ಬಸ್ ಚಾಲಕನ ಸಾವಿಗೆ ಉಲ್ಕಾಪಾತ ಕಾರಣವಲ್ಲ: ನಾಸಾ

ವಾಷಿಂಗ್ ಟನ್, ಫೆಬ್ರವರಿ, 10: ತಮಿಳುನಾಡಿನ ಬಸ್ ಚಾಲಕರೊಬ್ಬರು ಉಲ್ಕಾಪಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸಂಗತಿಯನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಅಲ್ಲಗಳೆದಿದೆ.

ತಮಿಳುನಾಡಿನ ವೆಲ್ಲೂರಿನ ಇಂಜಿನಿಯರಿಂಗ್ ಕಾಲೇಜ್ ನ ಬಸ್ ಚಾಲಕನೊಬ್ಬ ಉಲ್ಕಾಪಾತಕ್ಕೆ ಬಲಿಯಾಗಿದ್ದಾರೆ. ನಟ್ರಂಪಲ್ಲಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಬಸ್ ಚಾಲಕ ಕಾಮರಾಜ್ ಉಲ್ಕಾಪಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಮೃತರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ 1 ಲಕ್ಷ ಪರಿಹಾರವನ್ನು ಸಹ ಘೋಷಣೆ ಮಾಡಿದ್ದರು.[ಪ್ಲೂಟೋನಲ್ಲಿ ಕಂಡು ಬಂತು 'ತೇಲುವ ಪರ್ವತ'ಗಳ ಸಾಲು!]

nasa

ಆದರೆ ಸಾವು ಉಲ್ಕಾಪಾತದಿಂದ ಸಂಭವಿಸಿಲ್ಲ. ಭೂಮಿಯಲ್ಲಿ ನಡೆದ ಬೇರೆ ಯಾವುದೋ ಸ್ಫೋಟ ಇದಕ್ಕೆ ಕಾರಣವಾಗಿರಬಹುದು ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದಕ್ಕೆ ನಾಸಾ ನೀಡಿರುವ ವಿವರಣೆಯ ಆಧಾರವನ್ನು ನೀಡಿದೆ.[ಮಂಗಳನ ವಾತಾವರಣ ನಾಶವಾಗಲು ಏನು ಕಾರಣ?]

1908 ರಲ್ಲಿ ತುಂಗುಸ್ಕಾದಲ್ಲಿ ಇದೇ ಬಗೆಯ ಘಟನೆ ಸಂಭವಿಸಿತ್ತು. ಎರಡು ಜನ ಸಾವನ್ನಪ್ಪಿ, ನೂರಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದ್ದವು. ಆದರೆ ಅದು ಸಹ ಉಲ್ಕಾಪಾತದಿಂದ ಆದ ಅವಘಡ ಎಂಬುದಕ್ಕೆ ಯಾವ ಸಾಕ್ಷಿಯೂ ಇರಲಿಲ್ಲ ಎಂದು ನಾಸಾ ತನ್ನ ಸುದೀರ್ಘ ವರದಿಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+