ಬ್ರಿಟಿಷ್ ರೇಸಿಂಗ್ ಡ್ರೈವರ್ ವರಿಸಿದ ಮಲೇಶಷ್ಯಾ ರಾಜಕುಮಾರಿ ಇಲ್ಯಾನಾ: ನೆರವೇರಿತು ರಾಜಮನೆತನ ಅದ್ಧೂರಿ ವಿವಾಹ
ಪಹಾಂಗ್ ಸುಲ್ತಾನನ ಮಗಳು ತೆಂಗು ಪುತ್ತೇರಿ ರಾಜಾ ತೆಂಗು ಪುಟೇರಿ ಇಲ್ಯಾನಾ ಆಲಿಯಾ ಮದುವೆ ಅದ್ಧೂರಿಯಾಗಿ ನಡೆದಿದೆ. ಕೌಲಾಲಂಪುರದಲ್ಲಿ ಬ್ರಿಟಿಷ್ ರೇಸಿಂಗ್ ಡ್ರೈವರ್ ಕ್ರಿಸ್ಟೋಫರ್ ಲಿಯೋನೆಲ್ ಫ್ರಾಗಟ್ ಅವರ ಜೊತೆ ಇಲ್ಯಾನಾ ಮದುವೆ ನಡೆದಿದೆ. ಈ ಮದುವೆ ಸಮಾರಂಭ ಕೌಲಲಾಂಪುರದಲ್ಲಿ ನೆರವೇರಿದೆ.
ರಾಜಮನೆತನದ ಮದುವೆ
29 ವರ್ಷದ ರಾಜಕುಮಾರಿ ಇಲ್ಯಾನಾ, 2019 ರಿಂದ 2024 ರವರೆಗೆ ಮಲೇಷ್ಯಾದ ರಾಜನಾಗಿ ಸೇವೆ ಸಲ್ಲಿಸಿದ ಪಹಾಂಗ್‌ನ ರಾಜ ಸುಲ್ತಾನ್ ಅಬ್ದುಲ್ಲಾ ಅವರ ಮಗಳು. ಅವರ ತಾಯಿ ಜೂಲಿಯಾ ರೈಸ್, ಮಾಜಿ ನಟಿ. ಇಲ್ಯಾನಾ, ಜಿಟಿ ವರ್ಲ್ಡ್ ಚಾಲೆಂಜ್ ಯುರೋಪ್ ಎಂಡ್ಯೂರೆನ್ಸ್ ಕಪ್ ರೇಸಿಂಗ್ ಡ್ರೈವರ್ ಆಗಿ ಸ್ಪರ್ಧಿಸುವ 32 ವರ್ಷದ ಫ್ರಾಗ್ಯಾಟ್ ಅವರನ್ನು ವಿವಾಹವಾಗಿದ್ದಾರೆ.

ಕೌಲಾಲಂಪುರ್‌ನಲ್ಲಿ ನಡೆದ ವಿವಾಹ ಸಮಾರಂಭ
ಪಹಾಂಗ್ ಅಲ್-ಸುಲ್ತಾನ್ ಅಬ್ದುಲ್ಲಾ ರಿಯಾತುದ್ದೀನ್ ಅಲ್-ಮುಸ್ತಫಾ ಬಿಲ್ಲಾ ಷಾ ಸುಲ್ತಾನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ದಿ ಸ್ಟಾರ್ ಪ್ರಕಾರ, ತೆಂಗು ಹಸನಲ್ ಇಬ್ರಾಹಿಂ ಆಲಂ ಶಾ ಮತ್ತು ಅವರ ಕಿರಿಯ ಸಹೋದರರು ಸೇರಿದಂತೆ ಪಹಾಂಗ್ ರಾಜಮನೆತನದ ಇತರ ಸದಸ್ಯರು ಕೂಡಾ ಈ ಸಮಾರಂಭದಲ್ಲಿ ಇದ್ದರು.
ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆ
ಇಸ್ಲಾಮಿಕ್ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ 'ಮಸ್ ಕಹ್ವಿನ್' ಪ್ರದಾನ ಮಾಡಲಾಯಿತು. ವಧು ವರರು ಉಂಗುರಗಳನ್ನು ಬದಲಿಸಿಕೊಂಡರು. ನಂತರ ದಂಪತಿ 'ಮೆರೆಂಜಿ'ಗಳಲ್ಲಿ ಭಾಗವಹಿಸುವ ಮೊದಲು ಪ್ರಾರ್ಥನೆ ಸಲ್ಲಿಸಿದರು.ಮದುವೆ ಜೀವನ ಚೆನ್ನಾಗಿರಲಿ ಎಂದು ದೇವರಲ್ಲಿ ಆಶೀರ್ವಾದ ಕೇಳುವ ಉದ್ದೇಶದಿಂದ ಈ ಪ್ರಾರ್ಥನೆ ಮಾಡಲಾಗುತ್ತದೆ.
ವಜ್ರದ ಕಿರೀಟ ಧರಿಸಿದ್ದ ರಾಜಕುಮಾರಿ
ವರದಿಯ ಪ್ರಕಾರ, ಕೌಲಾಲಂಪುರದ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ವಿವಾಹ ನಡೆಯಿತು. ಮದುವೆಯ ವೇಳೆ ರಾಜಕುಮಾರಿ ಇಲ್ಯಾನ ರಾಣಿ ಅಜೀಜಾ ಅವರ ವಜ್ರದ ಕಿರೀಟ ಧರಿಸಿದ್ದರು. ಮಲೇಷಿಯಾದ ಖ್ಯಾತ ಡಿಸೈನರ್ ವಿನ್ಯಾಸ ಮಾಡಿದ ಗೌನ್‌ನೊಂದಿಗೆ ಈ ವಜ್ರದ ಕಿರೀಟ ಧರಿಸಿದ್ದರು.
ಚಿಕ್ಕ ವಯಸ್ಸಿನಿಂದಲೇ ಕಾರುಗಳ ಮೇಲೆ ಆಸಕ್ತಿ
ರಾಜಕುಮಾರಿ ಇಲ್ಯಾನ ಅವರ ಪತಿ ಕ್ರಿಸ್ಟೋಫರ್ ಲಿಯೋನೆಲ್ ಫ್ರಾಗ್ಯಾಟ್ ಅಂತರರಾಷ್ಟ್ರೀಯ ಮೋಟಾರ್ ರೇಸಿಂಗ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 32 ವರ್ಷದ ಬ್ರಿಟಿಷ್ ರೇಸಿಂಗ್ ಡ್ರೈವರ್ ಜಿಟಿ ವರ್ಲ್ಡ್ ಚಾಲೆಂಜ್ ಯುರೋಪ್ ಎಂಡ್ಯೂರೆನ್ಸ್ ಕಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.ಇವರಿಗೆ ಚಿಕ್ಕ ವಯಸ್ಸಿನಿಂದಲೇ ಕಾರುಗಳ ಮೇಲೆ ವಿಶೇಷ ಆಸಕ್ತಿ. ಟೆಂಪೆಸ್ಟಾ ರೇಸಿಂಗ್ ಕುರಿತಾದ ಅವರ ಅಧಿಕೃತ ಜೀವನಚರಿತ್ರೆಯಲ್ಲಿ, ಈ ಬಗ್ಗೆ ಹೇಳಲಾಗಿದೆ. ಮುಂದೆ ಕ್ವಾಡ್ ಬೈಕ್‌ಗಳು ಮತ್ತು ಮೋಟೋಕ್ರಾಸ್ ಸವಾರಿ ಮಾಡುವ ಆಸಕ್ತಿಯನ್ನು ಬೆಳೆಸಿಕೊಂಡರು.
ತಮ್ಮ 24 ನೇ ವಯಸ್ಸಿನಲ್ಲಿಯೇ ಈ ಸ್ಪೋರ್ಟ್ಸ್‌ಗೆ ಬಂದಿದ್ದಾರೆ. ಇಟಲಿಯ ಫಿಯೊರಾನೊದಲ್ಲಿರುವ ಕಂಪನಿಯ ಪರೀಕ್ಷಾ ಟ್ರ್ಯಾಕ್‌ನಲ್ಲಿ ನಡೆದ ಫೆರಾರಿ ಹೈ-ಪರ್ಫಾರ್ಮೆನ್ಸ್ ಡ್ರೈವಿಂಗ್ ಪ್ರೋಗ್ರಾಂ ನಂತರ ಅಂತರರಾಷ್ಟ್ರೀಯ ಮೋಟಾರ್ ರೇಸಿಂಗ್‌ಗೆ ಧುಮುಕಿದ್ದಾರೆ. ಫಿಯೊರಾನೊದಲ್ಲಿ ನಡೆದ ಫೆರಾರಿ ಹೈ-ಪರ್ಫಾರ್ಮೆನ್ಸ್ ಟ್ರೈವಿಂಗ್ ಪ್ರೊಗ್ರಾಂನಲ್ಲಿ ಆಪ್ತ ಸ್ನೇಹಿತನ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಅವರ ಜೀವನದ ಮಹತ್ವದ ತಿರುವು.
ಪ್ರಶಸ್ತಿ ಗೆದ್ದು ಸಾಧನೆ
ಫೆರಾರಿ 296 GT3 ಓಡಿಸುವ ಫ್ರಾಗ್‌ಗ್ಯಾಟ್, ಫೆರಾರಿ ಚಾಲೆಂಜ್ ಮತ್ತು GT3 ರೇಸಿಂಗ್‌ನಲ್ಲಿ ಸ್ಪರ್ಧಿಸಿದ್ದಾರೆ. 2021 ಮತ್ತು 2023 ರಲ್ಲಿ GT ವರ್ಲ್ಡ್ ಚಾಲೆಂಜ್ ಯುರೋಪ್ ಎಂಡ್ಯೂರೆನ್ಸ್ ಕಂಚಿನ ಕಪ್ ಗೆದ್ದಿದ್ದಾರೆ. 2020 ರಲ್ಲಿ GT ವರ್ಲ್ಡ್ ಚಾಲೆಂಜ್ ಯುರೋಪ್ ಸ್ಪ್ರಿಂಟ್ ಕಪ್ ಪ್ರೊ-ಆಮ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ರಾಜಮನೆತನದ ಈ ವಿವಾಹ ಸಮಾರಂಭದಲ್ಲಿ ಪಹಾಂಗ್ ರಾಯಲ್ ಹೌಸ್‌ಹೋಲ್ಡ್‌ನ ಸದಸ್ಯರು ಭಾಗವಹಿಸಿದ್ದರು. ಪಹಾಂಗ್‌ನ ಕ್ರೌನ್ ಪ್ರಿನ್ಸ್ ತೆಂಗು ಹಸನಲ್ ಇಬ್ರಾಹಿಂ ಆಲಂ ಶಾ ಮತ್ತು ರಾಜಮನೆತನದ ಇತರ ಸದಸ್ಯರು ಇದ್ದರು. ಪಹಾಂಗ್ ಮುಖ್ಯಮಂತ್ರಿ ವಾನ್ ರೋಸ್ಡಿ ವಾನ್ ಇಸ್ಮಾಯಿಲ್ ಕೂಡಾ ಮದುವೆ ಸಮಾರಂಭದಲ್ಲಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶೇಖ್ ಮೊಹಮ್ಮದ್ ಬಿನ್ ಹಮದ್ ಬಿನ್ ತಹ್ನೂನ್ ಅಲ್ ನಹ್ಯಾನ್ ಕೂಡ ಉಪಸ್ಥಿತರಿದ್ದರು.


Click it and Unblock the Notifications
