ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಲಟ್‌ಗಳ ಮುಷ್ಕರ: ಲುಫ್ತಾನ್ಸಾ ಏರ್‌ಲೈನ್ಸ್ ಸಂಚಾರದಲ್ಲಿ ವ್ಯತ್ಯಯ

|
Google Oneindia Kannada News

ಬರ್ಲಿನ್, ಸೆ.1: ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾದ ಪೈಲಟ್‌ಗಳು ಮುಷ್ಕರ ಘೋಷಿಸಿದ್ದಾರೆ. ವೇತನ ವಿವಾದ, ಸಿಬ್ಬಂದಿಗಳ ಸರಣಿ ರಜೆ ಜೊತೆಗೆ ಮುಷ್ಕರದಿಂದಾಗಿ ವಿಮಾನಯಾನ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ.

ಪೈಲಟ್‌ಗಳ ಒಕ್ಕೂಟ ವೆರೆನಿಗುಂಗ್ ಕಾಕ್‌ಪಿಟ್‌ನ(VC) 5,000 ಕ್ಕೂ ಹೆಚ್ಚು ಪೈಲಟ್‌ಗಳು ಈ ವರ್ಷ 5.5% ವೇತನ ಹೆಚ್ಚಳವನ್ನು ಆಗ್ರಹಿಸಿದ್ದಾರೆ. ಆದರೆ ಸಂಸ್ಥೆ ಜೊತೆ ನಡೆದ ಸಭೆಗಳು ವಿಫಲವಾಗಿವೆ ಎಂದು ಒಕ್ಕೂಟದ ಮುಖ್ಯಸ್ಥರು ಹೇಳಿದರು. ಮುಷ್ಕರದಿಂದಾಗಿ ಪ್ರಯಾಣಿಕರ ವಿಮಾನಯಾನವಲ್ಲದೆ ಸರಕು ವಿಮಾನಗಳ ಮೇಲೂ ಪರಿಣಾಮ ಬೀರಲಿದೆ.

"ನಾವು ಇಂದು ಸಾಕಷ್ಟು ಸಂಬಳ ಭತ್ಯೆ, ಕೊಡುಗೆಯನ್ನು ಸ್ವೀಕರಿಸಿಲ್ಲ, ಇದು ಗಂಭೀರ ಹಾಗೂ ಅವಕಾಶ ವಂಚಿತ ಪರಿಸ್ಥಿತಿ" ಎಂದು ವಿಸಿ ವಕ್ತಾರ ಮಥಿಯಾಸ್ ಬೇಯರ್ ಹೇಳಿದ್ದಾರೆ.

ಜುಲೈ ತಿಂಗಳಲ್ಲೂ ಇದೇ ಸಮಸ್ಯೆ
ಜರ್ಮನಿಯಾದ್ಯಂತ ಲುಫ್ತಾನ್ಸಾ ಸಿಬ್ಬಂದಿ ರಾಜೀನಾಮೆ ನೀಡಿ ಬೇಸಿಗೆ ರಜೆಗೆ ತೆರಳುತ್ತಿದ್ದಂತೆಯೇ ಒಂದು ದಿನದ ಮುಂಚಿತವಾಗಿಯೇ 1,000ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಜುಲೈ 28ರಂದು ಸ್ಥಗಿತಗೊಳಿಸಲಾಗಿತ್ತು.

ಈ ಮೂಲಕ ಕೋವಿಡ್‌-19 ಸಂಬಂಧಿತ ಲಾಕ್‌ಡೌನ್‌ಗಳ ನಂತರ ಪ್ರಯಾಣಿಸಲು ಉತ್ಸುಕರಾಗಿರುವ ಪ್ರವಾಸಿಗರಿಗೆ ನಿರಾಶೆಯಾಗಿತ್ತು.

The strike would be the latest industrial action in an ongoing pay dispute

ಜರ್ಮನಿಯ ಪ್ರಮುಖ ವಿಮಾನ ಸಂಸ್ಥೆ ಡಾಯ್ಚ ಲುಫ್ತಾನ್ಸಾ ತನ್ನ ಫ್ರಾಂಕ್‌ಫರ್ಟ್ ಹಬ್‌ನಲ್ಲಿ 678 ವಿಮಾನಗಳು, ಮ್ಯೂನಿಚ್‌ನಲ್ಲಿ 345 ವಿಮಾನಗಳನ್ನು ರದ್ದು ಮಾಡಿತ್ತು.

ಜೂನ್‌ನಲ್ಲಿ ಭಾರತದಲ್ಲಿಯೂ ಜರ್ಮನಿಯ ಜನಪ್ರಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ಸಿಬ್ಬಂದಿ ಕೊರತೆಯ ಹಿನ್ನೆಲೆ ಸುಮಾರು 900ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಿತ್ತು.

ಸಿಬ್ಬಂದಿ ಕೊರತೆ
ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಇದು ವಿಮಾನ ನಿಲ್ದಾಣ, ನಿರ್ವಹಣಾ ಸೇವೆ ಏರ್‌ ಟ್ರಾಫಿಕ್‌ ನಿಯಂತ್ರಣ ಹಾಗೂ ವಿಮಾನ ಸಂಸ್ಥೆಗಳಿಗೂ ಅನ್ವಯಿಸುತ್ತದೆ

ಡೆಲ್ಟಾ, ಜೆಟ್‌ಬ್ಲೂ, ಅಲಾಸ್ಕಾ ಮತ್ತು ಬ್ರಿಟಿಷ್ ಏರ್‌ವೇಸ್ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಬೇಡಿಕೆ ಮತ್ತು ಸಿಬ್ಬಂದಿ ಸವಾಲುಗಳ ಕಾರಣದಿಂದಾಗಿ ತಮ್ಮ ವೇಳಾಪಟ್ಟಿ ನಿರಂತರವಾಗಿ ಬದಲಾಯಿಸುತ್ತಿವೆ.

2021ರ ವಾರ್ಷಿಕ ವರದಿಯಲ್ಲಿ 2019ಕ್ಕೆ ಹೋಲಿಸಿದರೆ ತನ್ನ ಸಿಬ್ಬಂದಿ ವೆಚ್ಚವನ್ನು ಶೇಕಡ 20% ರಷ್ಟು ಕಡಿಮೆ ಮಾಡುವ ಯೋಜನೆ ಪ್ರಕಟಿಸಿತ್ತು. 2020 ಮತ್ತು 2021ರ ಉದ್ದಕ್ಕೂ ಅದರ ಒಟ್ಟು ಉದ್ಯೋಗಿಗಳ ಸಂಖ್ಯೆಯು ಸುಮಾರು ಕಾಲುಭಾಗದಿಂದ 1,05,000 ಕ್ಕೆ ಇಳಿಕೆ ಕಂಡು ಇದರಲ್ಲಿ ಸಿಬ್ಬಂದಿಗಳಲ್ಲಿ 31% ಕಡಿತವೂ ಸೇರಿತ್ತು. 2019ಕ್ಕೆ ಹೋಲಿಸಿದರೆ 2021ರಲ್ಲಿ ವಿಮಾನಯಾನದೊಂದಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಮೂರನೇ ಎರಡರಷ್ಟು ಕಡಿಮೆಯಾಗಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿತ್ತು.

ಮುಂದುವರೆದ ಪ್ರಯಾಣದ ತೊಂದರೆಗಳು
ಲುಫ್ತಾನ್ಸಾದ ಅಂಗಸಂಸ್ಥೆ ಯುರೋವಿಂಗ್ಸ್‌ನಲ್ಲಿ ಪೈಲಟ್‌ಗಳು ಮುಷ್ಕರಗಳ ಪರವಾಗಿ ಮತ ಚಲಾಯಿಸಿದ ನಂತರ ಮುಷ್ಕರ ಘೋಷಣೆಯಾಗಿದೆ. ಆದರೆ, ಉದ್ಯೋಗದಾತರೊಂದಿಗೆ ವೇತನ ಹೆಚ್ಚಳ ಕುರಿತಂತೆ ಮಾತುಕತೆಗಳನ್ನು ಮುಂದುವರಿಸಲು ಸದಾ ಸಿದ್ಧ ಎಂದು ಘೋಷಿಸಿದ್ದಾರೆ. ಸಾವಿರಾರು ವಿಮಾನಗಳು ರದ್ದುಗೊಂಡಿದ್ದು, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಗಂಟೆಗಳ ಕಾಲ ಸರತಿ ಸಾಲುಗಳನ್ನು ಸೃಷ್ಟಿ ಮಾಡಿದೆ.

ಈ ತಿಂಗಳ ಆರಂಭದಲ್ಲಿ, ಲುಫ್ತಾನ್ಸಾದ ಆಡಳಿತವು ಸಿಬ್ಬಂದಿಯೊಂದಿಗೆ ವೇತನ ಒಪ್ಪಂದವನ್ನು ಮಾಡಿಕೊಂಡಿತ್ತು, ಆದರೆ, ಪೈಲಟ್ ಒಕ್ಕೂಟ ಈ ವೇತನ ಶ್ರೇಣಿಗೆ ಒಪ್ಪಿಗೆ ಸೂಚಿಸಿಲ್ಲ (Reuters)

English summary
The pilots' union is demanding a pay rise for thousands of workers. The planned strike will affect passenger and cargo flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X