ಮುಸ್ಲಿಂ ಆಧ್ಯಾತ್ಮಿಕ ನಾಯಕ ಅಗಾ ಖಾನ್ ನಿಧನ

ಪ್ರಪಂಚದ ಲಕ್ಷಾಂತರ ಮುಸ್ಲಿಮರ ಆಧ್ಯಾತ್ಮಿಕ ನಾಯಕ, ದೇಣಿಗೆಗಳ ಮೂಲಕ ಮನೆ, ಶಾಲೆ, ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದ ಮಹಾನ್ ನಾಯಕ ಅಗಾ ಖಾನ್ IV ಮಂಗಳವಾರ ನಿಧನರಾದರು. 88 ವರ್ಷದ ಅಗಾ ಖಾನ್ ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಕೊನೆಯುಸಿರೆಳೆದರು. ಅಗಾ ಖಾನ್ ಅಭಿವೃದ್ಧಿ ನೆಟ್‌ವರ್ಕ್‌ ಮತ್ತು ಇಸ್ಲಾಮಿಕ್ ಧಾರ್ಮಿಕ ಸಮುದಾಯ ಈ ಕುರಿತು ಪ್ರಕಟಣೆ ಹೊರಡಿಸಿದೆ.

20ನೇ ವಯಸ್ಸಿನಲ್ಲಿಯೇ ಅಗಾ ಖಾನ್ ಲಕ್ಷಾಂತರ ಮುಸ್ಲಿಮರ ಆಧ್ಯಾತ್ಮಿಕ ನಾಯಕರಾದರು. ಹಾರ್ವರ್ಡ್‌ನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಜಗತ್ತಿನ ಲಕ್ಷಾಂತರ ಮುಸ್ಲಿಮರ ಆಧ್ಯಾತ್ಮಿಕ ನಾಯಕನಾದರು. ಕೋಟ್ಯಾಂತರ ರೂಪಾಯಿ ದೇಣಿಗೆಗಳ ಮೂಲಕ ಬೃಹತ್ ಸಾಮ್ಯಾಜ್ಯವನ್ನು ಕಟ್ಟಿದರು.

Muslims Spiritual Leader And Philanthropist Aga Khan Dies

ಆಗಾ ಖಾನ್ ಅವರು ದೇಣಿಗೆಗಳ ನೆರವಿನಿಂದ ಅಭಿವೃದ್ಧಿಶೀಲ ದೇಶಗಳಲ್ಲಿ ಮನೆ, ಆಸ್ಪತ್ರೆ ಮತ್ತು ಶಾಲೆಗಳ ನಿರ್ಮಾಣವನ್ನು ಮಾಡಿದರು. ಬೇಗಂ ಸಮ್ಲಿನಾ ಅಗಾ ಖಾನ್ ಮತ್ತು ಬೇಗಂ ಇನಾರಾ ಅಗಾ ಖಾನ್‌ ಅವರನ್ನು ವಿವಾಹವಾಗಿದ್ದ ಅವರು ಮೂವರು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಅಗಾ ಖಾನ್ IV ಶಿಯಾ ಇಸ್ಮಾಯಿಲ್ ಮುಸ್ಲಿಮರ 49ನೇ ಅನುವಂಶಿಕ ಇಮಾಮ್ ಆಗಿದ್ದರು. ಅಜ್ಜ ಅಗಾ ಖಾನ್ III, ಮಗನನ್ನು ಬಿಟ್ಟು ಅಗಾ ಖಾನ್ IV ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದರು. ದಶಕಗಳಲ್ಲಿಯೇ ಯಶಸ್ವಿ ಉದ್ಯಮಿಯಾಗಿ ಸಮಾಜ ಸೇವಕರಾಗಿ ಹೊರಹೊಮ್ಮಿದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶಾಹ್ ಕರೀ ಅಲ್ ಹುಸೇನಿ ಎಂಬ ರಾಜಕುಮಾರನಾಗಿ ಜನಿಸಿದ ಅಗಾ ಖಾನ್ ತಮ್ಮ ಪ್ರಾರಂಭಿಕ ವರ್ಷಗಳನ್ನು ಕೀನ್ಯಾದಲ್ಲಿ ಕಳೆದರು. 6 ದಶಕಗಳ ಕಾಲ ವಿಶ್ವದ ಇಸ್ಮಾಯಿಲ್ ಮುಸ್ಲಿಂ ಸಮಯದಾಯವನ್ನು ಅಗಾ ಖಾನ್ IV ಮುನ್ನಡೆಸಿದರು. ಸಂಪತ್ತನ್ನು ದಾನಧರ್ಮಕ್ಕೆ ಮೀಸಲಿಟ್ಟು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಮನೆಗಳ ನಿರ್ಮಾಣಗಳನ್ನು ಬೆಂಬಲಿಸಿದರು.

ಅಗಾ ಖಾನ್ IV ಅವರ ಉತ್ತರಾಧಿಕಾರಿ ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ. ಆದರೆ ಇದುವರೆಗೂ ಉತ್ತರಾಧಿಕಾರಿ ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಆಗಾ ಖಾನ್ ಅಭಿವೃದ್ಧಿ ಜಾಲತಾಣದಲ್ಲಿ ಮಾಹಿತಿ ನೀಡಲಾಗಿದೆ.

ಅಗಾ ಖಾನ್ ಕುರಿತ ಸಂಗತಿಗಳು: ಅಗಾ ಖಾನ್ 15 ಮಿಲಿಯನ್ ಇಸ್ಮಾಯಿಲಿ ಮುಸ್ಲಿಮರ 49ನೇ ಪರಂಪರೆಯ ಇಮಾಮ್ ಆಗಿದ್ದರು. ಇದು ಶಿಯಾ ಇಸ್ಲಾಂನ ಒಂದು ಶಾಖೆ. ಅವರು ಪ್ರವಾದಿ ಮುಹಮ್ಮದ್ ಅವರ ನೇರ ವಂಶಸ್ಥರಾಗಿದ್ದರು. 1936 ಡಿಸೆಂಬರ್ 13 ರಂದು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಜನಿಸಿದ ಅವರು ತಮ್ಮ ಆರಂಭಿಕ ವರ್ಷಗಳನ್ನು ಕೀನ್ಯಾದ ನೈರೋಬಿಯಲ್ಲಿ ಕಳೆದರು.

ನಂತರ ಅವರು ಪ್ರತಿಷ್ಠಿತ ಲೆ ರೋಸೆ ಶಾಲೆಯಲ್ಲಿ ಓದಿ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಇತಿಹಾಸವನ್ನು ಅಧ್ಯಯನ ಮಾಡಿದರು. 1957ರಲ್ಲಿ 20ನೇ ವಯಸ್ಸಿನಲ್ಲಿ ಅವರು ತಮ್ಮ ತಾತ, ಸರ್ ಸುಲ್ತಾನ್ ಮಹಮದ್ ಶಾ ಆಗಾ ಖಾನ್ ಅವರಿಂದ ಇಮಾಮ್ ಆಗಿ ಆಯ್ಕೆಯಾದರು, ತಮ್ಮ ಮಗ ಪ್ರಿನ್ಸ್ ಅಲಿ ಖಾನ್ ಬದಲು ಅಗಾ ಖಾನ್‌ ಅವರನ್ನು ಆಯ್ಕೆ ಮಾಡಿದರು.

1967ರಲ್ಲಿ ಅವರು ಅಗಾ ಖಾನ್ ಅಭಿವೃದ್ಧಿ ನೆಟ್‌ವರ್ಕ್ ಸ್ಥಾಪಿಸಿದರು. ಇದರಲ್ಲಿ 80,000 ಉದ್ಯೋಗಿಗಳಿದ್ದಾರೆ. ಆಫ್ರಿಕಾ ಮತ್ತು ಏಷ್ಯಾದ ಅಭಿವೃದ್ಧಿ ಹೊಂದದ ಪ್ರದೇಶಗಳಲ್ಲಿ ಶಾಲೆಗಳು, ಆಸ್ಪತ್ರೆಗಳು ನಿರ್ಮಿಸುವುದು ಮತ್ತು ವಿದ್ಯುತ್ ಒದಗಿಸುವ ಕಾರ್ಯಗಳನ್ನು ಇದು ಮಾಡುತ್ತದೆ. ಬಾಂಗ್ಲಾದೇಶ, ತಜಿಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಆಸ್ಪತ್ರೆಗಳಿಗೂ ಹಣಕಾಸು ನೆರವು ಒದಗಿಸಿದರು.

ಅಗಾ ಖಾನ್ ನೇತೃತ್ವದಲ್ಲಿ ಆಗಾ ಖಾನ್ ಟ್ರಸ್ಟ್ ಫಾರ್ ಕಲ್ಚರ್ ಸ್ಥಾಪನೆ ಮಾಡಲಾಗಿದೆ. ಹಲವು ಪ್ರಮುಖ ಪುನರ್ ಸ್ಥಾಪನಾ ಯೋಜನೆಗಳಿಗೆ ಇದರ ಮೂಲಕ ಹಣಕಾಸು ನೆರವು ನೀಡಲಾಗಿದೆ. ಹೈದರಾಬಾದ್‌ನ ಕುತಬ್ ಶಾಹಿ ಸಮಾಧಿ ಸಂಕೀರ್ಣ ಮತ್ತು ದೆಹಲಿಯ ಹುಮಾಯೂನ್ ಸಮಾಧಿಗಳೂ ಇವುಗಳಲ್ಲಿ ಸೇರಿವೆ.

ಉಗಾಂಡಾದಲ್ಲಿ ಒಂದು ಔಷಧ ಕಂಪನಿ, ಒಂದು ಬ್ಯಾಂಕ್ ಮತ್ತು ಒಂದು ಮೀನುಗಾರಿಕಾ ಕಾರ್ಖಾನೆಯನ್ನು ಹೊಂದಿದ್ದಾರೆ. ವಾಸ್ತುಶಿಲ್ಪಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅವರು ಒಂದು ಪ್ರತಿಷ್ಠಿತ ವಾಸ್ತುಶಿಲ್ಪ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ ಎಂಐಟಿ ಮತ್ತು ಹಾರ್ವರ್ಡ್‌ನಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪಕ್ಕಾಗಿ ಕಾರ್ಯಕ್ರಮಗಳನ್ನು ಪರಿಚಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+