ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್: ಚಿಕಿತ್ಸೆ ಮತ್ತು ಲಸಿಕೆ- ಇಲ್ಲಿದೆ ಎಲ್ಲಾ ವಿವರ

|
Google Oneindia Kannada News

ಕೊರೊನಾ ವೈರಸ್ ನಮ್ಮ ಪಾಲಿಗೆ ಹಳಿಯದಾದರೂ ಅದರ ನಂತರ ಕಾಣಿಸಿಕೊಳ್ಳುತ್ತಿರುವ ವೈರಸ್‌ಗಳು ಅಪಾಯಕಾರಿಯೇ? ಇಲ್ಲವೇ? ಅದರ ಲಕ್ಷಣಗಳೇನು? ಇಂತೆಲ್ಲಾ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನುಷ್ಯ ಇಂದಿಗೂ ಹೊಸ ವೈರಸ್‌ಗಳ ಬಗ್ಗೆ ಆತಂಕದಲ್ಲೇ ಜೀವನ ಮಾಡಬೇಕಾದ ಪರಿಸ್ಥಿತಿ ಇದೆ. ಇತ್ತೀಚೆಗೆ ಇಂತಹದ್ದೇ ಭಯ ಹುಟ್ಟಿಸುವಂತಹ ವೈರಸ್ ಕಾಣಿಸಿಕೊಂಡಿದೆ. ಅದುವೇ ಮಂಕಿಪಾಕ್ಸ್. ಈ ಮಂಕಿಪಾಕ್ಸ್ ವೈರಸ್‌ ಮನುಷ್ಯನ ದೇಹ ಸೇರಿದರೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳಿಂದ ಜನ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಏನಿದು ಮಂಕಿಪಾಕ್ಸ್? ಇದರ ಲಕ್ಷಣಗಳೇನು? ಇದರ ಚಿಕಿತ್ಸೆ ಮತ್ತು ಲಸಿಕೆ ಬಗ್ಗೆ ವಿವರವಾಗಿ ತಿಳಿಯೋಣ.

ಬ್ರಿಟನ್‌ನಲ್ಲಿ ಈ ವೈರಸ್‌ ಪತ್ತೆಯಾಗಿದೆ. 2021ರಲ್ಲಿ ನೈಜೀರಿಯಾಕ್ಕೆ ಪ್ರಯಾಣಿಸಿದ ಇಬ್ಬರಿಗೆ ಮಂಕಿಪಾಕ್ಸ್ ತಗುಲಿರುವುದಾಗಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಉಲ್ಲೇಖಿಸಿವೆ. ಈ ರೋಗ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಳ್ಳುತ್ತದೆ. ಆದಾಗ್ಯೂ, ಇತರ ಪ್ರಕರಣಗಳು ಯುರೋಪ್, ಯುಕೆ ಮತ್ತು ವಿಶ್ವದಾದ್ಯಂತ ಕೆಲವು ಇತರ ಭಾಗಗಳಲ್ಲಿ ವರದಿಯಾಗಿದೆ. ಪ್ರಕರಣಗಳು ಆಮದು ಮಾಡಿಕೊಂಡ ಅಥವಾ ಕಾಡು ಪ್ರಾಣಿಗಳಿಂದು ಹರಡಿರುವ ಸಂಭವವಿದೆ.

ಅಮೆರಿಕಾದಲ್ಲಿ ಮೊದಲ ಮಂಕಿಪಾಕ್ಸ್‌ ಪತ್ತೆ: ಕೆನಡಾಕ್ಕೆ ಪ್ರಯಾಣಿಸಿದ್ದ ಸೋಂಕಿತಅಮೆರಿಕಾದಲ್ಲಿ ಮೊದಲ ಮಂಕಿಪಾಕ್ಸ್‌ ಪತ್ತೆ: ಕೆನಡಾಕ್ಕೆ ಪ್ರಯಾಣಿಸಿದ್ದ ಸೋಂಕಿತ

ವೈದ್ಯರಿಂದ ಅಭಯ

ವೈದ್ಯರಿಂದ ಅಭಯ

ಸ್ಪೇನ್ ಈಗಾಗಲೇ 7ಮಂಕಿಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಪ್ರಸ್ತುತ ಇನ್ನೂ 22 ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ. ಮಾಂಟ್ರಿಯಲ್ 17 ಪ್ರಕರಣಗಳನ್ನು ತನಿಖೆ ಮಾಡುತ್ತಿದೆ ಮತ್ತು ಇಟಲಿ ಕೂಡ ಮೊದಲ ಪ್ರಕರಣವನ್ನು ದೃಢಪಡಿಸಿದೆ. ಭಾರತಕ್ಕೂ ಈ ರೋಗ ಹರಡುವ ಭೀತಿ ಇದೆ. ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಮಾತನಾಡಿ, ಯುಕೆಯಲ್ಲಿ ರೋಗವು ಪ್ರಯಾಣದ ಇತಿಹಾಸ ಹೊಂದಿರುವ ಜನರೊಂದಿಗೆ ಯಾವುದೇ ಪರಿಚಯವಿಲ್ಲದ ಜನರಲ್ಲಿ ವರದಿಯಾಗುತ್ತಿಲ್ಲ. ಹೀಗಾಗಿ ಗಾಬರಿಯಾಗುವ ಅಗತ್ಯವಿಲ್ಲ ಎಂದಿದ್ದಾರೆ. ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಜನರು ತಮ್ಮ ವೈದ್ಯರನ್ನು ಭೇಟಿ ಮಾಡಬೇಕು ಎಂದು ಡಾ.ಮೂರ್ತಿ ಸೂಚಿಸಿದ್ದಾರೆ.

ದೇಹದ ಮೇಲೆ ಗುಳ್ಳೆ

ದೇಹದ ಮೇಲೆ ಗುಳ್ಳೆ

ರೋಗ 7-14 ದಿನಗಳವರೆಗೆ ಅವಧಿಯನ್ನು ಇರುತ್ತದೆ ಮತ್ತು ಶೀತ, ಜ್ವರ, ತಲೆನೋವು, ಸ್ನಾಯು ದೌರ್ಬಲ್ಯ, ಊತ, ಚರ್ಮದ ಮೇಲೆ ಗುಳ್ಳೆ ಮತ್ತು ಬಳಲಿಕೆ ರೋಗಲಕ್ಷಣಗಳು ಇರುತ್ತವೆ. ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳಲ್ಲಿ ಊತವನ್ನು ಉಂಟುಮಾಡುತ್ತದೆ. ಅಂಗೈಗಳು, ಪಾದಗಳು ಮತ್ತು ನಿಮ್ಮ ಬಾಯಿಯ ಒಳಭಾಗವನ್ನು ಒಳಗೊಂಡಂತೆ ದೇಹದ ಮೇಲೆ ವ್ಯಾಪಕವಾದ ದದ್ದು/ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಮಂಕಿಪಾಕ್ಸ್ ಚಿಕಿತ್ಸೆ

ಮಂಕಿಪಾಕ್ಸ್ ಚಿಕಿತ್ಸೆ

ಈ ಗುಳ್ಳೆಗಳು ನೋವಿನಿಂದ ಕೂಡಿದ್ದು ದ್ರವದಿಂದ ತುಂಬಿರುತ್ತದೆ. ಗುಳ್ಳೆ ಮುತ್ತುಗಳಂತೆ ಕಾಣಿಸುತ್ತವೆ ಮತ್ತು ಅವುಗಳ ಸುತ್ತಲೂ ಕೆಂಪು ವಲಯಗಳನ್ನು ಹೊಂದಿರುತ್ತವೆ. ಇದರಿಂದ ಹೊರಬರಲು ಎರಡು ಮೂರು ವಾರಗಳು ತೆಗೆದುಕೊಳ್ಳುತ್ತದೆ. ಮಂಕಿಪಾಕ್ಸ್‌ಗೆ ಮಾರುಕಟ್ಟೆಯಲ್ಲಿ ಯಾವುದೇ ನಿರ್ದಿಷ್ಟ ಔಷಧಗಳು ಲಭ್ಯವಿಲ್ಲ ಮತ್ತು ಸಾಮಾನ್ಯವಾಗಿ ಚಿಕಿತ್ಸೆಯಿಂದ ಗುಣಪಡಿಸಬಹುದು.

ತಡೆಗಟ್ಟುವ ವಿಧಾನಗಳು

ತಡೆಗಟ್ಟುವ ವಿಧಾನಗಳು

ಮಂಕಿಪಾಕ್ಸ್ ಬೆಳವಣಿಗೆಯನ್ನು ನಿಲ್ಲಿಸಲು ನೀವು ಕಂಡುಹಿಡಿಯಬಹುದಾದ ಲಸಿಕೆ ಇದೆ. ಅದೇನೆಂದರೆ ಸೋಂಕಿತ ವ್ಯಕ್ತಿಯೊಂದಿಗೆ ನೀವು ನಿಕಟ ಸಂಪರ್ಕಕ್ಕೆ ಬಂದರೆ, ವೈರಸ್ ಹರಡಬಹುದು ಎಂದು ತಜ್ಞರು ಹೇಳುತ್ತಾರೆ. ಲೋಳೆಯ ಪೊರೆಗಳು, ಚರ್ಮ ಒಡೆಯುವುದು, ಸೋಂಕಿತ ದೈಹಿಕ ದ್ರವಗಳು ಮತ್ತು ಉಸಿರಾಟದ ಹನಿಗಳಿಗೆ ಒಡ್ಡಿಕೊಳ್ಳುವುದು ಸೋಂಕಿನ ಬೆಳವಣಿಗೆಗೆ ಕಾರಣವಾಗಬಹುದು.

English summary
Monkeypox, rare disease caused by the monkeypox virus. Know Monkeypox: Causes, Symptoms, Treatment, Diagnosis, Prevention and Vaccine Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X