ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಿಸ್ ಇಂಗ್ಲೆಂಡ್: ಮೇಕಪ್ ಇಲ್ಲದೆ ಸ್ಪರ್ಧಿಸಿದ ಮೊದಲ ಸ್ಪರ್ಧಿ

|
Google Oneindia Kannada News

ಇಂಗ್ಲೆಂಡ್, ಆಗಸ್ಟ್ 28: ಮಿಸ್ ಇಂಗ್ಲೆಂಡ್ ಸ್ಪರ್ಧೆಯ ಶತಮಾನದ ಸುದೀರ್ಘ ಇತಿಹಾಸದಲ್ಲಿ ಯಾವುದೇ ಮೇಕಪ್ ಧರಿಸದೆ ಮೊದಲ ಬಾರಿಗೆ ಯುವತಿಯೊಬ್ಬರು ಸ್ಪರ್ಧಿಸಿದ್ದಾರೆ. ಈ ಮೂಲಕ 20 ವರ್ಷ ವಯಸ್ಸಿನ ಯುವತಿಯೊಬ್ಬರು ಫೈನಲಿಸ್ಟ್ ಸ್ಪರ್ಧೆಯಲ್ಲಿ ಮೇಕಪ್ ಇಲ್ಲದೆ ಸ್ಪರ್ಧಿಸಿದ ಮೊದಲ ಸ್ಪರ್ಧಿಯಾಗಿದ್ದಾರೆ.

ಲಂಡನ್‌ನಲ್ಲಿ ರಾಜಕೀಯ ವಿಜ್ಞಾನದ ವಿದ್ಯಾರ್ಥಿನಿಯಾಗಿರುವ ಮೆಲಿಸಾ ರವೂಫ್, ಮಿಸ್ ಇಂಗ್ಲೆಂಡ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಮೇಕಪ್ ಧರಿಸದೆ ಭಾಗವಹಿಸಿ, ಮುನ್ನಡೆದಿದ್ದಾರೆ. ಸೆಮಿಫೈನಲ್‌ನಲ್ಲಿ ಗೆಲುವು ಪಡೆದಿರುವ ಅವರು ಈಗ ಅಕ್ಟೋಬರ್‌ನಲ್ಲಿ ನಡೆಯಲಿರುವ ಮಿಸ್ ಇಂಗ್ಲೆಂಡ್ ಕಿರೀಟವನ್ನು ಪಡೆಯಲು ಇತರ 40 ಮಹಿಳೆಯರ ಜೊತೆಗೆ ಸ್ಪರ್ಧಿಸಲಿದ್ದಾರೆ.

ಭಾರತೀಯ ಮೂಲದ ಶ್ರೀ ಸೈನಿ 2021ರ ವಿಶ್ವ ಸುಂದರಿ ಸ್ಪರ್ಧೆಯ ಮೊದಲ ರನ್ನರ್ ಅಪ್ಭಾರತೀಯ ಮೂಲದ ಶ್ರೀ ಸೈನಿ 2021ರ ವಿಶ್ವ ಸುಂದರಿ ಸ್ಪರ್ಧೆಯ ಮೊದಲ ರನ್ನರ್ ಅಪ್

"ಮೆಲಿಸಾ ಅವರು ಫೈನಲ್‌ಗೆ ಪ್ರವೇಶಿಸಿದ ಮೊದಲ ಮಿಸ್ ಇಂಗ್ಲೆಂಡ್ ಸ್ಪರ್ಧಿಯಾಗಿದ್ದಾರೆ, ಅವರು ಸಂಪೂರ್ಣವಾಗಿ ಮೇಕಪ್ ಧರಿಸದೆ ಭಾಗವಹಿಸಿದ್ದಾರೆ" ಎಂದು ಮಿಸ್ ಇಂಗ್ಲೆಂಡ್‌ನ ಇನ್‌ಸ್ಟಾಗ್ರಾಮ್ ಪೋಸ್ಟ್ ಹೇಳಿದೆ.

Miss England: 20-Year-Old Makes History As Pageants First Makeup-Free Contestant

ಮೆಲಿಸಾ ರವೂಫ್ ಸುದ್ದಿ ಮಾಧ್ಯಮಗಳಿಗೆ ನೀಡದ ಸಂದರ್ಶನದಲ್ಲಿ, ತಾನು ಆಂತರಿಕ ಸೌಂದರ್ಯವನ್ನು ಉತ್ತೇಜಿಸಲು ಬಯಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಬರುವ ಸೌಂದರ್ಯವನ್ನು ಹೆಚ್ಚುಗೊಳಿಸುವ ಆದರ್ಶದ ಮಾತುಗಳಿಗೆ ಹಾಕುತ್ತಾರೆ.

"ವಿವಿಧ ವಯಸ್ಸಿನ ಅನೇಕ ಹುಡುಗಿಯರು ಮೇಕ್ಅಪ್ ಧರಿಸುತ್ತಾರೆ ಎಂದು ನನಗೆ ತಿಳಿದಿದೆ. ನನಗೆ ಈ ಬಗ್ಗೆ ಬಹಳಷ್ಟು ಅರ್ಥವಾಗಿದೆ. ಅವರು ಮೇಕ್ಅಪ್ ಧರಿಸುವಂತೆ ಒತ್ತಡಕ್ಕೆ ಒಳಗಾಗಿ ಮೇಕಪ್ ಧರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

20 ವರ್ಷದ ಯುವತಿ ಮೆಲಿಸಾ ರವೂಫ್, "ಒಬ್ಬರು ತಮ್ಮದೆ ಸ್ವಂತ ಚರ್ಮದಲ್ಲಿ ಸಂತೋಷವಾಗಿದ್ದರೆ, ನಮ್ಮ ಮುಖವನ್ನು ಮೇಕಪ್‌ನಿಂದ ಮುಚ್ಚಿಕೊಳ್ಳಬಾರದು. ನಮ್ಮ ನ್ಯೂನತೆಗಳು ನಮ್ಮನ್ನು ನಾವು ಯಾರು ಎಂಬುದನ್ನು ತೋರಿಸುತ್ತವೆ. ಅದೇ ಪ್ರತಿಯೊಬ್ಬ ವ್ಯಕ್ತಿಯನ್ನು ಇನ್ನೊಬ್ಬರಿಂದ ವಿಭಿನ್ನವಾಗಿಸುತ್ತದೆ" ಎಂದು ಹೇಳುತ್ತಾರೆ.

Miss England: 20-Year-Old Makes History As Pageants First Makeup-Free Contestant

ಇದಲ್ಲದೆ, ಮಿಸ್ ಇಂಗ್ಲೆಂಡ್ ಫೈನಲ್‌ನಲ್ಲಿಯೂ ಮೇಕಪ್ ಧರಿಸದಿರಲು ಯೋಚಿಸಿರುವ ಆಕೆ, "ಇದು ಭಯಪಡಿಸುತ್ತದೆ, ಆದರೆ ಅದ್ಭುತ ಅನುಭವ" ಎಂದು ಹೇಳಿದರು. ತಾನು ಚಿಕ್ಕ ವಯಸ್ಸಿನಲ್ಲೇ ಮೇಕಪ್ ಮಾಡಿಕೊಳ್ಳಲು ಪ್ರಾರಂಭಿಸಿದರೂ, ಸ್ಪರ್ಧೆಗಾಗಿ ಯೋಚಿಸಿದ ನಂತರ ಅದನ್ನು ಬಿಟ್ಟು ಬಿಡಲು ತ್ಯಜಿಸಲು ನಿರ್ಧರಿಸಿದೆ ಎಂದು ಬಹಿರಂಗಪಡಿಸಿದ್ದಾರೆ.

"ನಾನು ಸೌಂದರ್ಯದ ಮಾನದಂಡಗಳನ್ನು ಹೊಂದಿದ್ದೇನೆ ಎಂದು ನಾನು ಎಂದಿಗೂ ಭಾವಿಸಲಿಲ್ಲ. ನನ್ನ ಸ್ವಂತ ಚರ್ಮದಲ್ಲಿ ನಾನು ಸುಂದರವಾಗಿದ್ದೇನೆ ಎಂದು ನಾನು ಇತ್ತೀಚೆಗೆ ಒಪ್ಪಿಕೊಂಡಿದ್ದೇನೆ. ಅದಕ್ಕಾಗಿಯೇ ನಾನು ಯಾವುದೇ ಮೇಕಪ್ ಇಲ್ಲದೆ ಸ್ಪರ್ಧಿಸಲು ನಿರ್ಧರಿಸಿದೆ" ಎಂದು ಅವರು ವಿವರಿಸಿದರು.

"ಇದು ನಾನು, ನಾನು ನಾನೆಂದು ಒಪ್ಪಿಕೊಳ್ಳಲು ಮತ್ತು ನಾನು ಯಾರೆಂಬುದನ್ನು ಹಂಚಿಕೊಳ್ಳಲು ಹೆದರುವುದಿಲ್ಲ. ಮೆಲಿಸಾ ನಿಜವಾಗಿಯೂ ಯಾರೆಂದು ತೋರಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ.

ಮಿಸ್ ಇಂಗ್ಲೆಂಡ್‌ನ ನಿರ್ದೇಶಕಿ ಆಂಜಿ ಬೀಸ್ಲಿ, ಈ ಹಿಂದೆಯು ಮೇಕಪ್-ಮುಕ್ತ ಮಾಡೆಲಿಂಗ್ ರೌಂಡ್ ಅನ್ನು ಪರಿಚಯಿಸಲಾಗಿತ್ತು. ಆದರೆ ಮೇಕಪ್ ಇಲ್ಲದೆ ಸ್ಪರ್ಧಿಸಲು ಆಯ್ಕೆ ಮಾಡಿರುವುದು ಇದೇ ಮೊದಲು ಎಂದು ಮಾಹಿತಿ ನೀಡಿದ್ದಾರೆ.

20 ವರ್ಷದ ಯುವತಿಯ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಆಂಜಿ ಬೀಸ್ಲಿ, "ಮಿಸ್ ಇಂಗ್ಲೆಂಡ್ 2022 ರಲ್ಲಿ ಮೆಲಿಸಾಗೆ ಶುಭ ಹಾರೈಸುತ್ತೇನೆ. ನಿಮ್ಮ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಲು ನಾನು ಮೇಕಪ್ ಮಾಡುತ್ತೇನೆ. ಆದರೆ, ಯುವಜನತೆ ಅದನ್ನು ಮುಖವಾಡದಂತೆ ಕಾಣುವಷ್ಟು ದಪ್ಪವಾಗಿ ಧರಿಸುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ಮೇಕಪ್ ಎನ್ನುವುದು ಈ ಕಾಲದ ಅನಿವಾರ್ಯತೆ ಎನ್ನುವ ಮಟ್ಟಕ್ಕೆ ಯುಜನತೆಯ ತಲೆಯಲಲ್ಇ ತುಂಬಿಕೊಂಡಿದೆ. ಅದಕ್ಕೆ ಸೌಂದರ್ಯ ಸ್ಪರ್ಧೆಗಳು ಹೊರತಲ್ಲ. ಆದರೆ, 20 ವರ್ಷದ ಯುವತಿ ಮೆಲಿಸಾ ರವೂಫ್ ನಿರ್ಧಾರ ಕೆಲವರಲ್ಲಾದರೂ ಹೊಸ ಯೋಚನೆಗಳನ್ನು ಬಿತ್ತಲಿ ಎಂಬುದಷ್ಟೇ ನಮ್ಮ ಆಶಯ.

English summary
20-year-old Miss England finalist has become the first makeup-free contestant in the pageant's nearly century-long history, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X