ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಪಟ್ಟಿ: ಪುಟಿನ್ ನಂ.1, ಮೋದಿ 15

By Mahesh
|
Google Oneindia Kannada News

ವಾಷಿಂಗ್ಟನ್, ನ.6: ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೋರ್ಬ್ಸ್ ಮ್ಯಾಗಜೀನ್ ಸೇರಿಸಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಗ್ರಸ್ಥಾನದಲ್ಲಿರುವ ಈ ಪಟ್ಟಿಯಲ್ಲಿ ಮೋದಿ ಅವರು 15ನೇ ಸ್ಥಾನ ಗಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಟಾಪ್ 1 ಸ್ಥಾನವನ್ನು ಪುಟಿನ್ ಗೆ ಬಿಟ್ಟುಕೊಟ್ಟಿದ್ದಾರೆ.

ಹಿಂದೂ ರಾಷ್ಟ್ರವಾದಿ ಎಂದು ಮೋದಿ ಅವರನ್ನು ಕರೆದಿರುವ ಫೋರ್ಬ್ಸ್, ಕಳೆದ ಮೇ ತಿಂಗಳ ಚುನಾವಣೆಯಲ್ಲಿ ಸಾಧಿಸಿದ ಜಯದಲ್ಲಿ ಮೋದಿ ವಹಿಸಿದ ಪಾತ್ರವನ್ನು ಉಲ್ಲೇಖಿಸಿದೆ.ದಶಕಗಳ ಕಾಲ ಕಾಂಗ್ರೆಸ್ ಆಡಳಿತ ಕಂಡಿದ್ದ ರಾಜ್ಯಗಳಲ್ಲಿ ಬಿಜೆಪಿ ಬಾವುಟ ಹಾರಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಯುಎಸ್ ನ ಬಿಸಿನೆಸ್ ಮ್ಯಾಗಜೀನ್ ಹೊಗಳಿದೆ.

ವಿಶೇಷವೆಂದರೆ 2002ರ ಗೋಧ್ರಾ ಹತ್ಯಾಕಾಂಡದ ಬಗ್ಗೆಯೂ ಪ್ರಸ್ತಾಪವಿದ್ದು, ಆಗ ಗುಜರಾತಿನ ಮುಖ್ಯಮಂತ್ರಿಯಾಗಿ ಮೋದಿ ಅವರು ಅಗತ್ಯ ಕ್ರಮಗಳನ್ನು ಕೈಗೊಂಡರು ಎಂದು ಬರೆಯಲಾಗಿದೆ. ಆರ್ಥಿಕ ಬೆಳವಣಿಗೆ, ಯುಎಸ್, ಚೀನಾ ಅಲ್ಲದೆ ನೆರೆಯ ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಮೋದಿ ಅವರ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.

Modi ranked 15th on Forbes power list; Putin tops

ಪಟ್ಟಿಯಲ್ಲಿರುವ ಇನ್ನುಳಿದ ಪ್ರಭಾವಿ ಭಾರತೀಯರ ಪೈಕಿ ರಿಲಯನ್ಸ್ ಇಂಡಸ್ಟ್ರೀ ಚೇರ್ಮನ್ ಮುಖೇಶ್ ಅಂಬಾನಿ(36ನೇ ಸ್ಥಾನ), ಆರ್ಸೆಲರ್ ಮಿತ್ತಲ್ ಚೇರ್ಮನ್, ಸಿಇಒ ಲಕ್ಷ್ಮಿ ಮಿತ್ತಲ್(57), ಮೈಕ್ರೋಸಾಫ್ಟ್ ಸಿಇಒ ಭಾರತೀಯ ಮೂಲದ ಸತ್ಯ ನದೆಲ್ಲಾ(64)

ಹೊಸಬರ ಪೈಕಿ ನಾಡೆಲ್ಲ ಆಲ್ಲದೆ ವಾಲ್ ಮಾರ್ಟ್ ಸಿಇಒ ಡಾಂಗ್ ಮೆಕ್ ಮಿಲನ್(29),ಅಲಿಬಾಬಾ ಸಿಇಒ ಜಾಕ್ ಮಾ(30),ಈಜಿಪ್ಟಿನ ದೊರೆ ಅಬ್ದೆಲ್ ಎಲ್ ಸಿಸಿ ಇದ್ದಾರೆ. ಚೀನಾದಿಂದ ಆರು ಜನ, ಭಾರತದಿಂದ ಮೂವರು, ಹಾಂಗ್ ಕಾಂಗ್ ನಿಂದ ಇಬ್ಬರು, ತೈವಾನಿನ ಒಬ್ಬರು ಅತ್ಯಂತ ಪ್ರಭಾವಿಶಾಲಿಗಳ ಪಟ್ಟಿಯಲ್ಲಿ ಕಂಡು ಬಂದಿದ್ದಾರೆ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ (5) ಸೇರಿದಂತೆ 9 ಮಂದಿ ಮಹಿಳೆಯರು ಪಟ್ಟಿಯಲ್ಲಿದ್ದಾರೆ.ಟಾಪ್ ಸ್ಥಾನಗಳಲ್ಲಿ ಪುಟಿನ್ ಮೊದಲ ಸ್ಥಾನಕ್ಕೇರಿದ್ದು ಬಿಟ್ಟರೆ ಉಳಿದಂತೆ ಭಾರಿ ಬದಲಾವಣೆ ಕಂಡು ಬಂದಿಲ್ಲ, ಚೀನಾದ ಪ್ರದಹನ ಕಾರ್ಯದರ್ಶಿ, ಅಧ್ಯಕ್ಷ ಕ್ಸಿ ಜಿಂಪಿಂಘ್ (3), ಪೋಪ್ ಫ್ರಾನ್ಸಿಸ್ (4) ಹಾಗೂ ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ (5) ಜಾನೆತ್ ಯೆಲ್ಲೆನ್(6), ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಸಹ ಸ್ಥಾಪಕ ಬಿಲ್ ಗೇಟ್ಸ್ (7), ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಅಧ್ಯಕ್ಷ ಮಾರಿಯೋ ಡ್ರಾಗಿ(8), ಗೂಗಲ್ ಸಹ ಸ್ಥಾಪಕರಾದ ಲಾರಿ ಪೇಜ್ ಹಾಗೂ ಸರ್ಗಿ ಬ್ರಿನ್ (9), ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ (10) (ಐಎಎನ್ಎಸ್)

English summary
Indian Prime Narendra Modi on Wednesday joined the world's most powerful people ranking 15th on the Forbes list with Russian President Vladimir Putin once again beating US President Barack Obama to the top spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X