ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಇಂಗ್ಲೀಷ್ ಕಡಲ್ಗಾಲುವೆಯಲ್ಲಿ ಮುಳುಗಿದ ದೋಣಿ, 24ಕ್ಕೂ ಅಧಿಕ ಮಂದಿ ದುರ್ಮರಣ

|
Google Oneindia Kannada News

ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಬುಧವಾರದಂದು ಭೀಕರ ದುರಂತ ಸಂಭವಿಸಿದೆ. ದೋಣಿಯೊಂದು ಮುಳುಗಿದ್ದು ಹಲವಾರು ಜನರು ಸಾವನ್ನಪ್ಪಿದ್ದಾರೆ - ಫ್ರಾನ್ಸ್ ಮತ್ತು ಯುಕೆ ನಡುವಿನ ಕಡಲು ಪ್ರದೇಶದಲ್ಲಿ ಚಲಿಸುತ್ತಿದ್ದ ಈ ದೋಣಿ ಗಾಳಿಯ ಹೋಡೆತಕ್ಕೆ ಸಿಲುಕಿ ಮಗುಚಿಕೊಂಡಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.

ಈ ಘಟನೆಯು ಫ್ರೆಂಚ್ ಕರಾವಳಿ ನಗರಗಳಾದ ಕ್ಯಾಲೈಸ್ ಮತ್ತು ಡಂಕರ್ಕ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಸುಮಾರು 24ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಪ್ರಾಥಮಿಕ ವರದಿಗಳು ಬಂದಿವೆ.

ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಸ್ಥಳೀಯ ಮೀನುಗಾರರು ಮಗುಚಿದ ದೋಣಿ ಮತ್ತು ನೀರಿನ ಮೇಲೆ ತೇಲುತ್ತಿರುವ ದೇಹಗಳನ್ನು ಗುರುತಿಸಿದ ನಂತರ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

Many people die in English Channel as boat sinks

"ಇಪ್ಪತ್ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 26 ಜನರು ಜೀವಂತವಾಗಿದ್ದಾರೆ" ಎಂದು ಫ್ರೆಂಚ್ ಜಿಲ್ಲೆ ಟೆಟೆಗೆಮ್‌ನ ಮೇಯರ್ ಮತ್ತು ಉತ್ತರ ಫ್ರಾನ್ಸ್ ಪ್ರದೇಶದ ಸಾರಿಗೆ ಉಪಾಧ್ಯಕ್ಷ ಫ್ರಾಂಕ್ ಧೆರ್ಸಿನ್ ಹೇಳಿದ್ದಾರೆ.

ಮೂವತ್ಮೂರು ವಲಸಿಗರು ದೋಣಿಯಲ್ಲಿದ್ದರು

ಕ್ಯಾಲೈಸ್‌ನಲ್ಲಿ ಮಾತನಾಡಿದ ಫ್ರಾನ್ಸ್‌ನ ಆಂತರಿಕ ಸಚಿವರು, ದೋಣಿ ಮುಳುಗಿದ್ದರಿಂದ 31 ಜನರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ರಾಯಿಟರ್ಸ್ ಪ್ರಕಾರ ಸತ್ತವರಲ್ಲಿ ಐವರು ಮಹಿಳೆಯರು ಮತ್ತು ಒಬ್ಬ ಪುಟ್ಟ ಹುಡುಗಿ ಸೇರಿದ್ದಾರೆ ಎಂದು ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.

ಮುಳುಗಿದ ದೋಣಿಯಿಂದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು. ಘಟನೆಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸುದ್ದಿ ವಾಹಿನಿ ಬಿಎಫ್‌ಎಂ ವರದಿ ಮಾಡಿದೆ.

ವಲಸೆ ಸಮಸ್ಯೆ:
ಈ ವರ್ಷ 25,700 ಕ್ಕೂ ಹೆಚ್ಚು ಜನರು ಸಣ್ಣ ದೋಣಿಗಳಲ್ಲಿ ಯುಕೆಗೆ ಅಪಾಯಕಾರಿ ಪ್ರಯಾಣವನ್ನು ಮಾಡಿದ್ದಾರೆ - 2020 ಕ್ಕೆ ಹೋಲಿಸಿದರೆ ವಲಸೆ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.

ಡೋವರ್ ಜಲಸಂಧಿ(Strait ) ಪ್ರಪಂಚದಲ್ಲೇ ಅತ್ಯಂತ ಜನನಿಬಿಡ ಹಡಗು ಮಾರ್ಗವಾಗಿದೆ ಮತ್ತು ಈ ಹಿಂದೆ ಗಾಳಿ ತುಂಬಬಹುದಾದ ಸಣ್ಣ ಬೋಟುಗಳ ಮೂಲಕ ಬ್ರಿಟನ್‌ಗೆ ದಾಟಲು ಪ್ರಯತ್ನಿಸುತ್ತಿರುವವರ ಜೀವವನ್ನು ಬಲಿ ತೆಗೆದುಕೊಂಡಿದೆ.

ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಫ್ರಾನ್ಸ್‌ನಿಂದ ನಿರ್ಗಮಿಸುವ ಅಕ್ರಮ ವಲಸಿಗರ ಸಂಖ್ಯೆಯನ್ನು "ಸ್ವೀಕಾರಾರ್ಹವಲ್ಲ" ಎಂದು ಪ್ರತಿಕ್ರಿಯಿಸಿದ್ದರು. ಈ ಸಮಸ್ಯೆಯನ್ನು ನಿಭಾಯಿಸಲು 2021-22ರ ಅವಧಿಯಲ್ಲಿ ಫ್ರಾನ್ಸ್‌ಗೆ €62.7m (£54m) ನೀಡುವುದಾಗಿ UK ಭರವಸೆ ನೀಡಿದೆ. (Reuters, AFP, AP)

English summary
Dozens of people die in English Channel as boat sinks. Fishermen in the waters between France and the UK found an empty vessel and bodies in the water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X