ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಸಿಕೊ: ಬಂದೂಕುಧಾರಿಗಳಿಂದ 15 ಮಂದಿ ಹತ್ಯೆ

|
Google Oneindia Kannada News

ಮೆಕ್ಸಿಕೊ, ಮೇ 25: ಹದಿನೈದು ಮಂದಿ ಬಂದೂಕುಧಾರಿಗಳು ಮೆಕ್ಸಿಕೊದ ಸಿಲಯಾ ನಗರದಲ್ಲಿ ಮಂಗಳವಾರ ನಡೆಸಿದ ಹತ್ಯಾಕಾಂಡದಲ್ಲಿ 8 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 11 ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ.

ಅಪರಾಧ ಚುಟುವಟಿಕೆಗಳಲ್ಲಿ ನಿರತರಾಗಿರುವ ಗ್ಯಾಂಗ್ ಒಂದರ 15 ಮಂದಿ ಸದಸ್ಯರು ಆ ಪ್ರದೇಶದ ಹಿಡಿತ ಸಾಧಿಸಲು ಗುಂಡಿನ ದಾಳಿ ನಡೆಸಿದ್ದಾರೆ. ಸಿಲಿಯಾದ ಎರಡು ಬಾರ್‌ಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ಕೇವಲ ಒಂದು ನಿಮಿಷದಲ್ಲಿ 50ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದಾರೆ.

ಈ ವೇಳೆ ಬಾರ್‌ನಲ್ಲಿದ್ದ 7 ಮಂದಿ ಮಹಿಳೆಯರು ಮತ್ತು ಮೂವರು ಪುರುಷರು ಸ್ಥಳದಲ್ಲೇ ಅಸುನೀಗಿದ್ದಾರೆ. ಒಬ್ಬ ಮಹಿಳೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

Mexico: Gunmen kills 11 in a massacre at Two bars

ಪ್ರದೇಶದ ಹಿಡಿತ ಸಾಧಿಸಲು ದಾಳಿ: ಗುಂಡಿನ ದಾಳಿಯ ನಂತರ ಬಾರ್‌ನಲ್ಲಿದ್ದ ಅನೇಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಎಲ್ಲೆಡೆ ರಕ್ತದ ಕಲೆಗಳು ಇತ್ತು. ಬಾರ್‌ನ ಟೇಬಲ್‌ಗಳ ಮಧ್ಯದಲ್ಲಿ ಮಹಿಳೆಯರ ಮೃತದೇಹಗಳು ಬಿದ್ದಿತ್ತು. ಇಡೀ ದೃಶ್ಯ ಮನಕಲಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದಾಳಿ ನಡೆಸಿದವರು ಸಂತ ರೋಸ ಡಿ ಲಿಮಾ ಗ್ಯಾಂಗ್ ಗೆ ಸೇರಿದವರಾಗಿದ್ದಾರೆ. ಬಾರ್ ಮಾಲೀಕರು ಅವರ ವಿರೋಧಿ ಗ್ಯಾಂಗ್ ಆಗಿರುವ ಜಲಿಸ್ಕೊ ಕಾಟರ್ಲ್ ಗೆ ಬೆಂಬಲ ವ್ಯಕ್ತಡಿಸಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

Mexico: Gunmen kills 11 in a massacre at Two bars

ಪೊಲೀಸರಿಂದ ನಾಕಾಬಂದಿ; ಘಟನಾ ಸ್ಥಳದಲ್ಲಿ ದಾಳಿ ನಡೆಸಿದ ಗುಂಪಿನಿಂದ ಎಚ್ಚರಿಕೆಯ ಸಂದೇಶ ಕೂಡ ಪತ್ತೆಯಾಗಿದೆ. ಮೂವರು ಮಹಿಳೆಯರ ಮೃತದೇಹಗಳ ನಡುವೆ ಕಾರ್ಡ್ ಬೋರ್ಡ್ ಹಾಳೆಯಲ್ಲಿ ಬರೆದಿರುವ ಎಚ್ಚರಿಕೆಯ ಸಂದೇಶವನ್ನು ದುಷ್ಕರ್ಮಿಗಳು ಬಿಟ್ಟು ಹೋಗಿದ್ದಾರೆ.

ಸ್ಥಳಕ್ಕೆ ಗ್ವಾನಾಜುವಾಟೊ ರಾಜ್ಯ ಭದ್ರತಾ ಪಡೆ, ಮೆಕ್ಸಿಕೊದ ರಾಷ್ಟ್ರೀಯ ಭದ್ರತಾ ಪಡೆ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ನಡೆಸಿದ ಗ್ಯಾಂಗ್ ನ ಸದಸ್ಯರ ಬಂಧನಕ್ಕಾಗಿ ನಗರದ ಎಲ್ಲೆಡೆ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ತನಿಖೆ ಕೈಗೊಂಡಿರುವ ಭದ್ರತಾ ಅಧಿಕಾರಿಗಳು ಬಂದೂಕುಧಾರಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗ್ವಾನಾಜುವಾಟೊ ನಗರವು ಮೆಕ್ಸಿಕೊದ ಅತ್ಯಂತ ಹಿಂಸಾತ್ಮಕ ಪ್ರದೇಶಗಳಲ್ಲಿ ಒಂದಾಗಿದೆ. ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್ಗಳು ಈ ಪ್ರದೇಶದ ನಿಯಂತ್ರಣಕ್ಕಾಗಿ ಪರಸ್ಪರ ಗುದ್ದಾಡುತ್ತಿವೆ. ಮೆಕ್ಸಿಕೊ ಸರಕಾರಿ ದಾಖಲೆಗಳ ಪ್ರಕಾರ 2022ರ ಆರಂಭದ ಮೊದಲ ನಾಲ್ಕು ತಿಂಗಳಲ್ಲಿ 933 ಹತ್ಯೆಗಳು ವರದಿಯಾಗಿವೆ. ಮಾರ್ಚ್ ನಲ್ಲಿ ಸಿಲಿಯಾಲ್ಲಿ ಏಳು ಸುಟ್ಟ ಮೃತದೇಹಗಳು ಪತ್ತೆಯಾಗಿವೆ ಎಂದು ಎಎನ್ಐ ವರದಿ ಮಾಡಿದೆ.

English summary
15 Gunmen killed 11 including 8 women in a massacre at 2 bars at the city of Celeya in Mexico.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X