ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿರುವುದು ಯಾಕೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದರಲ್ಲಿ ನರೇಂದ್ರ ಮೋದಿ ಸರ್ಕಾರ ಮೊದಲಿನಿಂದಲೂ ನಿರಂತರ ಯತ್ನ ಮಾಡಿಕೊಂಡೆ ಬಂದಿದೆ.

ಸೌದಿ ಅರೇಬಿಯಾದ ಆರನೇ ದೊರೆ ಅಬ್ದುಲ್ ಬಿನ್ ಅಜಿಜ್ ಸಾವನ್ನಪ್ಪಿದಾಗ ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ರಿಯಾದ್ ಗೆ ಭೇಟಿ ನೀಡಿದ್ದರು. ಅಲ್ಲದೆ ಭಾರತ ಸರ್ಕಾರ ಶೋಕಾಚರಣೆಯ ಬಗ್ಗೆಯೂ ಹೇಳಿತ್ತು. [ಅಳಲು ತೋಡಿಕೊಂಡ ಕನ್ನಡಿಗನಿಗೆ ಸೌದಿಯಲ್ಲಿ ಜೈಲುವಾಸ]

ಇದೀಗ ನರೇಂದ್ರ ಮೋದಿ ಏಪ್ರಿಲ್ 2 ಮತ್ತು 3ರಂದು ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಎರಡು ದೇಶಗಳ ಅರ್ಥ ವ್ಯವಸ್ಥೆ ಮತ್ತು ಭದ್ರತಾ ದೃಷ್ಟಿಯಿಂದ ಈ ಭೇಟಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಮೋದಿ ಯಾವ ಕಾರಣಗಳನ್ನು ಇಟ್ಟುಕೊಂಡು ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಅವುಗಳೆಲ್ಲದರ ಮೇಲೆ ಒಂದು ನೋಟ ಇಲ್ಲಿದೆ. [ಸೌದಿಗೆ ಆಧುನಿಕ ಟಚ್ ನೀಡಿದ್ದ ದೊರೆ ಅಬ್ದುಲ್ಲಾ ಇನ್ನಿಲ್ಲ]

ಭಯೋತ್ಪಾದನೆ ನಿಗ್ರಹ

ಭಯೋತ್ಪಾದನೆ ನಿಗ್ರಹ

ಸೌದಿ ಅರೇಬಿಯಾ ಸಹ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಲೇ ಇದೆ. ಸೌದಿ ಅರೆಬಿಯಾ ಮತ್ತು ಯುಎಸ್ ಜಂಟಿಯಾಗಿ ಕೆಲ ಕಾರ್ಯಾಚರಣೆಯನ್ನು ಕೈಗೊಂಡಿದ್ದನ್ನು ನೋಡಿದ್ದೇವೆ, ಲಶ್ಕರ್-ಇ-ತೊಯ್ಬಾ ಮತ್ತು ತಾಲಿಬಾನ್ ನ ಅಲ್-ಖೈದಾ ಸಂಘಟನೆಗಳೊಂದಿಗೆ ಭಾರತೀಯರ ಸಂಪರ್ಕ ಈ ಬಗ್ಗೆ ಹುಟ್ಟಿಕೊಂಡ ಅನುಮಾನಗಳನ್ನು ಸಹ ಬಗೆಹರಿಸಕೊಳ್ಳಬೇಕಾಗಿದೆ.

 ಮುಂಬೈ ದಾಳಿ

ಮುಂಬೈ ದಾಳಿ

26/11 ರ ಮುಂಬೈ ದಾಳಿಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಸಹ ಮೋದಿ ಬಗೆಹರಿಸಲಿದ್ದಾರೆ. ಸೌದಿ ಅರೇಬಿಯಾದಲ್ಲಿ ಉಗ್ರರು ಆಶ್ರಯ ಪಡೆದುಕೊಳ್ಳುತ್ತಿರುವ ಬಗೆಗಿನ ಕೆಲ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ನಿರೀಕ್ಷೆ ಇದೆ.

 ಐಎಸ್ಐಎಸ್ ಆತಂಕ

ಐಎಸ್ಐಎಸ್ ಆತಂಕ

ಇವುಗಳ ಜತೆಗೆ ಐಎಸ್ಐಎಸ್ ಸಂಘಟನೆಯ ಬೆಳವಣಿಗೆ. ಅದರಿಂದ ಎದುರಾಗುತ್ತಿರುವ ಆತಂಕ ಮತ್ತು ಪರಿಹಾರ ಕ್ರಮಗಳ ಬಗೆಗಿನ ಮಾತುಕತೆಯೂ ನಡೆಯಲಿದೆ.

 ಉಗ್ರ ನಿಗ್ರಹ

ಉಗ್ರ ನಿಗ್ರಹ

ಸೌದಿ ಅರೇಬಿಯಾ, ಭಾರತ ಸೇರಿದಂತೆ ವಿವಿಧ ದೇಶಗಳ ಭದ್ರತೆಗೆ ಮತ್ತು ಆತಂಕಕ್ಕೆ ಕಾರಣವಾಗಿರುವ ಐಎಸ್ಐಎಸ್ ಸಂಘಟನೆಯ ಉಗ್ರ ಕಾರ್ಯಾಚರಣೆ ತಡೆ ಬಗ್ಗೆಯೂ ಮಾತುಕತೆ ನಡೆಯಲಿದೆ.

 ಆರ್ಥಿಕ ಒಪ್ಪಂದಗಳು

ಆರ್ಥಿಕ ಒಪ್ಪಂದಗಳು

ಸೌದಿ ಅರೇಬಿಯಾದ ದೊರೆ ಕಿಂಗ್ ಸಲ್ಮಾನ್ ಅವರೊಂದಿಗೆ ನರೇಂದ್ರ ಮೋದಿ ಬಂಡವಾಳ ಹೂಡಿಕೆ ಬಗ್ಗೆಯೂ ಮಾತನಾಡಲಿದ್ದಾರೆ.

 ತೈಲ ಆಮದು

ತೈಲ ಆಮದು

ಭಾರತ ಶೇ. 20 ಕ್ಕೂ ಅಧಿಕ ತೈಲವನ್ನು ಸೌದಿ ಅರೇಬಿಯಾದ ಬಳಿಯೇ ಖರೀದಿ ಮಾಡುತ್ತಿದೆ. ಭಾರತದೊಂದಿಗೆ ವ್ಯಾಪಾರ ವಾಣಿಜ್ಯ ಸಂಬಂಧ ಇಟ್ಟುಕೊಂಡ ನಾಲ್ಕು ಪ್ರಮುಖ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾವೂ ಒಂದು.

 ಗಲ್ಫ್ ಎಕಾನಮಿ

ಗಲ್ಫ್ ಎಕಾನಮಿ

ಗಲ್ಫ್ ಎಕಾನಮಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ನಡುವಿನ ಪರಿಹಾರೋಪಾಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

 ಭಾರತೀಯರ ಭದ್ರತೆ

ಭಾರತೀಯರ ಭದ್ರತೆ

ಭಾರತದ ಸುಮಾರು 8 ಮಿಲಿಯನ್ ಗೂ ಅಧಿಕ ಜನರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ,ಮೂಲದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi visits Saudi Arabia on April 2 and 3. It is an important visit on both counts- security and economy. One however has to bear in mind that this time around the situation may not be exactly the same as Saudi Arabia is facing issues of its own which range from the problem of extremism and also falling oil prices.
Please Wait while comments are loading...