ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ವ್ಯಾಲಿಯಲ್ಲಿ ಮೋದಿ, ಡಿಜಿಟಲ್ ಇಂಡಿಯಾ ಮೋಡಿ

By Mahesh
|
Google Oneindia Kannada News

ಕ್ಯಾಲಿಫೋರ್ನಿಯಾ, ಸೆ.27: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಸಿಇಒಗಳನ್ನು ಭೇಟಿ ಮಾಡಿದ್ದಾರೆ. ಡಿಜಿಟಲ್ ಇಂಡಿಯಾ ಹಾಗೂ ಭಾರತದಲ್ಲಿ ಸ್ಟಾರ್ ಅಪ್ ಕಂಪನಿಗಳಿಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮೋದಿ ಅವರು ಐಟಿ ದಿಗ್ಗಜರಿಗೆ ತಿಳಿಸಿದ್ದಾರೆ.

ಅಮಿ ಬೆರಾ, ಜಾರ್ಜ್ ಹೋಲ್ಡಿಂಗ್ ಸೇರಿ ಅಮೆರಿಕದ ಪ್ರಭಾವಿ ಸಂಸದರು ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಟೆಸ್ಲಾ, ಫೇಸ್​ಬುಕ್, ಗೂಗಲ್, ಕ್ವಾಲ್ ಕಾಮ್ ​ನಂಥ ಐಟಿ ದಿಗ್ಗಜ ಸಂಸ್ಥೆಗಳ ಸಿಇಒಗಳ ಜತೆ ವಿಚಾರ ವಿನಿಮಯ, ಮಹತ್ವದ ಡಿನ್ನರ್ ಕಾರ್ಯಕ್ರಮವನ್ನು ಮೋದಿ ಅವರು ಯಶಸ್ವಿಯಾಗಿ ಪೂರೈಸಿದ್ದಾರೆ.[ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮಾಡಿದ ಸಿಡಿಲಿನಂಥ ಭಾಷಣ ಕೇಳಿ]

ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ ಮೋದಿಯವರ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಐಟಿ ದಿಗ್ಗಜರು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಗೆ ಉತ್ಸುಕರಾಗಿದ್ದಾರೆ. ಟೆಸ್ಲಾ ಕಾರು ಕಂಪನಿ, ಗೂಗಲ್ ಸೇರಿದಂತೆ ಪ್ರಮುಖ ಸಂಸ್ಥೆಯ ಯಶೋಗಾಥೆಯನ್ನು ಕಾರ್ಯವೈಖರಿಯನ್ನು ಕಂಡ ಮೋದಿ ಅವರು ಭಾರತದಲ್ಲಿ ಮೇಕ್ ಇನ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆ ಸಾಕಾರಕ್ಕೆ ಸಹಕರಿಸುವಂತೆ ಕೋರಿದ್ದಾರೆ.

33 ವರ್ಷಗಳ ನಂತರ ಭಾರತ ಪ್ರಧಾನಿಯ ಭೇಟಿ

33 ವರ್ಷಗಳ ನಂತರ ಭಾರತ ಪ್ರಧಾನಿಯ ಭೇಟಿ

ಗೂಗಲ್ ಕ್ಯಾಂಪಸ್ ಭೇಟಿ, ಭಾರತ ಮೂಲದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರೊಂದಿಗೆ ಮಾತುಕತೆ, ಟೆಸ್ಲಾ ಕಂಪನಿ ಹಾಗೂ ಪುನರ್ ಬಳಕೆ ಇಂಧನ, ಶಕ್ತಿ ಬಗ್ಗೆ ಎಲೊನ್ ಮಸ್ಕ್ ಜೊತೆ ಚರ್ಚೆ, ಆಪಲ್ ಸಿಒಇ ಟಿಮ್ ಕುಕ್ ಜೊತೆ ಚರ್ಚೆ,
ಅಡೋಬ್ ಸಿಇಒ ಶಂತನು ನಾರಾಯಣ್ ಭೇಟಿ, ಅಂತ್ಯದಲ್ಲಿ ಯುಎಸ್ ಡಿಒ ಸಿ ಸ್ಟಾನ್ ಫೋರ್ಡ್ ವಿವಿಯಲ್ಲಿ ಭಾಷಣ, ಸ್ಟಾರ್ ಅಪ್ ಕಂಪನಿಗಳ ಬಗ್ಗೆ ಮಾಹಿತಿ ಇವಿಷ್ಟು ಮೋದಿ ಅವರ ಕಾರ್ಯಕ್ರಮವಾಗಿದೆ.

ಮೈಕ್ರೋಸಾಫ್ಟ್ ಸಂಸ್ಥೆಯಿಂದ ಭಾರತಕ್ಕೆ ಭರವಸೆ

ಮೈಕ್ರೋಸಾಫ್ಟ್ ಸಂಸ್ಥೆಯಿಂದ ಭಾರತಕ್ಕಾಗಿ ವಿಶೇಷ ಸಾಧನ, ತಂತ್ರಾಂಶ ರಚನೆಯ ಭರವಸೆ ಸಿಕ್ಕಿದೆ. ಕ್ವಾಲ್ ಕಾಮ್, ಸಿಸ್ಕೋ, ಅಡೋಬ್, ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳ ಉದ್ಯಮಿಗಳನ್ನು ಮೋದಿ ಭೇಟಿ ಮಾಡಿದ್ದಾರೆ

ಡಿಜಿಟಲ್ ಇಂಡಿಯಾ ಬಗ್ಗೆ ಆಪಲ್ ಆಸಕ್ತಿ

ಭಾರತದೊಡನೆ ಆಪಲ್ ಸಂಸ್ಥೆ ಉತ್ತಮ ಬಾಂಧವ್ಯ ಹೊಂದಿದೆ. ಸ್ಟೀವ್ ಜಾಬ್ಸ್ ಅವರು ಭಾರತದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ ಜೊತೆ ನಾವು ಕೈಜೋಡಿಸಲು ಸಿದ್ಧ ಎಂದ ಆಪಲ್ ಸಿಇಒ ಟಿಮ್ ಕುಕ್

ಟೆಸ್ಲಾ ಕಂಪನಿಗೆ ಭೇಟಿ ನೀಡಿದ ಮೋದಿ

ಟೆಸ್ಲಾ ಕಂಪನಿಗೆ ಭೇಟಿ ನೀಡಿದ ಮೋದಿ ಅವರು ಅಲ್ಲಿನ 14,000 ನೌಕರರು ಹಾಗೂ ಕಾರ್ಖಾನೆಯ ವಾತಾವರಣದ ಮಾಹಿತಿ ಪಡೆದುಕೊಂಡರು.

ಸಿಇಒಗಳ ಜೊತೆಗೆ ಭಾರತೀಯ ಸಮುದಾಯದ ಭೇಟಿ

ಸಿಲಿಕಾನ್ ವ್ಯಾಲಿಯಲ್ಲಿರುವ ಸಿಖ್ ಹಾಗೂ ಗುಜರಾತ್ ಸಮುದಾಯವನ್ನು ಮೋದಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕ್ಯಾಲಿಫೋರ್ನಿಯಾಗೆ ಬಂದಿಳಿದ ಮೋದಿಗೆ ಸಿಕ್ಕ ಸ್ವಾಗತ

ಕ್ಯಾಲಿಫೋರ್ನಿಯಾಗೆ ಬಂದಿಳಿದ ಮೋದಿಗೆ ಸಿಕ್ಕ ಸ್ವಾಗತ ಈ ರೀತಿ ಇತ್ತು.

English summary
Social media is reducing social barriers. It connects people on the strength of human values, not identities- PM Modi. This is the first time in 33 years that an Indian PM has visited the West Coast region, despite the large concentration of Indian-American and IT workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X