೇಶಿಸಿ ಮೋದಿ ಭಾಷಣ ಮಾಡಿದ್ದಾರೆ.

13.20: ಸಿಡ್ನಿಯಲ್ಲಿ ಮೋದಿ ಲೈವ್ ನೋಡಿ...

13.00: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಬ್ರೆಟ್ ಲೀ ಆಗಮನ.

12.45: ವೈಷ್ಣವ ಜನತೋ, ವಂದೇ ಮಾತರಂ ಗೀತಗಾಯನ, ಗುಜರಾತಿ ಗರ್ಬಾ ನೃತ್ಯ, ಪಂಜಾಬಿಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶನ

12.30: ಅಲ್ಫೋನ್ಸ್ ಅರೆನಾಗೆ ಪ್ರಧಾನಿ ಮೋದಿ ಆಗಮನ.

12.15: ಪ್ರಧಾನಿ ಮೋದಿ ಅವರಿಗೆ ಬೂಮೆರಾಂಗ್ ನೀಡಿದ ಆಸ್ಟ್ರೇಲಿಯಾದ ಮೂಲನಿವಾಸಿಗಳು.

12.10: ಮೋದಿಗೆ ಸಂಗೀತದ ಮೂಲಕ ಸ್ವಾಗತ.

11.15: ಅಲ್ಫೋನ್ಸ್ ಅರೆನಾದಲ್ಲಿ ಮೋದಿ ಆಗಮನಕ್ಕೂ ಮುನ್ನ ಫ್ಲಾಶ್ ಮಾಬ್ ಮೂಲಕ ಜನರ ಗಮನ ಸೆಳೆದ ತಂಡ. [ಬ್ರಿಸ್ಬೇನ್ ನಲ್ಲಿ ಮೋದಿ ಬಾಂಧವ್ಯ, ಬೆಸುಗೆ ]

10.55: ಅಲ್ಫೋನ್ಸ್ ಅರೆನಾದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಆಸ್ಟ್ರೇಲಿಯಾ ಹಾಗೂ ಭಾರತದ ಬಾಂಧವ್ಯದ ಸಂಕೇತವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿಡ್ನಿಯ ಬಿಜೆಪಿ ವಕ್ತಾರ ರಾಮ್ ಮಾಧವ್ ಹೇಳಿಕೆ

10.30: ಅಲ್ಫೋನ್ಸ್ ಅರೆನಾದಲ್ಲಿ ಜನರ ಸಂಭ್ರಮ.

9.35: ಮೋದಿ ಅವರಿಗೆ ಆಸ್ಟ್ರೇಲಿಯಾದ ಮೂಲ ನಿವಾಸಿಗಳು ಡ್ಯಾನ್ಸ್ ಮೂಲಕ ಸ್ವಾಗತ.

8.30 ಸಿಡ್ನಿಗೆ ಆಗಮಿಸಿದ ಮೋದಿ ಅವರಿಗೆ ಸ್ವಾಗತ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Like the Indian Americans in US, Indians in Australia too are eager to meet their Prime MInister. While some claim to have sleepless nights with excitement, there are others who are planning to reach the stadium early to grab a seat closest to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more