
ಕೊರೊನಾ ಸೋಂಕು: ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಮಾಲ್ಡೀವ್ಸ್
ಮಾಲ್ಡೀವ್ಸ್, ಏಪ್ರಿಲ್ 26: ಭಾರತದಲ್ಲಿ ಕೊರೊನಾ ಸೋಂಕು ನಿತ್ಯ 3 ಲಕ್ಷ ದಾಟುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ವಿಮಾನವನ್ನು ರದ್ದುಗೊಳಿಸಿವೆ.
ಇದೀಗ ಮಾಲ್ಡೀವ್ಸ್ ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಪ್ರಯಾಣ ಕುರಿತು ಕುವೈತ್, ಓಮನ್, ಫ್ರಾನ್ಸ್, ಪಾಕಿಸ್ತಾನ, ಹಾಂಗ್ ಕಾಂಗ್, ನ್ಯೂಜಿಲೆಂಡ್, ಕೆನಡಾ, ಇಂಗ್ಲೆಂಡ್, ಯುಎಇ, ದುಬೈ ನಿರ್ಬಂಧ ವಿಧಿಸಿರುವಂತೆಯೇ ಭಾರತೀಯ ಪ್ರವಾಸಿಗರಿಗೆ ಮಾಲ್ಡೀವ್ಸ್ ನಿರ್ಬಂಧ ವಿಧಿಸಿದೆ.
ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಮಾಲ್ಡೀವ್ಸ್ ಬಾಲಿವುಡ್ ಯುವ ನಟ, ನಟಿಯರಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಇತ್ತೀಚಿಗೆ ಆಲಿಯಾ ಭಟ್, ರಣಬೀರ್ ಕಪೂರ್ ಭೇಟಿ ನೀಡಿದ್ದರು. ಕೊರೋನಾವೈರಸ್ ನಿಂದ ಚೇತರಿಸಿಕೊಂಡ ಸ್ವಲ್ಪ ಸಮಯದ ನಂತರ ಮಾಲ್ಡೀವ್ಸ್ ಪ್ರವಾಸವನ್ನು ಕೈಗೊಂಡಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಇವರು ಅಪಹಾಸ್ಯಕ್ಕೊಳಗಾದರು.
ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣದಿಂದ ಬಾಲಿವುಡ್ ಸೆಲೆಬ್ರಿಟಿಗಳ ಮೋಜು, ಮಸ್ತಿಯ ತಾಣ ಮಾಲ್ಡೀವ್ಸ್, ದ್ವೀಪ ಪ್ರದೇಶದ ಪ್ರವಾಸಿ ತಾಣಗಳಿಂದ ಭಾರತೀಯ ಪ್ರವಾಸಿಗರು ವಾಸ್ತವ್ಯ ಹೂಡದಂತೆ ನಿರ್ಬಂಧಿಸಿದೆ.
ಕನಿಷ್ಠ ಅನನುಕೂಲತೆಯೊಂದಿಗೆ ಪ್ರವಾಸೋದ್ಯಮವನ್ನು ಸುರಕ್ಷಿತವಾಗಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಲಾಗಿದೆ.
ಈ ಮಧ್ಯೆ, ಭಾರತದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಅಲ್ಲಿಗೆ ಪ್ರಯಾಣಿಸಿದಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಈ ಕುರಿತು ಮಾಲ್ಡೀವ್ಸ್ ನ ಪ್ರವಾಸೋದ್ಯಮ ಸಚಿವಾಲಯ ಟ್ವೀಟ್ ಮಾಡಿದ್ದು, ಏಪ್ರಿಲ್ 27ರಿಂದ ಭಾರತದಿಂದ ಮಾಲ್ಡೀವ್ಸ್‌ಗೆ ಪ್ರವಾಸಿಗರ ಪ್ರವಾಸವನ್ನು ನಿರ್ಬಂಧಿಸಲಾಗಿದೆ.