ಭಾರತದಲ್ಲಿ ಊರು ಕೇರಿ ಸುತ್ತಿದ ಆಟೋವನ್ನು ಲಂಡನಿಗೆ ತರಿಸಿಕೊಂಡ ಜೋಡಿ : ಸೋಶಿಯಲ್ ಮಿಡಿಯಾದಲ್ಲಿ ಇದೇ ಸದ್ದು

London Couple Craze: ಜಗತ್ತಿನಾದ್ಯಂತ ಭಾರತದ ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗ ಭಾರತೀಯರ ಅತ್ಯಂತ ಪ್ರೀತಿಯ ವಾಹನ ಆಟೋ ಕೂಡಾ ಏಳು ಸಾಗರಗಳನ್ನು ದಾಟಿದೆ. ಸಪ್ತ ಸಾಗರ ದಾಟಿ, ಬ್ರಿಟನ್‌ ತಲುಪಿದೆ ನಮ್ಮ ಆಟೋ ರಿಕ್ಷಾ. ಸೋಶಿಯಲ್‌ ಮೀಡಿಯಾಗಳಲ್ಲಿ ಭಾರತದ ಒಂದು ಆಟೋ, ಬ್ರಿಟನ್‌ ತಲುಪಿದ ಕಥೆ ಸಂಚಲನ ಸೃಷ್ಟಿಸುತ್ತಿದೆ. ಭಾರತದ ಆಟೋ ರಿಕ್ಷಾ-ಟಿಮಿ, ಬ್ರಿಟನ್‌ ತಲುಪಿದ ಕಥೆ ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ಆಟೋ ರಿಕ್ಷಾ ವಿಡಿಯೋ ನೋಡಿದವರ ಮುಖದಲ್ಲಿ ಮಂದಹಾಸ ಮಿನುಗುತ್ತದೆ. ಯೂಸರ್ಸ್‌ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತ ಪಡಿಸುತಿದ್ದಾರೆ.

London Couple Brought Red Color Auto Timi To UK After Returning From India Tour Emotional Video Viral

ವೈರಲ್‌ ಆಗ್ತಾ ಇದೆ ವೈರಲ್ ವಿಡಿಯೋ :

ವೈರಲ್‌ ಆಗ್ತಾ ಇರೋ ವಿಡಿಯೋ ಹಿಂದೆ ಒಂದು ಅಪೂರ್ವ ಕತೆ ಇದೆ. ಬ್ರಿಟನ್‌ನ ಒಂದು ಜೋಡಿ ಭಾರತಕ್ಕೆ ಪ್ರವಾಸ ಬಂದಿತ್ತು. ಇಲ್ಲಿನ ಪ್ರವಾಸಿದಾಣಗಳ ಆನಂದ ಅನುಭವಿಸಲು ಪ್ರಯಾಣಕ್ಕಾಗಿ ಒಂದು ಕೆಂಪು ಬಣ್ಣದ ಆಟೋ ರಿಕ್ಷಾ ಖರೀದಿಸಿತ್ತು ಆ ಜೋಡಿ. ಆ ಆಟೋಗೆ ಪ್ರೀತಿಯಿಂದ ಟಿಮಿ ದಿ ಟಿನ್‌ ಕ್ಯಾನ್‌ ಎಂದು ಹೆಸರಿಡಲಾಗಿತ್ತು. ತಮ್ಮ ಪ್ರೀತಿಯ ಟಿಮಿ ಆಟೋ ಹತ್ತಿದ ಬ್ರಿಟನ್‌ ಜೋಡಿ, ಅದರಲ್ಲೇ ಇಡೀ ಭಾರತ ಸುತ್ತಿತ್ತು. ಇಲ್ಲಿನ ಹೆದ್ದಾರಿ, ಟ್ರಾಫಿಕ್‌ ದಟ್ಟಣೆಯ ರಸ್ತೆ, ಹಳ್ಳಿಗಾಡಿನ ಹಳ್ಳ ದಿಣ್ಣೆ ಇರೋ ರಸ್ತೆ, ಕಾಡು, ಮೇಡು, ಊರು, ಪಟ್ಟಣ, ನಗರ - ಎಲ್ಲವನ್ನೂ ಈ ಜೋಡಿ ಟಿಮಿ ಜೊತೆಗೆ ಸಂಚಾರ ಮಾಡಿತ್ತು. ಆ ಜೋಡಿ ಭಾರತದಲ್ಲಿ ಸುಮಾರು 4218 ಕಿ.ಮೀ. ದೂರವನ್ನು ಕೇವಲ ಆಟೋದಲ್ಲೇ ಸಂಚಾರ ಮಾಡಿತ್ತು. ಹಾಗಾಗಿ, ಬ್ರಿಟನ್‌ ಜೋಡಿಗೆ ಟಿಮಿ, ಅತ್ಯಂತ ಆಪ್ತ ಆಟೋವಾಗಿ ಬಿಟ್ಟಿತ್ತು.

ಲಂಡನಿಗೆ ಟಿಮಿ ಆಟೋ :

ಭಾರತದಿಂದ ಮರಳುವ ವೇಳೆ ಆ ಜೋಡಿಗೆ ಟಿಮಿಯನ್ನು ಅಗಲುವುದು ಸಾಧ್ಯವೇ ಆಗಿರಲಿಲ್ಲ. ಭಾರತಕ್ಕೆ ವಿದಾಯ, ಅದರಲ್ಲೂ ಆಪ್ತ ಅಟೋ ರಿಕ್ಷಾ ಟಿಮಿಗೆ ವಿದಾಯ ಹೇಳುವಾಗ ಜೋಡಿಗೆ ಸಂಕಟವಾಗುತ್ತಿತ್ತು. ಬ್ರಿಟನ್‌ ಜೋಡಿ ತುಂಬಾ ಭಾವುಕವಾಗಿತ್ತು. ಟಿಮಿಯನ್ನು ಬಿಟ್ಟಿರಲಾರದ ಜೋಡಿ, ಕೊನೆಗೆ ಒಂದು ದೊಡ್ಡ ನಿರ್ಧಾರಕ್ಕೆ ಬಂತು. ಹೇಗಾದರೂ ಮಾಡಿ ಟಿಮಿಯನ್ನು ಲಂಡನ್‌ಗೆ ಕರೆಯಿಸಿಕೊಳ್ಳಲು ನಿರ್ಧರಿಸಿತು.

ಟಿಮಿ ನೋಡಿ London Couple ಸಂತಸಕ್ಕೆ ಪಾರವೇ ಇಲ್ಲ :

ಟಿಮಿ ಲಂಡನ್‌ ತಲುಪಲು ಸರಿಸುಮಾರು ಆರು ತಿಂಗಳು ಹಿಡಿಯಿತು. ಮರದ ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ, ಟಿಮಿಯನ್ನು ಹಡಗಿನ ಮೂಲಕ ಲಂಡನ್‌ (london) ಗೇಟ್‌ವೇ ಬಂದರಿಗೆ ತರಿಸಿಕೊಳ್ಳಲಾಯಿತು. ತಮ್ಮ ಕೆಂಪು ಬಣ್ಣದ ಟಿಮಿಯನ್ನು ಲಂಡನ್‌ನ ಗೇಟ್‌ವೇ ಬಂದರಿನಲ್ಲಿ ನೋಡಿದಾಗ, ಬ್ರಿಟನ್‌ ಜೋಡಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಆಟೋವನ್ನು ಕಂಡ ಕೂಡಲೇ ಜೋಡಿ, ಓಡಿ ಹೋಗಿ ಅದನ್ನು ಆಪ್ತವಾಗಿ ತಬ್ಬಿಕೊಂಡಿತ್ತು. ತಮ್ಮ ಪರಿವಾರದ ಸದಸ್ಯನೇ ಅನ್ನುವ ರೀತಿಯಲ್ಲಿ ಆ ಜೋಡಿ ಅಲ್ಲಿ ನಡೆದುಕೊಂಡಿತ್ತು.

ಲಂಡನ್ ರಸ್ತೆಯಲ್ಲಿ ಓಡುತ್ತಾ ಟಿಮಿ :

ಆದರೆ, ಈ ಸ್ಟೋರಿಯಲ್ಲೊಂದು ಟ್ವಿಸ್ಟ್‌ ಇದೆ. ಭಾರತದ (india) ಆಟೋ ರಿಕ್ಷಾ ಲಂಡನ್‌ ಬಂದರು ತಲುಪಿದೆ. ಅದು ಲಂಡನ್‌ ರಸ್ತೆಗಳಲ್ಲಿ ಸಾಗಿ, ಬ್ರಿಟನ್‌ ಜೋಡಿಯ ಮನೆ ಸೇರುತ್ತಾ? ಬ್ರಿಟನ್‌ ಜೋಡಿಗೆ ಆ ಕೆಂಪು ಆಟೋವನ್ನು ಲಂಡನ್‌ ರಸ್ತೆಗಳಲ್ಲಿ ಡ್ರೈವ್‌ ಮಾಡಲು ಸಾಧ್ಯವಾ? ಎನ್ನುವ ಪ್ರಶ್ನೆಗಳು ಉದ್ಭವವಾಗಿದೆ. ಯಾಕಂದ್ರೆ, ಲಂಡನ್‌ ರಸ್ತೆಗಳಲ್ಲಿ ದೇಶಿಯ ಆಟೋಗಳನ್ನು ಓಡಿಸಲು ಸಾಧ್ಯವಿಲ್ಲ. ಅದಕ್ಕೆ ಕೆಲವು ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ.

ಅಂತೂ ಇಂತೂ ಭಾರತದ ಟಿಮಿ ಲಂಡನ್‌ ತಲುಪಿದೆ. ಲಂಡನ್‌ ರಸ್ತೆಯಲ್ಲಿ ಓಡಾಡುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅದು ಏನಾದ್ರೂ ಆಗಲಿ, ಲಂಡನ್‌ ಜೋಡಿಯ ಆಟೋ ಪ್ರೇಮ ಮಾತ್ರ ಭಾರತೀಯರ ಮನಗೆದ್ದಿದೆ. ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+