ಝಾಕೀರ್ ನಾಯ್ಕ್ ಗಡಿಪಾರಿಗೆ ಮೋದಿ ಕೇಳಿಯೇ ಇಲ್ಲ: ಮಲೇಷ್ಯಾ ಪ್ರಧಾನಿ
ಕ್ವಾಲಾಲಂಪುರ, ಸೆಪ್ಟೆಂಬರ್ 17: ವಿವಾದಿತ ಇಸ್ಲಾಂ ಧರ್ಮ ಪ್ರಚಾರ ಝಾಕೀರ್ ನಾಯ್ಕ್ ನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ ಎಂಬ ವರದಿಗಳನ್ನು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಮಂಗಳವಾರ ತಳ್ಳಿಹಾಕಿದ್ದಾರೆ.
'ಹೆಚ್ಚಿನ ದೇಶಗಳೇನೂ ಆತನ ಗಡಿಪಾರಿಗೆ ಕೇಳಿಕೊಂಡಿಲ್ಲ. ಭಾರತ ಈ ಬಗ್ಗೆ ಒತ್ತಾಯ ಮಾಡಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆ ವ್ಯಕ್ತಿ ಭಾರತಕ್ಕೆ ಬೇಕಾಗಿದ್ದಾನೆ ಎಂದು ನನಗೆ ತಿಳಿಸಿಲ್ಲ. ಈ ವ್ಯಕ್ತಿ ಭಾರತಕ್ಕೆ ತೊಂದರೆ ನೀಡಿರಬಹುದು' ಎಂದು ಮಹತಿರ್ ಅವರು ರೇಡಿಯೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ರಷ್ಯಾದ ಫಾರ್ ಈಸ್ಟರ್ನ್ ನಗರದಲ್ಲಿ ನಡೆದ ಐದನೇ ಈಸ್ಟ್ ಎಕನಾಮಿಕ್ ಫೋರಂನ ಸಂದರ್ಭದಲ್ಲಿ ಮೋದಿ ಅವರು ಮೊಹಮ್ಮದ್ ಮಹತಿರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಇಬ್ಬರೂ ನಾಯಕರು ಝಾಕೀರ್ ನಾಯ್ಕ್‌ನ ಗಡಿಪಾರಿನ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದರು.

'ಝಾಕೀರ್ ನಾಯ್ಕ್‌ನ ಗಡಿಪಾರಿನ ಬಗ್ಗೆ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಕಚೇರಿಗಳು ಸಂಪರ್ಕದಲ್ಲಿ ಇರುವಂತೆ ಮತ್ತು ಇದು ನಮಗೆ ಮಹತ್ವದ ವಿಚಾರವಾಗಿದೆ ಎಂಬ ಬಗ್ಗೆ ಉಭಯ ದೇಶಗಳು ನಿರ್ಧರಿಸಿವೆ' ಎಂದು ಹೇಳಿದ್ದರು.
ಹಿಂದಿನ ಸರ್ಕಾರ ಝಾಕೀರ್ ನಾಯ್ಕ್‌ಗೆ ಕಾಯಂ ಪೌರತ್ವ ನೀಡಿತ್ತು. ಈಗ ಆತನನ್ನು ಒಂದು ಸ್ಥಳಕ್ಕೆ ಕಳುಹಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಮಲೇಷ್ಯಾದಲ್ಲಿ ಸಾರ್ವಜನಿಕವಾಗಿ ಮಾತನಾಡಲು ಆತನಿಗೆ ಅವಕಾಶ ನೀಡುವುದಿಲ್ಲ ಎಂದು ಮಹತಿರ್ ತಿಳಿಸಿದ್ದಾರೆ.
'ಆತ ನಮ್ಮ ದೇಶದ ಪ್ರಜೆಯಲ್ಲ. ಆತನಿಗೆ ಪೌರತ್ವ ನೀಡಲಾಗಿದೆ. ಹಿಂದಿನ ಸರ್ಕಾರ ಆತನಿಗೆ ಈ ಮಾನ್ಯತೆ ನೀಡಿದೆ. ಕಾಯಂ ಪೌರತ್ವ ನೀಡಿದೆ ಎಂಬಮಾತ್ರಕ್ಕೆ ಆತ ಈ ದೇಶದ ವ್ಯವಸ್ಥೆ ಮತ್ತು ರಾಜಕೀಯದ ಕುರಿತು ಮಾತನಾಡಲು ಅವಕಾಶವಿದೆ ಎಂದಲ್ಲ. ಆತ ಅದನ್ನು ಉಲ್ಲಂಘನೆ ಮಾಡಿದ್ದಾನೆ. ಆತನಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ' ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಜನಿಸಿದ ಝಾಕೀರ್ ನಾಯ್ಕ್, ಇಸ್ಲಾಂ ಧರ್ಮದ ಪ್ರವಚನದ ವೇಳೆ ಉಗ್ರವಾದ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ 'ಪೀಸ್ ಟಿವಿ'ಯನ್ನು ಸ್ಥಾಪಿಸಿದ್ದ ಆತನ ಮೇಲೆ ಭಯೋತ್ಪಾದನೆಯ ಗಂಭೀರ ಪ್ರಕರಣಗಳಿವೆ.
ಭಾರತದಿಂದ ಪರಾರಿಯಾಗಿರುವ ಆತ, 2017ರಿಂದ ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಅಲ್ಲಿಯೂ ಆತ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದ್ದ. ಆಗಸ್ಟ್ 3ರಂದು ಮಾತನಾಡಿದ್ದ ನಾಯ್ಕ್, 'ಭಾರತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರಿಗಿಂತ 100 ಪಟ್ಟು ಹಕ್ಕುಗಳನ್ನು ಮಲೇಷ್ಯಾದ ಹಿಂದೂಗಳು ಪಡೆಯುತ್ತಿದ್ದಾರೆ. ಆದರೂ ಮಲೇಷ್ಯಾ ಪ್ರಧಾನಿಗಿಂತ ಭಾರತದ ಪ್ರಧಾನಿಯನ್ನು ಬೆಂಬಲಿಸುತ್ತಾರೆ' ಎಂದು ಹೇಳಿದ್ದ.
ಬಳಿಕ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಆತ ಯಾವುದೇ ರಾಜ್ಯದಲ್ಲಿಯೂ ಭಾಷಣ ಮಾಡದಂತೆ ನಿಷೇಧ ಹೇರಲಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications