ಸುಳ್ಳು ಹರಡುವ ಸಂಸ್ಥೆಯನ್ನು ಎಲಾನ್ ಮಸ್ಕ್ ಖರೀದಿಸಿದ್ದಾರೆ: ಜೋ ಬೈಡನ್ ಟೀಕೆ
ವಾಷಿಂಗ್ಟನ್, ನವೆಂಬರ್ 5: ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಇಷ್ಟಪಟ್ಟಿಲ್ಲ. ಅನೇಕ ಜನರಂತೆ ಅಮೆರಿಕದ ಅಧ್ಯಕ್ಷರೂ ಕೂಡ ಸಂತೋಷವಾಗಿಲ್ಲ. ಬಿಲಿಯನೇರ್ ಉದ್ಯಮಿ ಪ್ರಪಂಚದಾದ್ಯಂತ ಸುಳ್ಳನ್ನು ಹರಡುವ ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖರೀದಿಸಿದ್ದಾರೆ ಎಂದು ಜೋ ಬೈಡನ್ ಹೇಳಿದ್ದಾರೆ.
ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿ ಇನ್ನೂ 7 ದಿನಗಳು ಆಗಿಲ್ಲ. ಆದರೆ, ವಿಶ್ವದ ಎಲ್ಲಾ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ಈಗ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೂಡ ಶುಕ್ರವಾರ ಎಲಾನ್ ಮಸ್ಕ್ ಖರೀದಿಸಿದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್ ಪ್ರಪಂಚದಾದ್ಯಂತ ಸುಳ್ಳುಗಳನ್ನು ಹರಡುತ್ತದೆ ಎಂದು ಖಂಡಿಸಿದ್ದಾರೆ. ಟ್ವಿಟ್ಟರ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಶುಕ್ರವಾರ ವಜಾಗೊಳಿಸಿದ ಸಮಯದಲ್ಲಿ ಬೈಡನ್ ಅವರ ಈ ಹೇಳಿಕೆ ಬಂದಿದೆ. ಆದರೆ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಜವಾಬ್ದಾರಿಯುತ ತಂಡದ ಕಡಿತವು ಸರಿ ಅಲ್ಲ ಎಂದು ಅವರು ಹೇಳಿದರು.
ಅಮೆರಿಕದ ಚಿಕಾಗೋ-ಪ್ರದೇಶದ ನಿಧಿಸಂಗ್ರಹ ಕಾರ್ಯಕ್ರಮವೊಂದರಲ್ಲಿ ಬೈಡೆನ್ ಮಾತನಾಡಿ, "ಈಗ ನಾವೆಲ್ಲರೂ ಇದರ ಬಗ್ಗೆ ಚಿಂತಿತರಾಗಿದ್ದೇವೆ, ಉದ್ಯಮಿಗಳಾದ ಎಲಾನ್ ಮಸ್ಕ್ ಹೊರ ಹೋಗುತ್ತಾರೆ. ಪ್ರಪಂಚದಾದ್ಯಂತ ಇರುವ ಅನೇಕ ಸಂಸ್ಥೆಯನ್ನು ಖರೀದಿಸುತ್ತಾರೆ. ಯುಎಸ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಪಾದಕರು ಇರುವುದಿಲ್ಲ. ಮುಂದೆ ನಮ್ಮ ಮಕ್ಕಳು ಅಪಾಯದಲ್ಲಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಬೈಡನ್ ತಿಳಿಸಿದ್ದಾರೆ.

"ಈಗ ನಾವೆಲ್ಲರೂ ಏನು ಚಿಂತಿಸುತ್ತಿದ್ದೇವೆ ಎಂದರೆ ಎಲಾನ್ ಮಸ್ಕ್ ಹೊರಹೋಗುತ್ತಾರೆ. ಪ್ರಪಂಚದಾದ್ಯಂತ ಸುಳ್ಳುಗಳನ್ನು ರವಾನಿಸುವ ಮತ್ತು ಹರಡುವ ಸಂಸ್ಥೆಗಳನ್ನು ಖರೀದಿಸುತ್ತಾರೆ " ಎಂದು ಶುಕ್ರವಾರ ಚಿಕಾಗೋದಲ್ಲಿ ನಡೆದ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಬೈಡನ್ ಹೇಳಿದರು.
ಟ್ವಿಟ್ವರ್ ಬಗ್ಗೆ ವೈಟ್ ಹೌಸ್ ಕಳವಳ
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಅವರು ಈ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿ, ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವ ಅಗತ್ಯತೆಯ ಬಗ್ಗೆ ಬೈಡನ್ ಸ್ಪಷ್ಟವಾಗಿದ್ದಾರೆ. ಅವರು 'ಇದು ಕೇವಲ ಟ್ವಿಟರ್‌ಗಾಗಿ' ಇಲ್ಲ, ಇದು ಫೇಸ್‌ಬುಕ್ ಮತ್ತು ಯಾವುದಾದರೂ ಬಗ್ಗೆ ಯೋಚಿಸುತ್ತಿದ್ದಾರೆ. ಬಳಕೆದಾರರು ತಪ್ಪು ಮಾಹಿತಿಯನ್ನು ಹರಡಬಹುದಾದ ಇತರ ಸಾಮಾಜಿಕ ಮಾಧ್ಯಮ ವೇದಿಕೆ ಬಗ್ಗೆ ಬೈಡನ್ ಚಿಂತಾಕ್ರಾಂತರಾಗಿದ್ದಾರೆ.

ಜಾಹೀರಾತುದಾರರು ಮಸ್ಕ್‌ನ ಯೋಜನೆಯಿಂದ ಸಂತೋಷವಾಗಿಲ್ಲ
ಟ್ವಿಟ್ಟರ್ ಖರೀದಿಸಿದ ಮಸ್ಕ್, ಟ್ವಿಟ್ಟರ್ "ಹೆಲ್‌ಕೇಪ್" ಆಗದಂತೆ ತಡೆಯುವ ಸಂದರ್ಭದಲ್ಲಿ ಮುಕ್ತ ಅಭಿವ್ಯಕ್ತಿಯನ್ನು ಪುನಃಸ್ಥಾಪಿಸಲು ಭರವಸೆ ನೀಡಿದ್ದಾರೆ. ಆದರೆ ದೊಡ್ಡ ಜಾಹೀರಾತುದಾರರು ಇದುವರೆಗೆ ತಮ್ಮ ಸ್ವಾಧೀನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಬೈಡನ್ ಅವರ ಈ ಪ್ರತಿಕ್ರಿಯೆಯು ಮಸ್ಕ್ ಟ್ವಿಟ್ಟರ್ ಖರೀದಿಸಿದಾಗ ಟ್ರಂಪ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿರಬಹುದು. ಮಸ್ಕ್ ಟ್ವಿಟ್ಟರ್ ಖರೀದಿಸಿರುವುದಕ್ಕೆ ಸಂತಸವಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಮತ್ತೆ ಯಾವಾಗ ಟ್ವಿಟ್ಟರ್‌ಗೆ ಬರುತ್ತಾರೆ ಎಂದು ಕೇಳಲಾದ ಪ್ರತಿಯೊಂದು ಪ್ರಶ್ನೆಗೆ ಒಂದು ಡಾಲರ್ ಸಿಕ್ಕಿದ್ದರೆ, ಇಷ್ಟೊತ್ತಿಗೆ ಟ್ವಿಟ್ಟರ್‌ನ ಖಜಾನೆ ತುಂಬಿರುತ್ತಿತ್ತು ಎಂದು ಮಸ್ಕ್ ಹೇಳಿದ್ದಾರೆ.












Click it and Unblock the Notifications