ತೈವಾನ್, ನೇಪಾಳದಲ್ಲಿ ಭೂಕಂಪ, ಏಳು ಜನ ಸಾವು
ನವದೆಹೆಲಿ, ಫೆ. 06: ತೈವಾನ್ ಹಾಗೂ ನೇಪಾಳದಲ್ಲಿ ಪ್ರಬಲವಾಗಿ ಭೂಕಂಪ ಸಂಭವಿಸಿದೆ. ಶನಿವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಕನಿಷ್ಠ ಏಳು ಜನ ಸಾವನ್ನಪ್ಪಿರುವ ಸುದ್ದಿ ಬಂದಿದೆ.
ರಿಕ್ಚರ್ ಮಾಪಕದಲ್ಲಿ 6.4 ಪ್ರಮಾಣದಷ್ಟಿತ್ತು. ತೈವಾನಿನೆಲ್ಲೆಡೆ ಆತಂಕ ಮನೆ ಮಾಡಿದೆ. ನಗರ ಪ್ರದೇಶದಿಂದ 224 ಮಂದಿಯನ್ನು ರಕ್ಷಿಸಲಾಗಿದೆ. 17 ಅಂತಸ್ತಿನ ವಸತಿ ಸಮುಚ್ಚಯ ಕುಸಿದು ಬಿದ್ದಿದ್ದು, ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಸುಮಾರು 150 ಜನರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನೇಪಾಳದಲ್ಲಿ 5.2ರಿಕ್ಟರ್ ಮಾಪಕದ ಭೂಕಂಪ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಕಠಂಡುವಿನಲ್ಲಿ ಮತ್ತೊಮ್ಮೆ ಆತಂಕ ಶುರುವಾಗಿದೆ. ಭೂಕಂಪದ ಮೂಲ ಕೇಂದ್ರ ಕಠ್ಮಂಡುವಿನಿಂದ 16 ಕಿ.ಮೀ ದೂರದಲ್ಲಿದೆ ಎಂದು ತಿಳಿದು ಬಂದಿದೆ. ಭೂಕಂಪದ ಪರಿಣಾಮ ಬಿಹಾರದಲ್ಲಿ ಕಂಪನದ ಅನುಭವವಾಗಿದೆ.












Click it and Unblock the Notifications