ಹಾವು ಏಣಿ ಆಟದ ಬೋರ್ಡಿನಲ್ಲಿ ನಿಜ ಸರ್ಪಗಳ ಬಳಕೆ : ಎಂಟೆದೆ ಬಂಟನ ವೈರಲ್ ವಿಡಿಯೋ

Snake And Ladder Game : ಹಾವು ಏಣಿ ಆಟ ಯಾರಿಗೆ ಗೊತ್ತಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಈ ಆಟ ಎಲ್ಲರೂ ಆಡುತ್ತಾರೆ. ಒಳ್ಳೆಯ ಟೈಂ ಪಾಸ್ ಆಟ ಇದು. ಮೊದಲೆಲ್ಲಾ ಬೋರ್ಡ್ ಮೇಲೆ ಈ ಆಟ ಆಡಿದರೆ ಈಗಿನ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆ. ದಾಳ ಉರುಳಿಸಬೇಕು. ಬಂದ ನಂಬರಿನ ಪ್ರಕಾರ ಕಾಯಿ ಮೂವ್ ಮಾಡಬೇಕು. ಏಣಿ ಸಿಕ್ಕರೆ ಮೇಲಕ್ಕೆ ಹತ್ತುವುದು, ಹಾವು ಸಿಕ್ಕರೆ ಬಾಯಿಯಿಂದ ಬಾಲದವರೆಗೆ ಇಳಿಯುವುದು. ಒಂದು ರೀತಿಯಲ್ಲಿ ವಿಚಿತ್ರ ಕಿಕ್ ಕೊಡುವ ಆಟ.

Man Playing Snake And Ladder With Real Snake And Ladder With Friends Video Went Viral On Social Media

ನಿಜವಾದ Snake And Ladder Game :

ಆದ್ರೆ ಈ ಆಟವನ್ನು ನಿಜವಾದ ಹಾವು ಇಟ್ಟು ಆಡಿದರೆ ಹೇಗಿರಬಹುದು? ಇದೊಂದು ರೀತಿಯ ಹುಚ್ಚಾಟ ಅನ್ನಿಸಬಹುದು. ಆದರೆ ಇಂಥಹ ಹುಚ್ಚಾಟದ ವಿಡಿಯೋ ಇದೀಗ social mediaದಲ್ಲಿ ಕಾಣಿಸಿಕೊಂಡಿದೆ. ಹಾವು ದೂರದಲ್ಲಿ ಇದೆ ಎನ್ನುವಾಗಲೇ ಮೈ ಜುಮ್ಮೆನ್ನುತ್ತದೆ. ಇನ್ನು ಅದನ್ನು ರಾಶಿ ಹಾಕಿ ಅದರ ಜೊತೆ ಆಡುವುದೆಂದರೆ ತಮಾಷೆ ಅಲ್ಲವೇ ಅಲ್ಲ. ವಿಷದ ಹಾವಿರಲಿ, ಸಾಮಾನ್ಯ ಹಾವಿರಲಿ ಅದನ್ನು ನೋಡಿದ ಕೂಡಲೇ ಭಯವಾಗುವುದಂತೂ ಸುಳ್ಳಲ್ಲ. ಹೀಗಿರುವಾಗ ನಿಜ ಹಾವನ್ನು ರಾಶಿ ಹಾಕಿ ಆಡುವ ಹಾವು ಏಣಿ ಆಟದ ವಿಡಿಯೋ ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತಿದೆ.

ರಾಶಿ ಹಾವಿನ ಮಧ್ಯೆ ಆಟ :

ದೊಡ್ಡ ಕೋಣೆಯ ನೆಲದ ಮೇಲೆ ಹಾವು-ಏಣಿಯ ದೊಡ್ಡ ಬೋರ್ಡ್ ಹಾಕಿರುವುದನ್ನು ಕಾಣಬಹುದು. ಒಬ್ಬ ಹುಡುಗ ತನ್ನ ಕೈಯಲ್ಲಿ ದೊಡ್ಡ ಬಿಳಿ ದಾಳ ಹಿಡಿದುಕೊಂಡು ಆಟ ಶುರು ಮಾಡುತ್ತಾನೆ. ಬೋರ್ಡ್ ನಲ್ಲಿ ನಿಜವಾದ ಮರದ ಮೆಟ್ಟಿಲಿವೆ. ಮರದ ಮೆಟ್ಟಿಲಿದ್ದರೆ ಪರವಾಗಿಲ್ಲ. ಆದರೆ ಹಾವು ಇರಬೇಕಾದ ಜಾಗದಲೆಲ್ಲಾ ಬಗೆ ಬಗೆಯ ಹಾವೂ ಕೂಡಾ ಇವೆ. ಇದರಲ್ಲಿ ಅಪಾಯಕಾರಿ, ವಿಷಕಾರಿ ಹಾವುಗಳು ಕಾಣಿಸುತ್ತಿವೆ. ಹುಡುಗ ನಗುತ್ತಾ ದಾಳ ಎಸೆಯುತ್ತಾನೆ. ಬಂದ ನಂಬರಿನ ಪ್ರಕಾರ ಬೋರ್ಡ್ ಮೇಲೆ ಹೆಜ್ಜೆ ಹಾಕುತ್ತಾನೆ. ಅಷ್ಟರಲ್ಲಿ ಬೋರ್ಡ್ ಮೇಲೆ ಇದ್ದ snake ಹೆಡೆಯೆತ್ತಿ ಮೇಲಕ್ಕೆ ಹಾರುತ್ತದೆ. ಕಚ್ಚುತ್ತದೆ ಕೂಡಾ.

ಆಟದ ಮಧ್ಯೆಯೇ ಅಟ್ಯಾಕ್ :

ಒಂದು ಕ್ಷಣಕ್ಕೆ ಹೆದರಿ ಪೆಪ್ಪಾದ ಆ ಹುಡುಗ ಬಿದಿರಿನ ಕಂಬ ಹಿಡಿದು ದಂಡೆ ಮೇಲೆ ಹತ್ತಿ ಕೂರುತ್ತಾನೆ. ಒಂದು ಕ್ಷಣಕ್ಕೆ ಅವನ ಆಟದ ಭೂತ ಇಳಿದಿರಬಹುದು. ಆದರೂ ಮತ್ತೆ ನಿಧಾನವಾಗಿ ದಂಡೆಯಿಂದ ಇಳಿದು ಬರುತ್ತಾನೆ. ಅವನ ಮೇಲೆ ಹಾವು ಅಟ್ಯಾಕ್ ಮಾಡ್ತಾ ಇದ್ದ ಹಾಗೆ ಅಲ್ಲಿದ್ದವರು ಜೋರಾಗಿ ಬೊಬ್ಬೆ ಹೊಡೆದು ನಗುತ್ತಾರೆ. ಈ ವಿಡಿಯೋ ನೋಡುವಾಗ ಅವರು ಈ ಆಟವನ್ನು ಇದೇ ಮೊದಲ ಬಾರಿಗೆ ಆಡುವುದು ಅಲ್ಲ ಅನ್ನಿಸುತ್ತದೆ. ಹಾವಿನ ಜೊತೆ ಸರಸ ಅವರಿಗೆ ಅಭ್ಯಾಸವಿರಬಹುದೋ ಏನೋ. ಆದರೂ ನೊಡುವವರಿಗೆ ಮಾತ್ರ ಇದು ಖಂಡಿತಾ ಕಿರಿಕಿರಿ.

ಹರಿದಾಡುತ್ತಿದೆ ವಿಡಿಯೋ :

ಈ ವೀಡಿಯೊ ನೋಡಿದ ಪ್ರತಿಯೊಬ್ಬರೂ ಕೂಡಾ ಒಮ್ಮೆಗೆ ಉಸಿರು ಬಿಗಿ ಹಿಡಿಯುವುದು ಮಾತ್ರ ಸುಳ್ಳಲ್ಲ. ಈ ರೀತಿ ಹಾವಿನ ಜೊತೆ ಸರಸವಾಡಲೂ ಧೈರ್ಯ ಬೇಕು. ಇಲ್ಲಿ ಅವರು ಉಪಯೋಗಿಸಿರುವ ಹಾವಿಗೆ ಹಲ್ಲು ಇದೆಯೋ ಇಲ್ಲವೋ ಗೊತ್ತಿಲ್ಲ. ಈ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಾ ಇದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಮಿನ kangden_kebonreptile ಎಂಬ ಪೇಜಿನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಜನ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. ಹುಡುಗ ಆಟವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾನೆ ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಇದು ನಿಜ ಜೀವನದ ಖತ್ರೋನ್ ಕೆ ಖಿಲಾಡಿ ಎಂದು ಮತ್ತೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+