• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರದ ವಿರುದ್ಧ ಜನರ ಹೋರಾಟ; ಮಾಲಿ ಅಧ್ಯಕ್ಷರ ರಾಜೀನಾಮೆ

|
Google Oneindia Kannada News

ಮಾಲಿ, ಆಗಸ್ಟ್ 19 : ಮಾಲಿ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ರಾಜೀನಾಮೆ ನೀಡಿದ್ದಾರೆ. ಹಲವು ದಿನಗಳಿಂದ ಮಾಲಿಯ ಆಡಳಿತಾರೂಢ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿತ್ತು. ಜನರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದರು.

ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ಆದೇಶವನ್ನು ಕೇಳದ ಸೈನಿಕರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂತಿಮವಾಗಿ ಇಬ್ರಾಹಿಂ ಬೌಬಾಕರ್ ಕಿಟಾ ರಾಜೀನಾಮೆ ನೀಡಿದ್ದು, ಸಂಸತ್ ವಿಸರ್ಜನೆ ಮಾಡಿದ್ದಾರೆ.

ಭಾರೀ ಸೇನಾ ದಾಳಿ; 80 ಮಾಲಿ ಉಗ್ರರು ಮಟಾಶ್ಭಾರೀ ಸೇನಾ ದಾಳಿ; 80 ಮಾಲಿ ಉಗ್ರರು ಮಟಾಶ್

ಜುಲೈ ತಿಂಗಳಿನಿಂದ ಮಾಲಿಯಲ್ಲಿ ಸರ್ಕಾರದ ವಿರುದ್ಧ ಜನರು ಹೋರಾಟ ಮಾಡುತ್ತಿದ್ದರು. ರಾಜಧಾನಿ ಬಮಾಕೊನಲ್ಲಿ ಹಲವು ಬಾರಿ ಪ್ರತಿಭಟನೆ ಹಿಂಸಾಚಾರದ ಸ್ವರೂಪವನ್ನು ಪಡೆದುಕೊಂಡಿತ್ತು. ಆಡಳಿತ ಸುಧಾರಣೆ ತರಲಾಗುತ್ತದೆ ಎಂಬ ಅಧ್ಯಕ್ಷರ ಭರವಸೆಯನ್ನು ಜನರು ತಿರಸ್ಕರಿಸಿದ್ದರು.

ಮಾಲಿ : ರೆಸಾರ್ಟ್ ಮೇಲೆ ದಾಳಿ, ಇಬ್ಬರನ್ನು ಕೊಂದ ಜಿಹಾದಿಗಳುಮಾಲಿ : ರೆಸಾರ್ಟ್ ಮೇಲೆ ದಾಳಿ, ಇಬ್ಬರನ್ನು ಕೊಂದ ಜಿಹಾದಿಗಳು

ಅಸಮರ್ಪಕ ಆಡಳಿತ, ಭದ್ರತಾ ವ್ಯವಸ್ಥೆಯಲ್ಲಿನ ಲೋಪ, ಭ್ರಷ್ಟಾಚಾರ, ಸಾಮಾಜಿಕ ನ್ಯಾಯದ ಪಾಲನೆ ಮುಂತಾದ ವಿಚಾರಗಳಲ್ಲಿ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ಆರೋಪ ಮಾಡಿ ಪ್ರತಿಭಟನೆ ಆರಂಭಿಸಿತ್ತು.

ಪ್ರತಿಭಟನೆ ವೇಳೆ ಆಸ್ತಿ ನಷ್ಟದ ಹಣ ವಸೂಲಿ: ಎರಡು ನ್ಯಾಯಮಂಡಳಿ ಸ್ಥಾಪಿಸಿದ ಯೋಗಿ ಆದಿತ್ಯನಾಥ್ಪ್ರತಿಭಟನೆ ವೇಳೆ ಆಸ್ತಿ ನಷ್ಟದ ಹಣ ವಸೂಲಿ: ಎರಡು ನ್ಯಾಯಮಂಡಳಿ ಸ್ಥಾಪಿಸಿದ ಯೋಗಿ ಆದಿತ್ಯನಾಥ್

ವಿರೋಧ ಪಕ್ಷಗಳ ನಾಯಕ ಕರೆಗೆ ಜನರು ಸಹ ಉತ್ತಮವಾಗಿ ಸ್ಪಂದಿಸಿದ್ದರು. ರಸ್ತೆಗಿಳಿದು ಹೋರಾಟ ಆರಂಭಿಸಿದ್ದರು. ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ರಾಜೀನಾಮೆ ನೀಡಬೇಕು ಎಂಬುದು ಪ್ರಮುಖವಾದ ಬೇಡಿಕೆಯಾಗಿತ್ತು.

ಪ್ರತಿಭಟನೆ ನಡೆಸುತ್ತಿದ್ದ ಜನರು ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಬಳಿಗೆ ಸಂಧಾನಕಾರರನ್ನು ಕಳಿಸಿದ್ದರು. ಅವರ ಬಳಿ ರಾಜೀನಾಮೆ ನೀಡಬೇಕು ಎಂಬ ಪತ್ರವನ್ನು ಕಳಿಸಲಾಗಿತ್ತು. ಆಡಳಿತದಲ್ಲಿ ಸುಧಾರಣೆ ತರಲಾಗುತ್ತದೆ ಎಂದು ನೀಡಿದ್ದ ಭರವಸೆಗೆ ಜನರು ಒಪ್ಪಿಗೆ ನೀಡಿರಲಿಲ್ಲ.

English summary
Mali President Ibrahim Boubacar Keita resigns and dissolves parliament. Soldiers detained him at gunpoint after several days of protest against government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X