ಇಸ್ರೇಲ್: ಜೆರುಸಲೇಮ್- ಬೆಥ್ಲೆಹೆಮ್ ಗೆ ಕರಾವಳಿ ಕ್ರೈಸ್ತರ ಪಾದಯಾತ್ರೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಇಸ್ರೇಲ್, ಡಿಸೆಂಬರ್ 12: ಇದು ಕ್ರಿಸ್ಮಸ್ ಸೀಸನ್, ನಮ್ಮ ಕುಡ್ಲದ ಅದೆಷ್ಟೋ ಮಂದಿ ಇಸ್ರೇಲ್ ನಲ್ಲಿ ದುಡಿಯುತ್ತಿದ್ದಾರೆ. ಇಸ್ರೇಲ್ ನಲ್ಲಿ ರುವ ಸುಮಾರು 3000ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಶನಿವಾರ ಸುಮಾರು 10ಕಿ.ಮೀ ಪಾದಯಾತ್ರೆಯನ್ನು ನಡೆಸಿ ಯೇಸುವಿನ ಜನ್ಮ ಸ್ಧಳದ ದರ್ಶನವನ್ನು ಪಡೆದಿದ್ದಾರೆ.

ಇಸ್ರೇಲ್ ನ ವಿವಿಧ ಭಾಗಗಳಿಂದ ಬಸ್ ಗಳ ಮೂಲಕ ಜೆರುಸಲೇಮ್ ಗೆ ಬಂದು ಅಲ್ಲಿಂದ ಪಾದಯಾತ್ರೆಯ ಮೂಲಕ ಯೇಸುವಿನ ಜನ್ಮಸ್ಥಳಕ್ಕೆ ತೆರಳಿ ದರ್ಶನ ಪಡೆದರು. ಸಂತಾಕ್ಲಾಸ್ ಕ್ಯಾಪ್ ದರಿಸಿ ಪ್ರಾರ್ಥನೆ ಹಾಗು ಕ್ರೈಸ್ತ ಕೊಂಕಣಿ ಪದದ ಹಾಡುಗಳನ್ನು ಹಾಡುತ ಯೇಸು ಕ್ರಿಸ್ತ ಜನಿಸಿದ ಪುಣ್ಯ ಸ್ಧಳದ ದರ್ಶನವನ್ನು ಪಡೆದು ಪಾದಯಾತ್ರೆಯನ್ನು ಪೂರ್ಣಗೊಳಿಸಿದರು.[ಕ್ರಿಸ್‌ಮಸ್, ಹೊಸವರ್ಷ : ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ]

Mangaloreans in Israel organize Paadayatra from jerusalem to bethlehem

ಸುಮಾರು 5 ಗಂಟೆಗಳ ಕಾಲ ಯಾತ್ರಿಕರು ಬೆತ್ಲೆಹೇಮ್ ನಲ್ಲಿ ಸಮಯವನ್ನು ಕಳೆದರು. ವಿಶ್ವದಲ್ಲಿ ಶಾಂತಿಯು ಲಭಿಸಲಿ ಎಲ್ಲರಿಗೂ ದೇವರು ಶಾಂತಿಯನ್ನು ಕರುಣಿಸಿ ಬದುಕನ್ನು ಮುನ್ನಡೆಸಲಿ ಎನ್ನುವ ಪ್ರಾರ್ಥನೆಯನ್ನು ಮಾಡಿದರು.

Mangaloreans in Israel organize Paadayatra from jerusalem to bethlehem

ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಅನಿತಾ ಡಿಸೋಜಾ, ಕರಾವಳಿಯ ಕ್ರೈಸ್ತರು ಒಗಟಾಗಿ ಒಂದು ಗೂಡಿ ಪಾದಯಾತ್ರೆ ನೆಡಸಿರುವುದು ಬಹಳ ವಿಶೇಷ. ಕ್ರಿಸ್ಮಸ್ ಹ್ಯಾಟ್ ಗಳನ್ನೂ ಧರಿಸಿ, ಕ್ರಿಸ್ಮಸ್ ಹಾಡುಗಳು ಹಾಡುತ ಸಂಪೂರ್ಣವಾಗಿ ಮೈಮರೆತೇವು. ಇಸ್ರೇಲ್ ನಲ್ಲಿ ಚಳಿಗಾಲ ಶುರುವಾಗಿದೆ ಆದರೆ ಇದ್ಯಾವುದನ್ನು ಲೆಕ್ಕಿಸದೆ ನವೆಲ್ಲರೂ ಒಂದು ಗೂಡಿ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ದೇವರ ದರ್ಶನವನ್ನು ಪಡೆದೆವು ಎಂದು ಸಂತಸವನ್ನು ಹಂಚಿಕೊಂಡರು.[ಬೆಂಗಳೂರು : ಇಸ್ರೇಲ್ ವೀಸಾ ಕಚೇರಿ ಬೆಂಕಿಗೆ ಉಗ್ರರು ಕಾರಣ?]

Mangaloreans in Israel organize Paadayatra from jerusalem to bethlehem

ಇನ್ನು ಯಾತ್ರಿಕಾರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಇಸ್ರೇಲ್ ಪೋಲಿಸರು ಸಂಪೂರ್ಣ ಭದ್ರತೆಯನ್ನು ಒದಗಿಸಿದ್ದರು.

ಚಿತ್ರ ಕೃಪೆ : ಅನಿಲ್ ಸೆಕ್ವೇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaloreans in Israel organise Paadayatra from Jerusalem to bethlehem on the occasion of a Christmas season. More than 3000 Mangalorean Christians participated during the holy walk.
Please Wait while comments are loading...