ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್!

|
Google Oneindia Kannada News

ನವದೆಹಲಿ, ಏಪ್ರಿಲ್.28: ವಿಶ್ವಕ್ಕೆ ವಿಶ್ವವೇ ಕೊರೊನಾ ವೈರಸ್ ಹೋಗಲಾಡಿಸುವ ಬಗ್ಗೆ ಚಿಂತಿಸುತ್ತಿದೆ. ಸಾಂಕ್ರಾಮಿಕ ಪಿಡುಗನ್ನು ಸೋಂಕಿತರ ಜೀವ ಹಿಂಡುತ್ತಿದ್ದರೆ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶ ರವಾನಿಸಿದೆ.

Recommended Video

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

ಕೊರೊನಾ ವೈರಸ್ ಅಂತ್ಯವಾಗುವವರೆಗೂ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟ ನಿರಂತರವಾಗಿರುತ್ತದೆ. ಇದರ ಮಧ್ಯೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಉಳಿದಂತಾ ರೋಗಿಗಳ ಮೇಲಿಯೂ ಗಮನ ಹರಿಸುವಂತೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನಿರ್ದೇಶಕ ತೆಡ್ರಸ್ ಅಧನಮ್ ಗೆಬ್ಲಿಯಸೆಸ್ ತಿಳಿಸಿದ್ದಾರೆ.

ಕೊವಿಡ್-19 ಇತಿಹಾಸ: ಚೀನಾ-ಕೊರೊನಾ ನಂಟು ಬಿಚ್ಚಿಟ್ಟವರೆಲ್ಲ ನಾಪತ್ತೆ! ಕೊವಿಡ್-19 ಇತಿಹಾಸ: ಚೀನಾ-ಕೊರೊನಾ ನಂಟು ಬಿಚ್ಚಿಟ್ಟವರೆಲ್ಲ ನಾಪತ್ತೆ!

ಜಗತ್ತಿನಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 30,65,200 ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದು, 2,11,597 ಜನರು ಪ್ರಾಣ ಬಿಟ್ಟಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರಿಗಿಂತ ನಾಲ್ಕು ಪಟ್ಟು ಮಂದಿ ಅಂದರೆ 9,22,387 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

Malaria Cases Almost Double Due To Shortages Of Vaccine:WHO


ಜಾಗತಿಕ ಗಡಿರೇಖೆ ಬಂದ್ ನಿಂದ ಔಷಧಿ ಕೊರತೆ:

ಸಾಂಕ್ರಾಮಿಕ ಪಿಡುಗು ಅಂತ್ಯವಾಗುವವರೆಗೂ ಕೊವಿಡ್-19 ವಿರುದ್ಧ ಹೋರಾಟವು ಮುಂದುವರಿಯುತ್ತದೆ. ಆಫ್ರಿಕಾ, ಪೂರ್ವ ಯುರೋಪ್, ಲ್ಯಾಟಿನ್ ಅಮೆರಿಕಾ ಜೊತೆಗೆ ಕೆಲವು ಏಷಿಯನ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನಿರ್ದೇಶಕ ತೆಡ್ರಸ್ ಅಧನಮ್ ಗೆಬ್ಲಿಯಸೆಸ್ ತಿಳಿಸಿದ್ದಾರೆ.

ಕೊರೊನಾ ವೈರಸ್ ನಿಯಂತ್ರಿಸುವು ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗಡಿರೇಖೆಯನ್ನು ಬಂದ್ ಮಾಡಲಾಗಿದ್ದು, ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವಿಶ್ವದ 21 ರಾಷ್ಟ್ರಗಳಲ್ಲಿ ಇತರೆ ಔಷಧಿಗಳಿಗೂ ಕೃತಕ ಅಭಾವ ಉಂಟಾಗಿದೆ.

Malaria Cases Almost Double Due To Shortages Of Vaccine:WHO

ಮಲೇರಿಯಾ ಸೋಂಕಿತರ ಸಂಖ್ಯೆ ಡಬಲ್:

ಸಬ್ ಸಹರನ್ ಆಫ್ರಿಕಾದಲ್ಲಿ ಔಷಧಿಯ ಕೊರತೆಯಿಂದ ಮಲೇರಿಯಾ ಸೋಂಕಿತರ ಸಂಖ್ಯೆಯು ಡಬಲ್ ಆಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಹಿಂದುಳಿದ ರಾಷ್ಟ್ರಗಳಿಗೆ ನೆರವಾಗುವುದರ ಜೊತೆಗೆ ಉಳಿದ ದೇಶಗಳೊಂದಿಗೆ ಕೈಜೋಡಿಸಬೇಕಾದ ಅನಿವಾರ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನಿರ್ದೇಶಕ ತೆಡ್ರಸ್ ಅಧನಮ್ ಗೆಬ್ಲಿಯಸೆಸ್ ತಿಳಿಸಿದ್ದಾರೆ.

English summary
Coronavirus Effect: Malaria Cases Almost Double Due To Shortages Of Vaccine:WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X