Maldives: ಭಾರತವನ್ನು ಎದುರು ಹಾಕಿಕೊಂಡರೆ ಯಾರಿಗೇ ಆದರೂ ಇದೇ ಗತಿ ನೋಡಿ!
ಮಾಲ್ಡೀವ್ಸ್ ದೇಶ ಭಾರತವನ್ನು ಎದುರು ಹಾಕಿಕೊಂಡು ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಭಾರತ ಬಲಿಷ್ಠವಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಬೆಂಬಲ ಇದೆ. ಹೀಗಾಗಿ ಭಾರತದ ಸಹಾಯ ಇಲ್ಲದೆ ಜಗತ್ತಿನ ಬಹುತೇಕ ದೇಶಗಳು ಬದುಕುವುದೇ ಕಷ್ಟ ಕಷ್ಟ ಅಂತಾ ಹೇಳಬಹುದು. ಹೀಗಿದ್ದರೂ ಮಾಲ್ಡೀವ್ಸ್ ನಾಯಕರು ಭಾರತ ವಿರೋಧಿ ನೀತಿ ತೋರಿಸುತ್ತಿದ್ದ ಕಾರಣ ಇದೀಗ ದ್ವೀಪರಾಷ್ಟ್ರ ಮಾಲ್ಡೀವ್ಸ್ ಪರಿಸ್ಥಿತಿ ಏನಾಗಿದೆ ಗೊತ್ತಾ? ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತದ ಪರಿಣಾಮ ಮಾಲ್ಡೀವ್ಸ್ ಆರ್ಥಿಕತೆ ಏನಾಗಿದೆ? ಬನ್ನಿ ತಿಳಿಯೋಣ.
ಮಾಲ್ಡೀವ್ಸ್ ದೊಡ್ಡ ಸಂಕಷ್ಟದ ಸುಳಿಗೆ ಸಿಲುಕಿದ್ದು, ಪ್ರತಿ ದಿನವೂ ನರಳಾಡುವ ಪರಿಸ್ಥಿತಿ ಇದೆ. ಭಾರತದ ಜೊತೆಗೆ ಯಾವಾಗ ಕಿರಿಕ್ ತೆಗೆದಿತ್ತೋ ಆ ಸಮಯದಿಂದಲೇ ಮಾಲ್ಡೀವ್ಸ್ ದೇಶವು ಆರ್ಥಿಕವಾಗಿ ಪಾತಾಳ ಸೇರಲು ಶುರು ಮಾಡಿತ್ತು. ಹೀಗಿದ್ದಾಗಲೇ ಭಾರತದ ಕೋಟಿ ಕೋಟಿ ಪ್ರವಾಸಿಗರು, ಸ್ವಯಂ ಪ್ರೇರಿತರಾಗಿ ಮಾಲ್ಡೀವ್ಸ್ ದೇಶಕ್ಕೆ ಪ್ರವಾಸ ಹೋಗುವುದನ್ನು ತಪ್ಪಿಸಿ ಭಾರತದಲ್ಲೇ ಇರುವ ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ರೀತಿ ಮಾಲ್ಡೀವ್ಸ್ ಬುಡ ಈಗ ಅಲುಗಾಡಿ ಹೋಗಿದ್ದು, ಮುಂದಿನ ಪರಿಸ್ಥಿತಿ ಏನು ಅಂತಾ ಅಲ್ಲಿನ ನಾಯಕರು ಚಿಂತಿಸುವ ವಾತಾವರಣ ನಿರ್ಮಾಣ ಆಗಿದೆ. ಇದೇ ಸಮಯದಲ್ಲಿ ಆರ್ಥಿಕತೆ ರಕ್ಷಣೆಗೆ ಮಾಲ್ಡೀವ್ಸ್ ದೇಶದ ರಾಜಕಾರಣಿಗಳು ಏನು ಮಾಡಿದ್ದಾರೆ ಹೇಳಿ?

ಮಾಲ್ಡೀವ್ಸ್ ಸರ್ಕಾರ ಬೀಳಿಸಲು ಪ್ರಯತ್ನ?
ಅಂದಹಾಗೆ ಮಾಲ್ಡೀವ್ಸ್ ದೇಶದ ಆರ್ಥಿಕ ಪರಿಸ್ಥಿತಿ ಮಣ್ಣು ಮುಕ್ಕಿದ್ದು, ಹೀಗೆ ಆದೇ ದೇಶದ ಒಳಗೆ ಕೆಲವರು ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಹೀಗಾಗಿ ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಪ್ರಯತ್ನ ಮಾಡುವವರನ್ನ ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಇದೀಗ ಮಾಲ್ಡೀವ್ಸ್ ಪೊಲೀಸರು ಮುಂದಾಗಿದ್ದಾರೆ. ಇದರ ಜೊತೆಯಲ್ಲೇ ಮಾಲ್ಡೀವ್ಸ್ ದೇಶದ ಸರ್ಕಾರ ಬೀಳಿಸಲು ಕೂಡ ಪ್ರಯತ್ನ ಸಾಗಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಸರ್ಕಾರ ಕೆಡವಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ ಅಂತಾ ಕೇವಲ 2 ದಿನಗಳ ಹಿಂದಷ್ಟೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜ ಆರೋಪ ಮಾಡಿದ್ದರು.
ಹೊಸ ಅಧ್ಯಕ್ಷರು ಮಾಲ್ಡೀವ್ಸ್ ದೇಶಕ್ಕೆ ಆಯ್ಕೆಯಾಗಿ ಬಂದ ನಂತರ ಪರಿಸ್ಥಿತಿ ಕೈಮೀರುತ್ತಿದೆ. ಮಾಲ್ಡೀವ್ಸ್ ಅಧ್ಯಕ್ಷರು ಗಂಭೀರ ಆರೋಪ ಮಾಡಿದ ನಂತರ ಅಲ್ಲಿನ ಪರಿಸ್ಥಿತಿ ಕೈಮೀರಿದ್ದು, ದ್ವೀಪ ರಾಷ್ಟ್ರದ ಆರ್ಥಿಕತೆ ಕುಸಿದು ಬೀಳುವ ಭಯ ಕಾಡುತ್ತಿದೆ. ಅಲ್ಲದೆ ಮಾಲ್ದೀವ್ಸ್ ಜನರು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ ವಿದೇಶಿ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದ್ದು, ಇನ್ನೂ ಹಲವು ರೀತಿಯ ಕ್ರಮಗಳನ್ನ ಕೈಗೊಂಡಿದ್ದು ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.
ಮಾಲ್ಡೀವ್ಸ್ ಪೊಲೀಸರ ಎಂಟ್ರಿ ಏಕೆ?
ಆದರೆ ಯಾವಾಗ ಈ ವಿಚಾರ ಬೆಂಕಿ ಹೊತ್ತಿಸಿತ್ತೋ, ಆಗ ತನ್ನ ನಿರ್ಧಾರದಿಂದ ಹಿಂದಕ್ಕೂ ಸರಿದಿತ್ತು ಮಾಲ್ಡೀವ್ಸ್ ಸರ್ಕಾರ. ಹೀಗಿದ್ದಾಗ ನಿರ್ಬಂಧ ಹೇರಿದ ಕೆಲವೇ ಗಂಟೆಗಳಲ್ಲಿ ಉಲ್ಟಾ ಹೊಡೆದು, ತನ್ನ ನಿರ್ಧಾರ ಬದಲು ಮಾಡಿತ್ತು ಮಾಲ್ಡೀವ್ಸ್ ಕೇಂದ್ರೀಯ ಬ್ಯಾಂಕ್. ಹೀಗಾಗಿ ನಿರ್ಬಂಧ ದಿಢೀರ್ ತೆರುವು ಮಾಡಿ ಮಾಲ್ಡೀವ್ಸ್ ಜನರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಹೀಗಿದ್ದಾಗಲೇ ಮಾಲ್ಡೀವ್ಸ್ ಪೊಲೀಸರು ಕೂಡ, ಆ ದೇಶದಲ್ಲಿ ಆರ್ಥಿಕತೆ ಹಾಳು ಮಾಡಲು ಪ್ರಯತ್ನ ಮಾಡುವವರನ್ನ ಬಂಧಿಸಿ ಕ್ರಮ ಕೈಗೊಳ್ಳುತ್ತೀವಿ ಎಂದಿದ್ದಾರೆ.












Click it and Unblock the Notifications