ಭಾರತದ ವಿರುದ್ಧ ಚೀನಾ ಅಸ್ತ್ರ ಬಳಸುತ್ತಿದೆಯಾ ಮಾಲ್ಡೀವ್ಸ್?

ಉಗುರಲ್ಲಿ ಹೋಗೋದಕ್ಕೆ, ಕೊಡಲಿ ತಗೊಂಡ್ರಂತೆ ಅನ್ನೋ ಮಾತು ಮಾಲ್ಡೀವ್ಸ್‌ಗೆ ಸೂಕ್ತವಾಗಿ ಅನ್ವಯ ಆಗುತ್ತೆ. ಯಾಕಂದ್ರೆ ಸಣ್ಣ ವಿಚಾರವನ್ನು ಮಾಲ್ಡೀವ್ಸ್ ಕೆದಕಿ ಕೆದಕಿ ದೊಡ್ಡದಾಗಿ ಮಾಡುತ್ತಿದೆ. ಹಾಗೇ ಮಾಲ್ಡೀವ್ಸ್ ಮಾಡುತ್ತಿರುವ ಈ ಕಿತಾಪತಿಯು ಭಾರತ & ಮಾಲ್ಡೀವ್ಸ್‌ನ ಸಂಬಂಧ ಕೂಡ ಹಾಳು ಮಾಡುತ್ತಿದೆ. ಹೀಗಿದ್ದಾಗ ಸುಮ್ಮನೆ ಇರದ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಿದ್ದಾರೆ!

ಮಾಲ್ಡೀವ್ಸ್ ಕೆಲ ತಿಂಗಳ ಹಿಂದೆ ಹೊಸ ಅಧ್ಯಕ್ಷನ ಆಯ್ಕೆ ಮಾಡಿದ್ದು, ಹೀಗೆ ನೂತನವಾಗಿ ಆಯ್ಕೆ ಆದ ಮಾಲ್ಡೀವ್ಸ್ ಅಧ್ಯಕ್ಷ ಭಾರತದ ವಿರುದ್ಧ ಹಲವು ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹೀಗೆ ತಾನು ಅಧ್ಯಕ್ಷನಾಗಿ ಆಯ್ಕೆಯಾದ ಆರಂಭದಲ್ಲೇ, ಮಾಲ್ಡೀವ್ಸ್ ಸಂಪೂರ್ಣ ಸ್ವಾತಂತ್ರ್ಯ ಹೊಂದಲು ಉದ್ದೇಶಿಸಿದೆ. ಹೀಗಾಗಿ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯ ಪಡೆಗಳನ್ನು, ದೇಶ ತೊರೆಯಲು ಸೂಚಿಸಿದ್ದೇವೆ ಅಂತ ಹೊಸ ಅಧ್ಯಕ್ಷ ಮುಯಿಝು ಅಂದು ಹೇಳಿದ್ದರು. ಈ ರೀತಿಯಾಗಿ ಹೇಳಿಕೆ ನೀಡಿದ ನಂತರ ನಿಧಾನವಾಗಿ ಕಿಚ್ಚು ಹೊತ್ತಿಕೊಂಡಿತ್ತು. ಆದರೆ ಈಗ, ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಮಾತನಾಡಿದ್ದಾರೆ.

Maldives President Happy About China & Maldives Bonding

ಚೀನಾಗೆ ಜೈ ಎಂದ ಮಾಲ್ಡೀವ್ಸ್?

ಭಾರತ & ಮಾಲ್ಡೀವ್ಸ್ ಸಂಬಂಧ ಹದಗೆಟ್ಟ ಸಮಯಕ್ಕೇ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಮತ್ತೊಂದು ಹೇಳಿಕೆ ನೀಡಿದ್ದಾರೆ. ಮಾಲ್ಡೀವ್ಸ್ & ಚೀನಾ ಪರಸ್ಪರರ ಹಿತಾಸಕ್ತಿ ಗೌರವಿಸುತ್ತಾ ಬಂದಿವೆ. ನಮ್ಮ ಸಾರ್ವಭೌಮತ್ವವನ್ನ ಚೀನಾ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು. ಮಾಲ್ಡೀವ್ಸ್ ಅಧ್ಯಕ್ಷ ತಮ್ಮ ಚೀನಾ ಭೇಟಿ ಬಳಿಕ ಈ ಹೇಳಿಕೆ ನೀಡಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ. ಹಾಗೇ ಮುಯಿಝು ಚೀನಾ ಪರ ಒಲವಿರುವ ನಾಯಕ ಎನಿಸಿಕೊಂಡಿದ್ದಾರೆ.

ಸಾಕಷ್ಟು ಸಹಾಯ ಮಾಡಿದೆ ಭಾರತ

ಮಾಲ್ಡೀವ್ಸ್ ಹಲವಾರು ಬಾರಿ ಸಂಕಷ್ಟದ ಸುಳಿಗೆ ಸಿಲುಕಿದ್ದಾಗ ಭಾರತ ಸಹಾಯ ಮಾಡಿದೆ ಮತ್ತು ಈಗಲೂ ಮಾಡುತ್ತಿದೆ. ಆದ್ರೆ ಸುಖಾಸುಮ್ಮನೆ ಮಾಲ್ಡೀವ್ಸ್ ಕಿರಿಕ್ ಜೋರು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ಮಾಲ್ಡೀವ್ಸ್ ಅಧ್ಯಕ್ಷರ ಹೇಳಿಕೆ ಕೂಡ ಭಾರತ & ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧದ ಮೇಲೆ ಮತ್ತಷ್ಟು ಕರಿನೆರಳು ಚಾಚುತ್ತಿದೆ. ಹೀಗಿದ್ದಾಗ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಬದಲು, ಕಿರಿಕ್ ಜೋರಾಗ್ತಿದೆ ಎನ್ನುವ ಬೇಸರ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದಿದೆ.

Maldives President Happy About China & Maldives Bonding

ಭಾರತ ಸೇನೆ ಹೊರಗೆ ಬರುತ್ತಾ?

ಮಾಲ್ಡೀವ್ಸ್ ಈಗಾಗಲೇ ಭಾರತ ವಿರೋಧ ಕಟ್ಟಿಕೊಂಡು ಸಮಸ್ಯೆ ಎದುರಿಸುತ್ತಿದೆ. ಇಷ್ಟಾದ್ರೂ ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಈಗ ಮತ್ತೆ ಭಾರತ ವಿರುದ್ಧ ಮಾತನಾಡಿರುವ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್‌ ಮುಯಿಝ, ಮಾಲ್ದೀವ್ಸ್‌ನಿಂದ ಮಾರ್ಚ್‌ 15ರ ಒಳಗಾಗಿ ಸೇನೆ ವಾಪಸ್ ಕರೆಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹಿಸಿದ್ದಾರೆ. ಕೆಲ ತಿಂಗಳ ಹಿಂದೆ, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಮುಯಿಝು ಈ ಪ್ರಸ್ತಾಪ ಇಟ್ಟಿದ್ದರು. ಆದ್ರೆ ಈಗ, ಡೆಡ್‌ಲೈನ್ ಕೊಟ್ಟಿರುವುದು ಸಹಜವಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+