ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಕ್ರ್ಯಾಶ್: ಬಿಬಿಸಿ, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ಸ್‌ ಡೌನ್

|
Google Oneindia Kannada News

ನವದೆಹಲಿ, ಜೂ.08: ಬಿಬಿಸಿ, ಅಮೆಜಾನ್‌, ಯುಕೆ ಸರ್ಕಾರದ ತಾಣಗಳು ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್‌ಗಳು ಭಾರಿ ಇಂಟರ್ನೆಟ್ ನಿಲುಗಡೆಗೆ (ಇಂಟರ್ನೆಟ್ ಔಟೇಜ್‌) ಗುರಿಯಾಗಿವೆ. ಹಲವಾರು ಪ್ರಮುಖ ವೆಬ್‌ಸೈಟ್‌ಗಳಲ್ಲಿ ಒಂದೇ ಸಮಯಕ್ಕೆ ಇಂಟರ್ನೆಟ್ ಕ್ರ್ಯಾಶ್ ಸಮಸ್ಯೆ ಕಾಣಿಸಿಕೊಂಡಿದೆ.

ಪ್ರಮುಖವಾಗಿ ಅಮೆಜಾನ್, ಬಿಬಿಸಿ ಮತ್ತು ಯುಕೆ ಸರ್ಕಾರದ ತಾಣಗಳಲ್ಲಿ ಇಂಟರ್ನೆಟ್ ಔಟೇಜ್‌ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೊರತುಪಡಿಸಿ ಗಾರ್ಡಿಯನ್, ಫೈನಾನ್ಷಿಯಲ್ ಟೈಮ್ಸ್, ಇಂಡಿಪೆಂಡೆಂಟ್, ನ್ಯೂಯಾರ್ಕ್ ಟೈಮ್ಸ್, ಈವ್ನಿಂಗ್ ಸ್ಟ್ಯಾಂಡರ್ಡ್ ಮತ್ತು ರೆಡ್ಡಿಟ್ ಸೇರಿದಂತೆ ಹಲವಾರು ಪ್ರಮುಖ ಮಾಧ್ಯಮ ವೆಬ್‌ಸೈಟ್‌ಗಳಲ್ಲೂ ಇಂಟರ್ನೆಟ್ ನಿಲುಗಡೆಯಾಗಿದೆ.

ಭಾರತಕ್ಕೆ ಬರಲಿದೆ ಎಲೋನ್ ಮಸ್ಕ್ ಉಪಗ್ರಹ ಇಂಟರ್‌ನೆಟ್: ಬುಕಿಂಗ್ ಹೇಗೆ? ದರ ಎಷ್ಟು?ಭಾರತಕ್ಕೆ ಬರಲಿದೆ ಎಲೋನ್ ಮಸ್ಕ್ ಉಪಗ್ರಹ ಇಂಟರ್‌ನೆಟ್: ಬುಕಿಂಗ್ ಹೇಗೆ? ದರ ಎಷ್ಟು?

ಕೆಲವು ವೆಬ್‌ಸೈಟ್‌ಗಳಲ್ಲಿ ಒಂದು ಬಾರಿಗೆ ಸಂಪೂರ್ಣವಾಗಿ ಕಾರ್ಯ ಸ್ಥಗಿತಗೊಂಡಿದ್ದು ಇನ್ನು ಕೆಲವು ವೆಬ್‌ಸೈಟ್‌ಗಳಲ್ಲಿ ಸಣ್ಣ, ಪುಟ್ಟ ಅಡಚಣೆ ಕಾಣಿಸಿಕೊಂಡಿದೆ. ಇನ್ನೂ ಕೆಲವು ವೆಬ್‌ಸೈಟ್‌ಗಳಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.

 Multiple major websites including BBC, Amazon hit in massive internet crash

ವಿಶ್ವದ ಪ್ರಮುಖ ವಿಷಯ ವಿತರಣಾ ನೆಟ್‌ವರ್ಕ್‌ಗಳಲ್ಲಿ (ಸಿಡಿಎನ್‌ಗಳು) ಈ ಸಮಸ್ಯೆಯು ಪ್ರಮುಖವಾಗಿ ಬೆಳಕಿಗೆ ಬಂದಿದೆ. ಸಿಡಿಎನ್ ಎನ್ನುವುದು ವೆಬ್‌ಸೈಟ್‌ಗಳನ್ನು ಮತ್ತು ಅವುಗಳ ವಿಷಯವನ್ನು ಅಂತರ್ಜಾಲದಲ್ಲಿ ನಿರ್ವಹಿಸುವ ಹಾಗೂ ಮಾಹಿತಿಯನ್ನು ಬಳಕೆದಾರರಿಗೆ ಪೂರೈಸಲು ಬಳಸುವ ಒಂದು ವ್ಯವಸ್ಥೆಯಾಗಿದೆ. ಅದರ ಜಾಗತಿಕ ನೆಟ್‌ವರ್ಕ್‌ನಾದ್ಯಂತ ಪ್ರಮುಖವಾಗಿ ಇಂಟರ್ನೆಟ್ ಕ್ರ್ಯಾಶ್ ಕಾಣಿಸಿಕೊಂಡಿದೆ. ಇದು ಪ್ರಮುಖ ವೆಬ್‌ಸೈಟ್‌ಗಳಲ್ಲಿ ಇಂಟರ್ನೆಟ್ ಕ್ರಾಶ್‌ಗೆ ಕಾರಣ ಎಂದು ನಂಬಲಾಗಿದೆ.

ಮಾರುವೇಷದಲ್ಲಿ ಬಳಕೆದಾರರ ದತ್ತಾಂಶ ಕದಿಯುತ್ತಿರುವ ಗೂಗಲ್ ವಿರುದ್ಧ ಮೊಕದ್ದಮೆಮಾರುವೇಷದಲ್ಲಿ ಬಳಕೆದಾರರ ದತ್ತಾಂಶ ಕದಿಯುತ್ತಿರುವ ಗೂಗಲ್ ವಿರುದ್ಧ ಮೊಕದ್ದಮೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಎಸ್ ಸಂಸ್ಥೆ, "ಪ್ರಸ್ತುತ ನಮ್ಮ ಸಿಡಿಎನ್ ಸೇವೆಯಲ್ಲಿ ಕಂಡು ಬಂದಿರುವ ಸಮಸ್ಯೆಯ ಪರಿಣಾಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದೆ. ಹಾಗೆಯೇ ಗಾರ್ಡಿಯನ್‌ನ ತಂತ್ರಜ್ಞಾನ ಸಂಪಾದಕ ಅಲೆಕ್ಸ್ ಹರ್ನ್, "ಸಮಸ್ಯೆಯ ಕಾರಣವೆಂದು ಗುರುತಿಸಲಾಗಿದೆ" ಎಂದು ಟ್ವೀಟ್‌ ಮಾಡಿದ್ದಾರೆ.

ಯುಕೆ ಸಮಯ ಬೆಳಿಗ್ಗೆ 11 ಗಂಟೆಯ ಮೊದಲು ಪ್ರಾರಂಭವಾದ ನಿಲುಗಡೆ, ವ್ಯಾಪಕವಾದ ಸೈಟ್‌ಗಳಿಗೆ ಭೇಟಿ ನೀಡುವವರಿಗೆ "Error 503 Service Unavailable" ಮತ್ತು "connection failure" ಎಂದು ಕಾಣಿಸಿದೆ'' ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

ಇನ್ನು ಅಧಿಕೃತ gov.uk ಟ್ವಿಟ್ಟರ್ ಖಾತೆ, "http://gov.uk ನಲ್ಲಿನ ಸಮಸ್ಯೆಗಳ ಬಗ್ಗೆ ನಮಗೆ ತಿಳಿದಿದೆ, ಅಂದರೆ ಬಳಕೆದಾರರು ಸೈಟ್‌ಗೆ ಪ್ರವೇಶಿಸಲು ಸಾಧ್ಯವಾಗದಿರಬಹುದು. ಇದು ಹಲವಾರು ಇತರ ಸರ್ಕಾರೇತರ ಸೈಟ್‌ಗಳ ಮೇಲೆ ಪರಿಣಾಮ ಬೀರುವ ವ್ಯಾಪಕ ಸಮಸ್ಯೆಯಾಗಿದೆ. ನಾವು ಇದನ್ನು ತುರ್ತು ವಿಷಯವಾಗಿ ತನಿಖೆ ಮಾಡುತ್ತಿದ್ದೇವೆ" ಎಂದು ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Multiple major websites including BBC, Amazon, gov.uk, Guardian hit in massive internet crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X