Get Updates
Get notified of breaking news, exclusive insights, and must-see stories!

ಭಾರತದ ಪೌರತ್ವ ವಾಪಸ್ ಮಾಡಿದ ಉದ್ಯಮಿ ಮೆಹುಲ್ ಚೋಕ್ಸಿ

ನವದೆಹಲಿ, ಜನವರಿ 21 : ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಪಡೆದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಅವರು ಭಾರತದ ಪೌರತ್ವವನ್ನು ತೊರೆದಿದ್ದಾರೆ. ರಾಯಭಾರ ಕಚೇರಿಗೆ ಭಾರತದ ಪಾಸ್ ಪೋರ್ಟ್ ನೀಡಿದ್ದಾರೆ. ಜೊತೆಗೆ ಜಾಲಿ ಹಾರ್ಬರ್ ಮಾರ್ಕ್ಸ್ ನಲ್ಲಿ ವಾಸವಾಗಿದ್ದೇನೆ ಎಂದು ಹೊಸ ವಿಳಾಸವನ್ನು ನೀಡಿದ್ದಾರೆ.

ಮೆಹುಲ್ ಚೋಕ್ಸಿ ಅವರ ಪಾಸ್ ಪೋರ್ಟ್ (Z-3396732) ಈಗ ಅಂಟಿಗುವಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿದೆ. ಪಾಸ್ ಪೋರ್ಟ್ ಜತೆಗೆ 177 ಡಾಲರ್ ಕೂಡಾ ನೀಡಿದ್ದಾರೆ.

13 ಸಾವಿರ ಕೋಟಿ ಪಿಎನ್ ಬಿ ಹಗರಣದ ರುವಾರಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಮತ್ತು ಆತನ ಚಲನವಲನಗಳ ಮೇಲೆ ನಿಯಂತ್ರಣ ಇರಿಸುವಂತೆ ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರಕ್ಕೆ ಈಗಾಗಲೇ ಭಾರತ ಮನವಿ ಮಾಡಿದೆ. ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐ ತಂಡಗಳು, ಚೋಕ್ಸಿ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಲಾಗಿದೆ.

Mehul Choksi gives up Indian citizenship, surrenders passport

ಭಾರತದಿಂದ ಪರಾರಿಯಾಗಿರುವ ಚೋಕ್ಸಿ ಸದ್ಯ ವೆಸ್ಟ್ ಇಂಡೀಸ್ ನ ಆಂಟಿಗುವಾ ಹಾಗು ಬಾರ್ಬಡೋಸ್ ನಲ್ಲಿ ನೆಲೆಸಿದ್ದಾರೆ. ಜನವರಿ 15, 2018ರಂದು ಆಂಟಿಗುವಾದ ಪ್ರಜೆಯಾಗಿ ಪೌರತ್ವ ಪಡೆದುಕೊಂಡಿರುವ ಚೋಕ್ಸಿ ಅವರನ್ನು ವಿಚಾರಣೆಗಾಗಿ ಕರೆ ತರಲು ಭಾರತದ ತನಿಖಾ ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ.

ಕಳೆದ ಜುಲೈ ತಿಂಗಳಿನಲ್ಲಿ ಪಿಎನ್ ಬಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ನೀರವ್ ಮೋದಿ ಅವರಿಗೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕಾಗಿ ಯಾವುದೇ ಒಪ್ಪಂದವನ್ನು ಆಂಟಿಗುವಾ ಹಾಗೂ ಭಾರತ ಹೊಂದಿಲ್ಲ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+