Earthquake: ಮ್ಯಾನ್ಮರ್‌ನಲ್ಲಿ ಮತ್ತೊಮ್ಮೆ ಕಂಪಿಸಿದ ಭೂಮಿ: ಸರಣಿ ಭೂಕಂಪನಕ್ಕೆ ಬೆಚ್ಚಿಬಿದ್ದ ಜನ
ಮ್ಯಾನ್ಮರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಭೀತಿ ಜನರಿಂದ ಮಾಸುವ ಮುನ್ನವೇ ಮತ್ತೊಮ್ಮೆ ಭೂಮಿ ಅಲುಗಾಡಿ. ಶುಕ್ರವಾರ 7.7 ತೀವ್ರತೆಯಲ್ಲಿ ಮ್ಯಾನ್ಮರ್‌ನಲ್ಲಿ ಭೂಕಂಪನ ಸಂಭವಿಸಿದ್ದು ಇಂದು (ಮಾರ್ಚ್ 30) ಮತ್ತೆ ಭೂಕಂಪವಾಗಿದೆ.
ಶುಕ್ರವಾರ ಎರಡು ಬಾರಿ ಅಲುಗಾಡಿದ ಭೂಮಿ ಇಂದು ಮತ್ತೆ ನಡುಗಿದೆ. ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ಮಂಡಲೆ (Mandalay in Myanmar) ನಗರದ ಬಳಿ 5.1 ತೀವ್ರತೆಯ ಭೂಕಂಪ ಇಂದು ಸಂಭವಿಸಿದೆ. ಶುಕ್ರವಾರದ ವಿನಾಶಕಾರಿ ಭೂಕಂಪದ ನಂತರ ಸಂಭವಿಸಿದ ಭೂಕಂಪಗಳ ಸರಣಿಯಲ್ಲಿ ಮ್ಯಾನ್ಮರ್ ನಲುಗಿ ಹೋಗಿದೆ.

ಮ್ಯಾನ್ಮರ್‌ನಲ್ಲಿ ಶುಕ್ರವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಕ್ಕುರುಳಿವೆ. ಇಲ್ಲಿಯವರೆಗೆ 1,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 3,400 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಹೀಗಿರುವಾಗ ಇಂದು ಮತ್ತೆ ಮ್ಯಾನ್ಮರ್‌ನಲ್ಲಿ ಭೂಕಂಪನವಾಗಿದ್ದು ಜನ ಪ್ರಾಣವನ್ನೇ ಅಂಗೈಯಲ್ಲಿ ಹಿಡಿದುಕೊಮಡು ಕುಳಿತುಕೊಳ್ಳುವಂತಾಗಿದೆ.
ಮಾ. 28ರಂದು ಮ್ಯಾನ್ಮರ್‌ನಲ್ಲಿ ಭಯಾನಕ ಭೂಕಂಪದ
ಶುಕ್ರವಾರದಂದು (ಮಾ. 28) ಮ್ಯಾನ್ಮಾರ್ ನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪಕ್ಕೆ ಸ್ಥಳೀಯ ಜನ ದಿಗ್ಬ್ರಾಂತರಾಗಿದ್ದಾರೆ. ರಾಜಧಾನಿ ಬ್ಯಾಂಕಾಕ್ ಸೇರಿದಂತೆ ಹಲವಾರು ನಗರಗಳಲ್ಲಿ ಭೂಕಂಪವಾಗಿದ್ದು ಬಹುಮಹಡಿ ಕಟ್ಟಡಗಳು ನೆಲಕ್ಕಚ್ಚಿವೆ. ಅನೇಕ ಕಟ್ಟಡಗಳು ಧರೆಗುರುಳಿವೆ. ಅನೇಕ ರಸ್ತೆಗಳು ಹಾಳಾಗಿ ಹೋಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ನೂರಾರು ಜನರು ಗಾಯಗೊಂಡಿದ್ದು ನೂರಾರು ಜನ ಕಾಣೆಯಾಗಿದ್ದಾರೆ.
ಈಗಾಗಲೇ ಹಲವು ರಕ್ಷಣಾ ತಂಡಗಳು ಗಾಯಗೊಂಡವರು ಹಾಗೂ ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆಸಿವೆ. ಇದಕ್ಕೆ ಭಾರತ ಕೂಡ ಸಹಾಯಹಸ್ತ ಚಾಚಿದೆ. ಮ್ಯಾನ್ಮಾರ್ ಜನರ ರಕ್ಷಣೆಗಾಗಿ ವಿಶೇಷ ವಿಮಾನದೊಂದಿಗೆ ಭಾರತೀಯ ರಕ್ಷಣಾ ತಂಡ ಮ್ಯಾನ್ಮರ್‌ಗೆ ತೆರಳಿದೆ.
ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದೆ. ಅನೇಕ ಸಾವು-ನೋವುಗಳು ವರದಿಯಾಗಿವೆ. ಭೂಕಂಪಕ್ಕೆ ಸಂಬಂಧಪಟ್ಟ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ದೃಶ್ಯಗಳು ಭಯಾನಕವಾಗಿವೆ.
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1600ಕ್ಕೆ ಏರಿಕೆಯಾಗಿದೆ. ಭಾನುವಾರ ಮಧ್ಯ ಮ್ಯಾನ್ಮಾರ್‌ನ ಸಾಗೈಂಗ್ ನಗರದ ವಾಯುವ್ಯಕ್ಕೆ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೇಶದ ದೊಡ್ಡ ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೇ ಸೇರಿದಂತೆ ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ, ಇದು ಭೂಕಂಪದ ಕೇಂದ್ರಬಿಂದುವಿಗೆ ಹತ್ತಿರದಲ್ಲಿದ್ದು, ಪ್ರಕೃತಿ ವಿಕೋಪದಿಂದ ಭಾರೀ ವಿನಾಶ ಕಂಡಿದೆ. ಮಂಡಲೇ ಪ್ರದೇಶದವೊಂದರಲ್ಲಿಯೇ ಭೂಕಂಪಕ್ಕೆ 694 ಮಂದಿ ಮೃತಪಟ್ಟಿದ್ದು, 1,670 ಜನರು ಗಾಯಗೊಂಡಿದ್ದಾರೆ ಎಂದು ಜುಂಟಾ ಮಾಹಿತಿ ತಂಡ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications