ಡೊನಾಲ್ಡ್ ಟ್ರಂಪ್ ನೆಪದಲ್ಲಿ ವಿಷ್ಣು ದೇವಾಲಯಕ್ಕೆ ಪ್ರದಕ್ಷಿಣೆ

Posted By:
Subscribe to Oneindia Kannada

ಮೇರಿಲ್ಯಾಂಡ್ ನ ಲ್ಯಾನ್ ಹ್ಯಾಮ್ ನಲ್ಲಿರುವ ಶ್ರೀ ಶ್ರೀ ಶಿವ ವಿಷ್ಣು ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಅವರನ್ನು ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದ ವೇಳೆ ಜರುಗುವ ಪ್ರಾರ್ಥನಾ ಸಭೆಗೆ ಆಹ್ವಾನಿಸಲಾಗಿದೆ.

ಭಾರತೀಯ ನಿವಾಸಿಗಳಿಗೆ ದೂರದ ಮೇರಿಲ್ಯಾಂಡಿನಲ್ಲಿರುವ ಶ್ರೀ ಶ್ರೀ ಶಿವ ವಿಷ್ಣು ದೇವಾಲಯ ಅಷ್ಟಾಗಿ ಪರಿಚಯವಿಲ್ಲದಿರಬಹುದು. ಆದರೆ, ವಾಷಿಂಗ್ಟನ್, ವರ್ಜೀನಿಯಾ ಹಾಗೂ ಮೇರಿಲ್ಯಾಂಡ್ ಗಳನ್ನೊಳಗೊಂಡಿರುವ ವಾಷಿಂಗ್ಟನ್ ಡಿಸಿಯ ಸಮಸ್ತ ಭಾರತೀಯ ಸಂಜಾತ ಹಿಂದೂಗಳಿಗೆ ಈ ದೇಗುಲ ಚಿರಪರಿಚಿತ.

ಹಾಗೆ ನೋಡಿದರೆ, ಈ ಪ್ರಾಂತ್ಯದಲ್ಲಿ ಅನೇಕ ಹಿಂದೂ ದೇಗುಲಗಳಿವೆ. ಆದರೆ, ಅವುಗಳಲ್ಲಿ ಶ್ರೀ ಶ್ರೀ ಶಿವ ವಿಷ್ಣು ದೇಗುಲ ಭಾರೀ ಪ್ರಸಿದ್ಧಿ. ವೀಕೆಂಡ್ ಬಂತೆಂದರೆ, ಇಲ್ಲಿನ ಹಿಂದೂಗಳು ಈ ದೇಗುಲಕ್ಕೆ ತಪ್ಪದೇ ಬರುತ್ತಾರೆ. ಅಲ್ಲದೇ ಇಲ್ಲಿನ ಟೆಕ್ಕಿಗಳೂ, ನಾನ್ ಟೆಕ್ಕಿಗಳೂ ಇಲ್ಲಿ ಬಂದು ಉಚಿತ ಸೇವೆ ಮಾಡುತ್ತಾರೆ.ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿ ನಿಮಗಾಗಿ...

(ಚಿತ್ರ ಕೃಪೆ: ssvt.org)

ಪುಟ್ಟ ರೂಮಿನಲ್ಲಿ ಆರಾಧನೆ

ಪುಟ್ಟ ರೂಮಿನಲ್ಲಿ ಆರಾಧನೆ

ಈ ದೇಗುಲ ನಿರ್ಮಾಣವಾಗಿದ್ದು 1988ರಲ್ಲಿ. ಆದರೆ, ಅದಕ್ಕೂ ಮುನ್ನ ಕೆಲವೇ ಕೆಲವು ಭಕ್ತರು ಇಲ್ಲಿ ಪುಟ್ಟ ಕೊಠಡಿಗಳನ್ನು ನಿರ್ಮಿಸಿಕೊಂಡು ದೇವರ ಪ್ರಾರ್ಥನೆ ಮಾಡುತ್ತಿದ್ದರು.

ದೇಗುಲಕ್ಕೆ ನಾಂದಿ

ದೇಗುಲಕ್ಕೆ ನಾಂದಿ

ನಿಧಾನವಾಗಿ, ಈ ಪ್ರಾರ್ಥನೆಗಳಿಗೆ ಹತ್ತಿರದ ಪ್ರಾಂತ್ಯಗಳಲ್ಲಿರುವ ಹಿಂದೂಗಳೂ ಬರಲಾರಂಭಿಸಿದರು. ಹಂತ ಹಂತವಾಗಿ ಈ ದೇಗುಲ ಪ್ರಸಿದ್ಧಿ ಪಡೆಯುತ್ತಾ ಸಾಗಿತು. ಸ್ಥಳೀಯರ ಸಹಭಾಗಿತ್ವದಿಂದ ದೇವಾಲಯದ ನಿರ್ಮಾಣಕ್ಕೆ ನಾಂದಿ ಹಾಡಲ್ಪಟ್ಟಿತು.

ವೈವಿಧ್ಯಯಮ ವಾಸ್ತುಶಿಲ್ಪ

ವೈವಿಧ್ಯಯಮ ವಾಸ್ತುಶಿಲ್ಪ

ಈ ದೇಗುಲದ ವಾಸ್ತುಶಿಲ್ಪದಲ್ಲಿ ಮಾಯನ್, ಪಲ್ಲವ, ವಿಜಯನಗರ, ಕೇರಳ ಹಾಗೂ ದಕ್ಷಿಣ ಕನ್ನಡ ರಾಜರ ಕಾಲದ ಶೈಲಿಗಳು ಅಡಕಗೊಂಡಿವೆ.

ಸರ್ವ ದೈವ ಸನ್ನಿಧಿ ಸಂಗಮ

ಸರ್ವ ದೈವ ಸನ್ನಿಧಿ ಸಂಗಮ

ಈ ಬೃಹತ್ ದೇಗುಲದಲ್ಲಿ ಶಿವ, ವಿಷ್ಣು, ದುರ್ಗಾ, ಅಯ್ಯಪ್ಪ, ಲಕ್ಷ್ಮಿ, ಕೃಷ್ಣ , ಭೂದೇವಿ, ರಾಮ ಹಾಗೂ ಹನುಮಂತನ ದೇಗುಲಗಳಿವೆ. ಈ ಎಲ್ಲಾ ದೇಗಲಗಳೂ ಒಟ್ಟಿಗೇ ನಿರ್ಮಾಣವಾದದ್ದಲ್ಲ. 1999ರಿಂದ 2002ರ ಅವಧಿಯಲ್ಲಿ ಹಂತ ಹಂತವಾಗಿ ನಿರ್ಮಿಸಲಾಗಿದೆ.

ನಾನಾ ಸಾಂಸ್ಕೃತಿಕ ಚಟುವಟಿಕೆ

ನಾನಾ ಸಾಂಸ್ಕೃತಿಕ ಚಟುವಟಿಕೆ

2003ರಲ್ಲಿ ಈ ದೇಗುಲದಲ್ಲಿ ಹೊಸದಾಗಿ ಜೀಮೂತವಾಹನ ಸನ್ನಿಧಿಯನ್ನೂ ನಿರ್ಮಿಸಲಾಗಿದೆ. ಧಾರ್ಮಿಕ ಚಟುವಟಿಕೆಗಳಲ್ಲದೆ, ವಿದ್ಯಾಭ್ಯಾಸ, ಸಂಗೀತ, ಸಾಹಿತ್ಯ ಸೇವೆಗಳನ್ನೂ ಈ ದೇಗುಲ ಒದಗಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The official invitation to priest of Sri Sri Shiva Vishnu temple of Maryland has attracted the attension of several hindus in India. Here are some facts related to the temple.
Please Wait while comments are loading...