ಟೈಮ್ಸ್ ವರ್ಷದ ವ್ಯಕ್ತಿ 2017: ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್
ಸೌದಿ ಅರೆಬಿಯದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಈ ಬಾರಿಯ ಟೈಮ್ಸ್ ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಆನ್ ಲೈನ್ ಆಯ್ಕೆ ಪ್ರಕ್ರಿಯೆಲ್ಲಿ 24 % ಹೆಚ್ಚು ಮತಗಳಿಸಿದ ಸಲ್ಮಾನ್ ಈ ಕೀರ್ತಿಗೆ ಪಾತ್ರರಾದರು.
ಎರಡನೇ ಸ್ಥಾನವನ್ನು, ಲೈಂಗಿಕ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸುತ್ತಿರುವ ಮಿಟೂ(Metoo) ಎಂಬ ಸಂಸ್ಥೆ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ಸ್ಯಾನ್ ಫ್ರಾನ್ಸಿಸ್ಕೋದ ಕೊಲಿನ್ ಕೆಪರ್ನಿಕ್, ರಾಬರ್ಟ್ ಮುಲ್ಲರ್ ಮತ್ತು ಡ್ರೀಮರ್ಸ್ ಎಂಬ ಸಂಘಟನೆ ಹಂಚಿಕೊಂಡಿದೆ.

ಕಳೆದ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಬಾರಿ ಕೇವಲ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. 'ಟೈಮ್ಸ್ ಸಂಸ್ಥೆ ಈ ಬಾರಿಯೂ ತನ್ನನ್ನೇ ವರ್ಷದ ವ್ಯಕ್ತಿ ಎಂದು ಆರಿಸಲು ಹವಣಿಸುತ್ತಿದೆ. ಆದರೆ ನನಗೆ ಇದು ಇಷ್ಟವಿಲ್ಲ', ಎಂದಿದ್ದ ಟ್ರಂಪ್ ಗೆ ಇದು ಮುಖಭಂಗವೇ ಸರಿ!












Click it and Unblock the Notifications