ಭಾರತೀಯರು ವಿದೇಶಕ್ಕೆ ಹೋಗುವುದೇ ಬೇಕಾಗಿಲ್ಲ; ಈ ತಪ್ಪು ಮಾಡಬೇಡಿ ಎಂದ ಬೆಂಗಳೂರು ಮೂಲದ ಉದ್ಯಮಿ, ವೈರಲ್ ವಿಡಿಯೋ!

ಬೆಂಗಳೂರು ಮೂಲದ ಸಂಸ್ಥಾಪಕರೊಬ್ಬರು ವಿದೇಶಕ್ಕೆ ಹೋಗುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಭಾರತದಿಂದ ವಿದೇಶಕ್ಕೆ ಹೋಗುವ ಕನ್ನಡಿಗರ ಸಂಖ್ಯೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಹಾಗೂ ಕರ್ನಾಟಕದಿಂದ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವುದು ಎಲ್ಲ ಸಂದರ್ಭಗಳಲ್ಲೂ ಉತ್ತಮ ಆಯ್ಕೆಯಲ್ಲ ಎಂದು ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಹೇಳಿದ್ದಾರೆ.

ಬೆಂಗಳೂರು ಮೂಲದ ಸಂಸ್ಥಾಪಕರೊಬ್ಬರು ವಿದೇಶಕ್ಕೆ ಹೋಗಿ ನೆಲೆಸುವುದು ಎಲ್ಲ ಸಂದರ್ಭದಲ್ಲೂ ಉತ್ತಮ ಆಯ್ಕೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಈಗಾಗಲೇ ಉತ್ತಮ ಆದಾಯ ಗಳಿಸುತ್ತಿರುವ ಮತ್ತು ಸ್ವದೇಶದಲ್ಲಿ ಕುಟುಂಬದಿಂದ ಉತ್ತಮ ಬೆಂಬಲ ಹೊಂದಿರುವ ಭಾರತೀಯರಿಗೆ ವಿದೇಶಕ್ಕೆ ಸ್ಥಳಾಂತರವಾಗುವುದು ಅನಿವಾರ್ಯವಾಗಿ ಜೀವನದ 'ಅಪ್‌ಗ್ರೇಡ್' ಅಥವಾ ಜೀವನ ಉನ್ನತೀಕರಣ ಆಗಲ್ಲ ಅಂತ ಹೇಳಿದ್ದಾರೆ.

Moving Abroad Bengaluru Entrepreneur Says Indians Don t Need to Move Abroad Viral Video

ಸೋಶಿಯಲ್ ಮೀಡಿಯಾದ ಇನ್‌ಸ್ಟಾಗ್ರಾಮನ್‌ನಲ್ಲಿ Souveek.builds ಎನ್ನುವ ಖಾತೆಯಿಂದ ಲಂಡನ್ ನಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸೌವೀಕ್ ರೇ ಲಂಡನ್‌ನಿಂದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟಿಕ್‌ಟಾಕ್‌ನಿಂದ ಉದ್ಯೋಗದ ಆಫರ್ ಪಡೆದ ನಂತರ ಅವರು ಯುಕೆಗೆ ಸ್ಥಳಾಂತರವಾಗುವ ನಿರ್ಧಾರಕ್ಕೆ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. "ಇದು ಹುಚ್ಚತನದಂತೆ ಕಾಣಿಸಬಹುದು ಎಂದು ನನಗೆ ತಿಳಿದಿದೆ, ಆದರೆ ವಿದೇಶಕ್ಕೆ ಸ್ಥಳಾಂತರಗೊಳ್ಳುವುದು ಯಾವಾಗಲೂ ಉತ್ತಮ ನಿರ್ಧಾರವಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವು ವರ್ಷಗಳ ಹಿಂದೆ ಲಂಡನ್‌ಗೆ ಸ್ಥಳಾಂತರಗೊಂಡಿರುವ ವ್ಯಕ್ತಿಯಾಗಿ ನಾನು ಇದನ್ನು ಹೇಳುತ್ತಿದ್ದೇನೆ" ಎಂದು ರೇ ಹೇಳಿದ್ದಾರೆ.

ಮುಂದುವರಿದು ಲಂಡನ್ ತನ್ನ ಆಹಾರ, ಸಂಸ್ಕೃತಿ ಮತ್ತು ಐತಿಹಾಸಿಕ ಹೆಗ್ಗುರುತುಗಳಿಂದ ಅವರನ್ನು ಪ್ರಭಾವಿತಗೊಳಿಸಿದರೂ, ಅವರ ಅನುಭವದಿಂದ, ಸ್ಥಳಾಂತರ ಎಂದರೆ ನಿಜವಾಗಿ ಏನು ಎಂಬುದನ್ನು ರೇ ಮತ್ತೆ ಯೋಚಿಸುವಂತಾಯಿತು ಅಂತ ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ನನಗೆ ಟಿಕ್‌ಟಾಕ್‌ನಿಂದ ಉತ್ತಮ ಕೊಡುಗೆ ಸಿಕ್ಕಿತು ಮತ್ತು ನಾನು ಲಂಡನ್‌ಗೆ ಸ್ಥಳಾಂತರಗೊಳ್ಳಲು ತುಂಬಾ ಹತ್ತಿರದಲ್ಲಿದ್ದೆ. ಆದರೆ ನಂತರ ನಾನು ನಿಜವಾಗಿಯೂ ನಾನು ಏನು ಬಿಟ್ಟುಕೊಡುತ್ತೇನೆ ಎಂಬುದರ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ, ನಾನು ಏನು ಪಡೆಯುತ್ತೇನೆ ಎಂಬುದರ ಬಗ್ಗೆ ಅಲ್ಲ ಅಂತ ಹೇಳಿದ್ದಾರೆ.

ಕುಟುಂಬದಿಂದ ದೂರ ಉಳಿಯಬೇಕಾದ ಅನಿವಾರ್ಯತೆ

ಭಾರತದಲ್ಲಿ ಉತ್ತಮ ಆದಾಯ ಗಳಿಸಿದರೆ ನೀವು ವಿದೇಶಕ್ಕೆ ಹೋಗುವ ಅವಶ್ಯಕತೆಯೇ ಇಲ್ಲ. ಭಾರತದಲ್ಲಿ ಉತ್ತಮ ಹಣ ಗಳಿಸುತ್ತಿದ್ದರೆ, ವಿದೇಶದಲ್ಲಿರುವ ಜನರು ಒಪ್ಪಿಕೊಳ್ಳಲು ಬಯಸುವುದಕ್ಕಿಂತ ಜೀವನವು ಹೆಚ್ಚು ಆರಾಮದಾಯಕವಾಗಿರುತ್ತದೆ. ನಿಮಗೆ ಕುಟುಂಬವಿದೆ, ನಿಮ್ಮ ಮಕ್ಕಳನ್ನು ಬೆಳೆಸಲು ಸಹಾಯ ಮಾಡಿ, ನಿಮ್ಮ ಸುತ್ತಲಿನ ಜನರೊಂದಿಗೆ ಜೀವನ ಕಳೆಯುತ್ತೀರಿ. ಆದರೆ ನೀವು ವಿದೇಶದಲ್ಲಿ ಎಲ್ಲವನ್ನೂ ಒಬ್ಬಂಟಿಯಾಗಿ ಮಾಡುತ್ತಿದ್ದೀರಿ ಎಂದಿದ್ದಾರೆ.

ಇನ್ನು ವಿದೇಶಕ್ಕೆ ಹೋಗುವುದು ಅನೇಕ ಜನರಿಗೆ ಸರಿಯಾದ ನಿರ್ಧಾರವಾಗಿರಬಹುದು ಎಂದು ರೇ ಹೇಳಿದ್ದಾರೆ. ಆದರೆ ಅದನ್ನು ಜೀವನದ ಮತ್ತೊಂದು ಹೆಜ್ಜೆಯಾಗಿ ನೋಡಬಾರದು ಎಂದು ಹೇಳಿದ್ದಾರೆ. ವ್ಯಾಪಾರ ಕೆಟ್ಟದು ಅಥವಾ ಅದು ತಪ್ಪು ಎಂದು ನಾನು ಹೇಳುತ್ತಿಲ್ಲ. ಬಹಳಷ್ಟು ಜನರಿಗೆ, ಅದು ಸರಿಯಾದ ಆಯ್ಕೆ. ಜನರು ಅದನ್ನು ಸ್ವಯಂಚಾಲಿತ ಅಪ್‌ಗ್ರೇಡ್ ಎಂದು ಪರಿಗಣಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ ಅಂತ ಹೇಳಿದ್ದಾರೆ.

ಭಾರತದಲ್ಲಿ ತನ್ನದೇ ಆದ ಸವಾಲುಗಳು ಇವೆ. ಆದರೆ ಮುಂದೆ ಅದ್ಭುತ ಅವಕಾಶವನ್ನು ಹೊಂದಿದೆ ಎಂದು ರೇ ಹೇಳಿದ್ದಾರೆ. ಅವರಿಗೆ, ಇದು ಭಾರತದಲ್ಲಿ, ಭಾರತಕ್ಕಾಗಿ ಮತ್ತು ಜಗತ್ತಿಗೆ ನಿರ್ಮಿಸಲು ಸರಿಯಾದ ಸಮಯ ಅಂತಲೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+