• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಶೋಗ್ಗಿ ಹತ್ಯೆ : ಮರಣದಂಡನೆ ಎದುರಿಸುತ್ತಿರುವ ಸೌದಿ ಅಧಿಕಾರಿಗಳು

|

ರಿಯಾದ್, ನವೆಂಬರ್ 15 : ಇಸ್ತಾನ್‌ಬುಲ್ ನ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಐವರು ಸೌದಿ ಅಧಿಕಾರಿಗಳು ಮರಣದಂಡನೆ ಶಿಕ್ಷೆ ಎದುರಿಸಲಿದ್ದು, ಆರೋಪ ಹೊತ್ತಿದ್ದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ರನ್ನು ಆರೋಪಮುಕ್ತಗೊಳಿಸಲಾಗಿದೆ.

ವಾಷಿಂಗ್ಟನ್ ಪೋಸ್ಟ್ ನ ಅಂಕಣಕಾರ ಮತ್ತು ಸೌದಿ ಅರೇಬಿಯಾದ ಟೀಕಾಕಾರರಾಗಿದ್ದ 54 ವರ್ಷದ ಹಿರಿಯ ಪತ್ರಕರ್ತ ಜಮಾಲ್ ಖಶೋಗ್ಗಿ ಅವರು ರಾಯಭಾರಿ ಕಚೇರಿ ಹೊಕ್ಕವರು ಜೀವಂತವಾಗಿ ಹೊರಗೆ ಬಂದಿರಲಿಲ್ಲ. ಅವರ ಬರ್ಬರ ಹತ್ಯೆ ಇಡೀ ವಿಶ್ವದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಅಕ್ಟೋಬರ್ 2ರಂದು, ತಮ್ಮ ಮದುವೆಗೆ ಸಂಬಂಧಿಸಿದಂತೆ ಕೆಲ ಮುಖ್ಯ ಕಾಗದಪತ್ರಗಳನ್ನು ತೆಗೆದುಕೊಳ್ಳಲೆಂದು ಕನ್ಸುಲೇಟ್ ಗೆ ಹೋದವರು ಹೆಣವಾಗಿ ಚರಂಡಿ ಸೇರಿದ್ದರು. ಅವರಿಗೆ ಮತ್ತು ಬರುವಂತೆ ಮಾಡಿ, ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಿದ್ದಲ್ಲದೆ, ಅವರ ದೇಹವನ್ನು ತುಂಡುತುಂಡು ಮಾಡಿ, ಆಸಿಡ್ ನಲ್ಲಿ ಮುಳುಗಿಸಿ, ಉಳಿದ ಅಂಗಗಳನ್ನು ಚರಂಡಿಗೆ ಎಸೆಯಲಾಗಿತ್ತು.

ಜಮಾಲ್ ದೇಹವನ್ನು ಆಸಿಡ್ ನಲ್ಲಿ ಮುಳುಗಿಸಿ ಚರಂಡಿಗೆ ಎಸೆಯಲಾಗಿತ್ತು

ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ವಕ್ತಾರರು ಈ ಬಗ್ಗೆ ವಿವರಣೆ ನೀಡಿದ್ದು, ಚರಂಡಿಗೆ ಅವರ ದೇಹವನ್ನು ಎಸೆಯಲಾಗಿದ್ದರೂ ಅಳಿದುಳಿದ ದೇಹದ ಕೆಲ ಭಾಗಗಳನ್ನು ರಾಯಭಾರಿ ಕಚೇರಿಯ ಹೊರಗಡೆ ಏಜೆಂಟೊಬ್ಬರಿಗೆ ನೀಡಲಾಗಿತ್ತು. ಜಮಾಲ್ ಖಶೋಗ್ಗಿ ಅವರ ಹತ್ಯೆಯ ಬಗ್ಗೆ ಸೌದಿ ಅರೇಬಿಯಾದ ಯುವ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಯಾವುದೇ ಸುಳಿವು ಅಥವಾ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

ಹತ್ಯೆಗೆ ಗುಪ್ತದಳ ಮುಖ್ಯಸ್ಥರಿಂದಲೇ ಆದೇಶ

ಹತ್ಯೆಗೆ ಗುಪ್ತದಳ ಮುಖ್ಯಸ್ಥರಿಂದಲೇ ಆದೇಶ

ಸೌದಿ ಅರೇಬಿಯಾ ಆಡಳಿತವನ್ನು ತೀವ್ರವಾಗಿ ಟೀಕಿಸುತ್ತಿದ್ದ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಹತ್ಯೆಗೆ ಸೌದಿ ಅರೇಬಿಯಾದ ಗುಪ್ತದಳದ ಸಹಾಯಕ ಮುಖ್ಯಸ್ಥರಾಗಿರುವ ಜನರಲ್ ಅಹ್ಮದ್ ಅಲ್-ಅಸ್ಸಿರಿ ಅವರು ಆದೇಶ ನೀಡಿದ್ದರು. ಅವರ ಹತ್ಯೆಯ ನಂತರ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದರೂ ಹತ್ಯೆ ಮಾಡಿರುವ ಬಗ್ಗೆ ಸೌದಿ ಅರೇಬಿಯಾ ಸರಕಾರ ಅಲ್ಲಗಳೆಯುತ್ತಲೇ ಇತ್ತು. ನಂತರ ಒತ್ತಡಕ್ಕೆ ಮಣಿದು ರಾಯಭಾರಿ ಕಚೇರಿಯಲ್ಲಿಯೇ ಹತ್ಯೆಯಾಗಿರುವುದನ್ನು ಒಪ್ಪಿಕೊಂಡಿತು. ಈ ಕಗ್ಗೊಲೆಯಲ್ಲಿ ಭಾಗಿಯಾಗಿರುವ ಎಲ್ಲ ಐದು ಪ್ರಮುಖ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಆಗ್ರಹ ಮಾಡಲಾಗಿದೆ.

ಮುಷ್ಠಿಯುದ್ಧದಲ್ಲಿ ಖಶೋಗಿ ಹತರಾದರು: ಸೌದಿ ಅರೆಬಿಯಾ

11 ಜನರ ವಿರುದ್ಧ ಆರೋಪ ಸಾಬೀತು

11 ಜನರ ವಿರುದ್ಧ ಆರೋಪ ಸಾಬೀತು

ಹತ್ಯೆಗೆ ಆದೇಶ ನೀಡಿದವರು, ಹತ್ಯೆ ಮಾಡಿದವರು ಮತ್ತು ಹತ್ಯೆಗೆ ಸಹಾಯ ಮಾಡಿದವರನ್ನು ಸೇರಿ ಒಟ್ಟು 21 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ 11 ಜನರು ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ. ಅವರಲ್ಲಿ ಅಹ್ಮದ್ ಅಲ್-ಅಸ್ಸಿರಿ ಸೇರಿದಂತೆ ಐವರು ಮರಣದಂಡನೆ ಎದುರಿಸುತ್ತಿದ್ದಾರೆ. ಉಳಿದವರ ಭಾಗೀದಾರಿಕೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪತ್ರಕರ್ತ ಜಮಾಲ್ ಖಶೋಗ್ಗಿ ಅವರು ಟರ್ಕಿ ಸಂಜಾತರಾಗಿರುವುದರಿಂದ, ಈ ಹತ್ಯೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದ ಟರ್ಕಿ ಅಧ್ಯಕ್ಷ ತೈಯಿಪ್ ಎರ್ಡೋಗನ್ ಅವರು ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ಅಧಿಕಾರಿಗಳಿಂದ ಷಡ್ಯಂತ್ರ ಮಾಡಿ ಕೊಲೆ

ಅಧಿಕಾರಿಗಳಿಂದ ಷಡ್ಯಂತ್ರ ಮಾಡಿ ಕೊಲೆ

ಟರ್ಕಿಯ ಅಧ್ಯಕ್ಷರು ಜಮಾಲ್ ಖಶೋಗ್ಗಿ ಅವರನ್ನು ಸೌದಿ ಅರೇಬಿಯಾದ ಉನ್ನತ ಅಧಿಕಾರಿಗಳಿಂದ ಸಂಚು ಮಾಡಿ ಹತ್ಯೆ ಮಾಡಲಾಗಿದೆ ಎಂದು ಆರಂಭದಿಂದಲೂ ಹೇಳುತ್ತಲೇ ಇದ್ದರು. ಆದರೆ, ಷಡ್ಯಂತ್ರ ಮಾಡಿ ಕೊಲೆ ಮಾಡಿರುವುದನ್ನು ಅಲ್ಲಗಳೆದಿದ್ದ ಸೌದಿ ಅರೇಬಿಯಾದ ಅಧಿಕಾರಿಗಳು, ರಾಯಭಾರಿ ಕಚೇರಿಯಲ್ಲಿ ನಡೆದ ಹೊಡೆದಾಟದಲ್ಲಿ ಜಮಾಲ್ ಅವರು ಆಕಸ್ಮಿಕವಾಗಿ ಕೊಲೆಯಾಗಿದ್ದರು ಎಂದು ವಾದಿಸುತ್ತಿದ್ದರು. ಈ ಕೊಲೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪ್ಯಾರಿಸ್, ರಿಯಾದ್ ಮತ್ತು ವಾಷಿಂಗ್ಟನ್ನಿಗೆ ಕಳುಹಿಸುವುದಾಗಿ ತೈಯಿಪ್ ಎರ್ಡೋಗನ್ ಅವರು ಹೇಳುತ್ತಲಿದ್ದರು. ಕಡೆಗೂ ಸೌದಿ ಸರಕಾರ ಒತ್ತಡಕ್ಕೆ ಮಣಿದು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿತು.

ಪತ್ರಕರ್ತ ಖಶೋಗಿ ಸಾವು ಒಂದು 'ಮಿಸ್ಟೇಕ್' ಎಂದ ಸೌದಿ ಅರೇಬಿಯಾ!

ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಸೌದಿ ಅರೇಬಿಯಾ

ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಸೌದಿ ಅರೇಬಿಯಾ

ಜಮಾಲ್ ಖಶೋಗ್ಗಿಯವರ ಹತ್ಯೆಯಿಂದಾಗಿ ವಿಶ್ವದ ಪ್ರಮುಖ ತೈಲ ಸರಬರಾಜುದಾರರಾಗಿರುವ ಸೌದಿ ಅರೇಬಿಯಾ ರಾಜತಾಂತ್ರಿಕ ಬಿಕ್ಕಿಟ್ಟಿನಲ್ಲಿ ಸಿಲುಕಿದೆ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಪ್ರಕರಣ ಅತೀದೊಡ್ಡ ಹಗರಣವಾಗಿದೆ. 2001ರಲ್ಲಿ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಪೆಂಟಗಾನ್ ಮೇಲೆ, ವಿಮಾನ ಅಪಹಣ ನಡೆಸಿ ವೈಮಾನಿಕ ದಾಳಿಯ ನಡೆಸಿದ ಎಲ್ಲರೂ ಸೌದಿ ಅರೇಬಿಯಾದವರು ಆಗಿದ್ದರು. 2001ರ ಸೆಪ್ಟೆಂಬರ್ 11ರಂದು ನಡೆದಿದ್ದ ಭೀಕರ ದಾಳಿಯಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಸಂಪೂರ್ಣವಾಗಿ ನೆಲಸಮವಾಗಿತ್ತು.

English summary
Murder of Jamal Khashoggi : 5 Saudi officials, including deputy chief of intelligence, face death sentence for the cold blooded murder of Jamal, who was the critic of Saudi rulers including Mohammed bin Salman. But Salman has been aquitted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X