ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಲ್ಯ ಪ್ರತ್ಯಕ್ಷ!

By ವಿಕಾಸ್ ನಂಜಪ್ಪ
|
Google Oneindia Kannada News

ಲಂಡನ್, ಜೂನ್ 18 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಘೋಷಿತ ಅಪರಾಧಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿಗಳು ಪಾಲ್ಗೊಂಡಿದ್ದರು.

'ಮಂತ್ರಾಸ್ ಆಫ್ ಸಕ್ಸಸ್ : ಇಂಡಿಯಾಸ್ ಗ್ರೇಟೆಸ್ಟ್ ಸಿಇಓಸ್ ಟೆಲ್ ಹೌ ಟು ವಿನ್' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮಲ್ಯ ಆಗಮಿಸಿದ್ದರು. ಸುಹೇಲ್ ಸೇಥ್ ಈ ಪುಸ್ತಕವನ್ನು ಬರೆದಿದ್ದಾರೆ. [ಘೋಷಿತ ಅಪರಾಧಿ ಪಟ್ಟ, ಇಡಿ ಕೈಯಲ್ಲಿ ಮಲ್ಯ ಜುಟ್ಟ!]

vijay mallya

ಪುಸ್ತಕ ಬಿಡುಗಡೆ ಜೊತೆಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂವಾದದಲ್ಲಿ ಭಾರತದ ರಾಯಭಾರಿ ನವತೇಜ್ ಸರ್ನಾ ಅವರು ಪಾಲ್ಗೊಂಡಿದ್ದರು. ಸುಹೇಲ್ ಸೇಥ್ ಅವರು ಟ್ವಿಟರ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಆಹ್ವಾನವಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. [ಮದ್ಯದ ದೊರೆಗೆ ಇದೀಗ ಘೋಷಿತ ಅಪರಾಧಿ ಪಟ್ಟ]

ಮಲ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಕಾರ್ಯಕ್ರಮಕ್ಕೆ ಮಲ್ಯ ಅವರನ್ನು ಆಮಂತ್ರಿಸಿರಲಿಲ್ಲ. ಅತಿಥಿಗಳ ಪಟ್ಟಿಯಲ್ಲಿಯೂ ಅವರು ಇರಲಿಲ್ಲ. [ಲಂಡನ್ನಿನಲ್ಲಿ ಮಗನ ಜತೆ ಮಲ್ಯ, ವಿಡಿಯೋ ಟ್ರೆಂಡಿಂಗ್]

ಸಾಲ ಮರುಪಾವತಿ ಮಾಡದೆ ವಿದೇಶಕ್ಕೆ ಹಾರಿರುವ ಮಲ್ಯ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಗಳಿವೆ. 9000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣ ಅವರ ಮೇಲಿದೆ. ಕಳೆದ ವಾರ ಮುಂಬೈ ಕೋರ್ಟ್ ಮಲ್ಯ ಘೋಷಿತ ಅಪರಾಧಿ ಎಂದು ತೀರ್ಪು ನೀಡಿದೆ.

English summary
Vijay Mallya who was recently declared a proclaimed offender was spotted at an event in London in which an Indian envoy was was present. The book launch which took place in London was attended by Mallya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X