ಟಾಟಾ ಸ್ಟೀಲ್‌ ಕಂಪನಿಯಿಂದ 900 ನೌಕರರು ಮನೆಗೆ

London Tata Steel- 900 lose job,
ಲಂಡನ್, ಅ. 30: ಇಲ್ಲಿ ಅಗ್ರಮಾನ್ಯ ಭಾರತದ ಟಾಟಾ ಸ್ಟೀಲ್ ಕಂಪನಿಯಲ್ಲಿ 900 ಉದ್ಯೋಗಗಳನ್ನು ಕಡಿತಗೊಳಿಸಲು ಹಾಗೂ 12 ಘಟಕಗಳನ್ನು ಮುಚ್ಚಲು ಉದ್ದೇಶಿಸಲಾಗಿದೆ. ಕಠಿಣ ಆರ್ಥಿಕ ವ್ಯಾಪಾರ ಪರಿಸ್ಥಿತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕಂಪನಿಯನ್ನು ಪುನರ್ ರೂಪಿಸಬೇಕಾಗಿದೆ. ಹಾಗಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟಾಟಾ ಸ್ಟೀಲ್ ಕಂಪನಿ ಹೇಳಿದೆ. ಬ್ರಿಟನ್ನಿನ ಟಾಟಾ ಸ್ಟೀಲ್ ಕಂಪನಿ ಯುರೋಪಿನಲ್ಲಿ 2ನೆಯ ಅತಿ ದೊಡ್ಡ ಉಕ್ಕು ಉತ್ಪಾದನಾ ಕಂಪನಿಯಾಗಿದೆ.

ಬೇಡಿಕೆ ಕುಸಿತ ಕಾರಣ: 'ಕಂಪನಿಯ ಬ್ರಿಟನ್ ವ್ಯವಹಾರಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕಂಪನಿಯನ್ನು ಪುನರ್ ರೂಪಿಸುವುದು ಅತ್ಯಗತ್ಯವಾಗಿದೆ. ಬೇಡಿಕೆ ಕುಸಿತ ಮತ್ತು ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಇದು ಅನುಕೂಲ ಮಾಡಿಕೊಡುತ್ತದೆ' ಎಂದು ಟಾಟಾ ಸ್ಟೀಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

'ಪ್ರಸ್ತಾಪಿತ ಬದಲಾವಣೆಗಳ ಹಿನ್ನೆಲೆಯಲ್ಲಿ ಸೌತ್ ವೇಲ್ಸ್‌ನಲ್ಲಿರುವ 580 ಉದ್ಯೋಗಗಳು ಸೇರಿದಂತೆ ಒಟ್ಟು 900 ಉದ್ಯೋಗಗಳು ಕಡಿತಗೊಳ್ಳಲಾಗಿದೆ ಎಂದು ನಿರೀಕ್ಷಿಸಲಾಗಿದೆ' ಎಂದಿದೆ. ಕಂಪನಿಯ ಪುನರ್ರಚನೆ ಪ್ರಸ್ತಾಪಗಳು ನಮ್ಮ ವ್ಯಾಪಾರಗಳನ್ನು ಹೆಚ್ಚು ಯಶಸ್ವಿ ಮಾಡುತ್ತವೆ ಹಾಗೂ ಹೆಚ್ಚು ಬಾಳಿಕೆ ತರುತ್ತವೆ.

ಆದರೆ, ಉದ್ಯೋಗ ನಷ್ಟದ ವಿಚಾರ ವಿಷಾದನೀಯವಾಗಿದೆ ಹಾಗೂ ಇದು ಬಾಧಿತ ಉದ್ಯೋಗಿಗಳು ಮತ್ತು ಅವರ ಕುಟುಂಬಕ್ಕೆ ಕಠಿಣ ಹಾಗೂ ಅಸ್ಥಿರ ಸಮಯವಾಗಿರುತ್ತದೆ ಎಂದು ನನಗೆ ತಿಳಿದಿದೆ' ಎಂದು ಟಾಟಾ ಸ್ಟೀಲ್ಸ್ ಯುರೋಪಿಯನ್ ವ್ಯವಹಾರಗಳ ಮುಖ್ಯ ಕಾರ್ಯನಿರ್ವಾಹಕ ಕಾರ್ಲ್ ಕೋಹ್ಲರ್ ಹೇಳಿದ್ದಾರೆ. (ಚಿತ್ರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+