ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮೆಕ್ಸಿಕೋದ ಮಧ್ಯ ಪೆಸಿಫಿಕ್ ಕರಾವಳಿಯಲ್ಲಿ 7.6 ತೀವ್ರತೆ ಭೂಕಂಪನ

|
Google Oneindia Kannada News

ಮೆಕ್ಸಿಕೋ ಸಿಟಿ, ಸೆಪ್ಟೆಂಬರ್ 20: ಮೆಕ್ಸಿಕೋದ ಮಧ್ಯ ಪೆಸಿಫಿಕ್ ಕರಾವಳಿಯಲ್ಲಿ ಸೋಮವಾರ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿಯಲ್ಲಿ ಭೂಕಂಪದ ಎಚ್ಚರಿಕೆಯನ್ನು ಮೂಡಿಸಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 1:05ಕ್ಕೆ ಸಂಭವಿಸಿದ ಭೂಕಂಪದಿಂದ ಯಾವುದೇ ಸಾವು-ನೋವಿನ ಬಗ್ಗೆ ವರದಿ ಆಗಿಲ್ಲ. ಯುಎಸ್ ಜಿಯೋಲಾಜಿಕ್ ಸಮೀಕ್ಷೆಯ ಪ್ರಕಾರ, ಇದು ಆರಂಭದಲ್ಲಿ 7.5ರಷ್ಟಿತ್ತು.

Breaking news: ಲಡಾಕ್ ಪ್ರಾಂತ್ಯದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ
ಈ ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ 37 ಕಿಮೀ (23 ಮೈಲುಗಳು) ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಗಡಿಯ ಬಳಿ ಮತ್ತು 15.1 ಕಿಮೀ (9.4 ಮೈಲಿಗಳು) ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಅದು ಹೇಳಿದೆ.

Mexico Pacific coast reports 7.6 magnitude Strong earthquake

ಭೂಕಂಪನದಲ್ಲಿ ಯಾವುದೇ ಹಾನಿಯ ವರದಿಗಳಿಲ್ಲ:
ಕೋಲ್ಕೊಮನ್ ಪಟ್ಟಣದಲ್ಲಿನ ಕಟ್ಟಡಗಳಲ್ಲಿನ ಕೆಲವು ಬಿರುಕುಗಳು ಕಾಣಿಸಿಕೊಂಡಿವೆ. ಇದನ್ನು ಮೀರಿ ಆ ರಾಜ್ಯದಲ್ಲಿ ಗಮನಾರ್ಹ ಹಾನಿಯ ಬಗ್ಗೆ ಯಾವುದೇ ವರದಿಗಳಿಲ್ಲ ಎಂದು ಮೈಕೋಕಾನ್‌ನ ಸಾರ್ವಜನಿಕ ಭದ್ರತಾ ಇಲಾಖೆ ಹೇಳಿದೆ.
1985 ಮತ್ತು 2017ರಲ್ಲಿ ಅದೇ ದಿನಾಂಕದಂದು ಸಂಭವಿಸಿದ ಪ್ರಮುಖ ಭೂಕಂಪಗಳನ್ನು ಗುರುತಿಸಲಾಗಿತ್ತು. ರಾಷ್ಟ್ರವ್ಯಾಪಿ ಭೂಕಂಪದ ಸಿಮ್ಯುಲೇಶನ್‌ನಲ್ಲಿ ಭೂಕಂಪದ ಎಚ್ಚರಿಕೆಯನ್ನು ನೀಡಿದ ಒಂದು ಗಂಟೆಯ ನಂತರ ಹೊಸ ಭೂಕಂಪದ ಸೂಚನೆಯಿಂದ ರಾಜಧಾನಿಯಲ್ಲಿ ಯಾವುದೇ ಹಾನಿಯ ವರದಿ ಆಗಿಲ್ಲ ಎಂದು ಮೆಕ್ಸಿಕೋ ಸಿಟಿ ಮೇಯರ್ ಕ್ಲೌಡಿಯಾ ಶೀನ್‌ಬಾಮ್ ಕೂಡ ಟ್ವೀಟ್ ಮಾಡಿದ್ದಾರೆ.

English summary
Mexico Pacific coast reports 7.6 magnitude Strong earthquake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X