ಮಧ್ಯ ಅಮೆರಿಕಾದಲ್ಲಿ 7ರಷ್ಟು ತೀವ್ರತೆಯ ಭೂಕಂಪ

Posted By:
Subscribe to Oneindia Kannada

ಎಲ್ ಸಲ್ವಡರ್, ನವೆಂಬರ್ 25: ಮಧ್ಯ ಅಮೆರಿಕಾದ ಪೆಸಿಫಿಕ್ ತೀರದಲ್ಲಿ 7ರಷ್ಟು ತೀವ್ರತೆಯಿದ್ದ ಭೂಕಂಪ ಗುರುವಾರ ಸಂಭವಿಸಿದೆ. ಚಂಡಮಾರುತ ಬೀಸಿದ ಕೆಲ ಸಮಯದಲ್ಲೇ ಕೆರಬಿಯನ್ ಕಡಲ ತೀರದ ನಿಕರಗುವಾ ಹಾಗೂ ಕೋಸ್ಟರಿಕಾದಲ್ಲಿ ಭೂಕಂಪ ಸಂಭವಿಸಿದೆ. ತಕ್ಷಣಕ್ಕೆ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ಎಲ್ ಸಲ್ವಡರ್ ನ 120 ಕಿಲೋಮೀಟರ್ ದೂರದಲ್ಲಿ, 33 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ.

ಮೊದಲಿಗೆ ಭೂಕಂಪದ ತೀವ್ರತೆ 7.2 ರಷ್ಟಿತ್ತು ಎಂದು ವರದಿಯಾಗಿತ್ತು. ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಚಲೆಟ್ ನಾಂಗೋ, ಸ್ಯಾನ್ ಸಲ್ವಡರ್, ಕಬನಾಸ್ ಮತ್ತು ಸ್ಯಾನ್ ಮಿಗುಯೆಲ್ ನಲ್ಲಿ ಭೂಕಂಪದ ಅನುಭವವಾಗಿದೆ. 7ರಷ್ಟು ತೀವ್ರತೆಯಿದ್ದ ಭೂಕಂಪವು ಕಳೆದ ವಾರ ಜಪಾನ್ ಹಾಗೂ ನ್ಯೂಜಿಲೆಂಡ್ ನಲ್ಲೂ ಸಂಭವಿಸಿತ್ತು.[ದೆಹಲಿ, ಹರಿಯಾಣ ಗಡಿ ಭಾಗದಲ್ಲಿ ಭೂಕಂಪ]

Earthquake

ನಿಕರಗುವಾದ ಕಡಲ ತೀರದಲ್ಲಿ ಭೂಕಂಪಕ್ಕೂ ಒಂದು ಗಂಟೆ ಮುನ್ನ ಪ್ರಬಲವಾದ ಚಂಡಮಾರುತವು 175 ಕಿ.ಮೀ. ವೇಗದಲ್ಲಿ ಗಾಳಿ ಬೀಸಿತ್ತು. ಇದರಿಂದ ಭೂ ಕುಸಿತ ಉಂಟಾಗಿತ್ತು. ಚಂಡಮಾರುತದ ಕಾರಣಕ್ಕೆ ಜೋರು ಮಳೆ, ಪ್ರವಾಹ ಹಾಗೂ ಮಣ್ಣಿನ ಕುಸಿತಕ್ಕೆ ಕಾರಣವಾಗಬಹುದು ಎಂದು ಯುಎಸ್ ರಾಷ್ಟ್ರೀಯ ಚಂಡಮಾರುತ ಕೇಂದ್ರ ಎಚ್ಚರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 7.0 magnitude earthquake off the Pacific Coast of Central America has shaken the region, just as a hurricane barreled into the Caribbean coasts of Nicaragua and Costa Rica.
Please Wait while comments are loading...