ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಗೆ ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ ಮೋದಿ

By ವಿಕಾಸ್ ನಂಜಪ್ಪ
|
Google Oneindia Kannada News

ವಾಷಿಂಗ್ಟನ್, ಜೂನ್ 27: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತಕ್ಕೆ ಬರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಆಹ್ವಾನ ನೀಡಿದ್ದಾರೆ. ರೋಸ್ ಗಾರ್ಡನ್ ಭೇಟಿ ವೇಳೆ, "ನಾನು ನಿಮ್ಮನ್ನು ಭಾರತಕ್ಕೆ ಆಹ್ವಾನಿಸಲು ಇಚ್ಛಿಸುತ್ತೇನೆ," ಎಂದು ನರೇಂದ್ರ ಮೋದಿ ಟ್ರಂಪ್ ಗೆ ಹೇಳಿದ್ದಾರೆ. ನಾನು ನಿಮ್ಮ ಜತೆ ನಿಮ್ಮ ಕುಟುಂಬವನ್ನೂ ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಈ ಸಂದರ್ಭ ಮಾತನಾಡಿದ ಟ್ರಂಪ್, ಭಾರತ ಮತ್ತು ಅಮೆರಿಕಾ ತಮ್ಮ ತಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಆಹ್ವಾನವನ್ನು ಮಗಳು ಇವಾಂಕಾ ಟ್ರಂಪ್ ಒಪ್ಪಿಕೊಂಡಿದ್ದು ಉದ್ಯಮಶೀಲತೆ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಹೇಳಿದ್ದಾರೆ.

Modi invites Trump and family to India

ಮಾಜಿ ಮಾಡೆಲ್ ಮತ್ತು ಉದ್ಯಮಿ ಇವಾಂಕ ಟ್ರಂಪ್ ತಂದೆ ಡೊನಾಲ್ಡ್ ಟ್ರಂಪ್ ಗೆ ಸಲಹೆಗಾರರಾಗಿದ್ದಾರೆ. ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೋದಿ "ನಾನು ಇವಾಂಕಾರನ್ನು ಸ್ವಾಗತಿಸುವುದನ್ನು ಎದುರು ನೋಡುತ್ತಿದ್ದೇನೆ," ಎಂದು ಹೇಳಿದ್ದಾರೆ.

ಎರಡು ಜಾಗತಿಕ ಶಕ್ತಿ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧ ನ್ಯಾಯೋಚಿತವಾದದ್ದು ಮತ್ತು ಪರಸ್ಪರ ಅವಲಂಬಿತವಾಗಿದೆ. ಹೀಗಾಗಿ ಅಮೆರಿಕಾದ ಸರಕುಗಳು ಭಾರತೀಯ ಮಾರುಕಟ್ಟೆ ತಲುಪಲು ಇರುವ ಻ಅ಻ಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

English summary
Prime Minister Narendra Modi invited US President Donald Trump to visit India. I would like to invite you to India, Modi told Trump as the meeting at the Rose Garden. I invite you with your family, Modi also said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X