ಕೆನಡಾದಲ್ಲೂ ನಿಗೂಢ ಸಾಧನ ಹಾರಾಟ: ಹೊಡೆದುರಳುಸಿದ ಯುಎಸ್ ಫೈಟರ್ ಜೆಟ್‌ಗಳು

ಯುಎಸ್‌ನಲ್ಲಿ ನಿಗೂಢ ಸಾಧನವನ್ನು ಯುಎಸ್ ಫೈಟರ್ ಜೆಟ್‌ಗಳು ಹೊಡೆದುರುಳಿಸಿವೆ.

ಯುಎಸ್‌ನಲ್ಲಿ ಶಂಕಿತ ಚೀನಾದ ಬೇಹುಗಾರಿಕಾ ಬಲೂನ್ ಪತ್ತೆಯಾದ ಬಳಿಕ ಮತ್ತೊಂದು ನಿಗೂಢ ಸಾಧನ ಕೆನಡಾದ ವಾಯುಪ್ರದೇಶದಲ್ಲಿ ಪತ್ತೆಯಾಗಿದ್ದು ಯುಎಸ್‌ ಪೈಲೆಟ್ ಪಡೆ ಅದನ್ನು ಹೊಡೆದುರುಳಿಸಿದೆ. ಕೆನಡಾದೊಂದಿಗಿನ ಜಂಟಿ ಕಾರ್ಯಾಚರಣೆಯಲ್ಲಿ ಯುಎಸ್ ಫೈಟರ್ ಜೆಟ್‌ಗಳು ಅಲಾಸ್ಕಾದಲ್ಲಿರುವ ಯುಕಾನ್‌ನಲ್ಲಿ ಗುರುತಿಸಲಾಗದ ನಿಗೂಢ ಸಾಧನವನ್ನು ಹೊಡೆದುರುಳಿಸಿವೆ. ಕಳೆದ ವಾರ ಶಂಕಿತ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಯುಎಸ್ ಹೊಡೆದುರುಳಿಸಿತ್ತು. ಬಳಿಕ ಯುಎಸ್ ಮಿಲಿಟರಿ ಈ ದಾಳಿಯನ್ನು ಮಾಡಿದೆ. ಆಕಾಶದಲ್ಲಿ ಪತ್ತೆಯಾದ ಅನುಮಾನಾಸ್ಪದ ವಸ್ತುವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಸಂಗ್ರಹವಾಗಬೇಕಿದೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಅದನ್ನು ಹೊಡೆದುರುಳಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ. ಕೆನಡಾ ಮತ್ತು ಅಮೆರಿಕದ ವಿಮಾನಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಯುಎಸ್ ಎಫ್ -22 ನಿಗೂಢ ಸಾಧನವನ್ನು ಹೊಡೆದುರುಳಿಸಿದೆ ಎಂದು ಪಿಎಂ ಟ್ರುಡೊ ಟ್ವೀಟ್ ಮಾಡಿದ್ದಾರೆ. ಕೆನಡಾದ ಮಿಲಿಟರಿ ವಸ್ತುವಿನ ಅವಶೇಷಗಳನ್ನು ಸಂಗ್ರಹಿಸಿ ವಿಶ್ಲೇಷಿಸುತ್ತಿದೆ.

Mysterious device find in Canada: 2nd Strike In 2 Days

ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರೊಂದಿಗೆ ಮಾತನಾಡಿರುವುದಾಗಿ ಕೆನಡಾ ಪ್ರಧಾನಿ ತಿಳಿಸಿದ್ದಾರೆ. ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಅವರು ನಾನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ ಆಸ್ಟಿನ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾವು ಯಾವಾಗಲೂ ನಮ್ಮ ಸಾರ್ವಭೌಮತ್ವವನ್ನು ಒಗ್ಗಟ್ಟಿನಿಂದ ರಕ್ಷಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಶ್ವೇತಭವನ ಮತ್ತು ಕೆನಡಾದ ಪ್ರಧಾನ ಮಂತ್ರಿಗಳು NORAD ಮತ್ತು US ನಾರ್ಥರ್ನ್ ಕಮಾಂಡ್ ತೆಗೆದುಕೊಂಡ ತ್ವರಿತ ಮತ್ತು ಪರಿಣಾಮಕಾರಿ ಕ್ರಮವನ್ನು ಅವರು ಶ್ಲಾಘಿಸಿದ್ದಾರೆ, ಜೊತೆಗೆ ಅವರು ಯಾವಾಗಲೂ ತಮ್ಮ ವಾಯುಪ್ರದೇಶವನ್ನು ಸುರಕ್ಷಿತವಾಗಿಡು ಕಾರ್ಯ ನಿರ್ವಹಿಸುತ್ತಾರೆ, ಅದರ ಬಗ್ಗೆ ನಿಗಾ ಇಡುತ್ತಾರೆ ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+