ಡೊನಾಲ್ಡ್ ಟ್ರಂಪ್ 'ಐಡಿಯಾ' ಬೆನ್ನಲ್ಲೇ ವಾರ್ನಿಂಗ್ ಕೊಟ್ಟ Dettol, Lysol ಕಂಪನಿ!
''ಕೊರೊನಾ ವೈರಸ್ ಅನ್ನು ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ?'' ಎಂದು ಇತ್ತೀಚೆಗಷ್ಟೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಬ್ರೀಫಿಂಗ್ ವೇಳೆ ಟಾಪ್ ಎಕ್ಸ್ ಪರ್ಟ್ ಗಳನ್ನು ಪ್ರಶ್ನಿಸಿದ್ದರು. ಸಾಲದಕ್ಕೆ ''ಈ ಬಗ್ಗೆ ಗಮನ ಹರಿಸಿ'' ಎಂದೂ ಸೂಚಿಸಿದ್ದರು.
ಕೊರೊನಾ ವೈರಸ್ ಅನ್ನು ನಾಶ ಮಾಡಲು ಡೊನಾಲ್ಡ್ ಟ್ರಂಪ್ ತಲೆಯಲ್ಲಿ 'disinfectant' ಐಡಿಯಾ ಬಂದ ಬೆನ್ನಲ್ಲೇ ''ಯಾವುದೇ ಕಾರಣಕ್ಕೂ Disinfectant ಅಥವಾ ಸೋಂಕು ನಿವಾರಕ ದ್ರವಗಳನ್ನು ಸೇವಿಸಬೇಡಿ'' ಎಂದು ಡೆಟಾಲ್ ಮತ್ತು ಲೈಸೋಲ್ ಕಂಪನಿ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ.
''Disinfectant ಅಥವಾ ಸೋಂಕು ನಿವಾರಕ ದ್ರವಗಳನ್ನು ದೇಹದೊಳಗೆ ಯಾವುದೇ ಕಾರಣಕ್ಕೂ, ಯಾವುದೇ ಸನ್ನಿವೇಶದಲ್ಲೂ ಇಂಜೆಕ್ಟ್ ಮಾಡಬಾರದು, ಸೇವಿಸಲೂಬಾರದು'' ಎಂದು ಡೆಟಾಲ್ ಮತ್ತು ಲೈಸಾಲ್ ಮೇಕರ್ ರೆಕಿಟ್ ಬೆನ್ ಕಿಸರ್ ಸ್ಪಷ್ಟವಾಗಿ ತಿಳಿಸಿದ್ದಾರೆ.

ಮಾರ್ಗಸೂಚಿಗೆ ಅನುಗುಣವಾಗಿ ಬಳಸಿ
''Disinfectant ಅಥವಾ ಸೋಂಕು ನಿವಾರಕ ದ್ರವಗಳನ್ನು ಮತ್ತು ನೈರ್ಮಲ್ಯ ಉತ್ಪನ್ನಗಳನ್ನು ಉದ್ದೇಶಿತ ಮತ್ತು ಬಳಕೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾತ್ರ ಬಳಸಬೇಕು. ದಯವಿಟ್ಟು ಲೇಬಲ್ ಮೇಲಿರುವ ಸುರಕ್ಷತಾ ಮಾಹಿತಿಯನ್ನು ಓದಿರಿ'' ಎಂದು ಡೆಟಾಲ್ ಕಂಪನಿ ತಿಳಿಸಿದೆ.

ಮಾನವ ದೇಹಕ್ಕೆ ಅಪಾಯಕಾರಿ
ಎಲ್ಲಾ ರೀತಿಯ ಸೋಂಕು ನಿವಾರಕಗಳು ವಿಷಕಾರಿಯಾಗಿದ್ದು, ಮಾನವನ ದೇಹಕ್ಕೆ ಅಪಾಯಕಾರಿ. ಹೀಗಾಗಿ, ಜನರ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಹಾನಿಕಾರಕ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೂಡ ತಿಳಿಸಿತ್ತು.

ನ್ಯೂಸ್ ಬ್ರೀಫಿಂಗ್ ವೇಳೆ ಆಗಿದ್ದೇನು.?
ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಂ ಬ್ರಿಯಾನ್, ''ಸೂರ್ಯನ ಬೆಳಕು, ಬಿಸಿಲು ಮತ್ತು ತೇವಾಂಶ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್ ನಶಿಸಿ ಹೋಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ'' ಎಂದರು. ಜೊತೆಗೆ ''ವೈರಸ್ ಅನ್ನು Isopropyl Alcohal 30 ಸೆಕೆಂಡ್ ಗಳಲ್ಲಿ ಕೊಲ್ಲುತ್ತದೆ'' ಅಂತ ನ್ಯೂಸ್ ಬ್ರೀಫಿಂಗ್ ವೇಳೆ ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?
ವಿಲಿಯಂ ಬ್ರಿಯಾನ್ ಆಡಿದ ಮಾತುಗಳನ್ನು ಕೇಳಿದ ಕೂಡಲೆ, ''ಕೊರೊನಾ ವೈರಸ್ ನ ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ.? ಸೂರ್ಯನ ಬೆಳಕು ಮತ್ತು ಶಾಖದಿಂದ ರೋಗಿಗಳನ್ನು ಗುಣಮುಖಪಡಿಸುವ ಬಗ್ಗೆ ವೈದ್ಯರ ಬಳಿ ನಾನು ಮಾತನಾಡುತ್ತೇನೆ. ಅದು ವರ್ಕ್ ಆಗಬಹುದು, ಆಗದೆಯೂ ಇರಬಹುದು. ನಾನು ವೈದ್ಯ ಅಲ್ಲ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಡೊನಾಲ್ಡ್ ಟ್ರಂಪ್ ಕೊಟ್ಟ ಈ ಐಡಿಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.












Click it and Unblock the Notifications