• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಲೆ.ಜನರಲ್ ಅಸೀಮ್ ಮುನೀರ್ ನೇಮಕ

|
Google Oneindia Kannada News

ಇಸ್ಲಮಾಬಾದ್, ನವೆಂಬರ್ 24: ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್-ಜನರಲ್ ಅಸಿಮ್ ಮುನೀರ್ ಅನ್ನು ನೇಮಿಸಲಾಗಿದೆ. ಪರಮಾಣು-ಸಜ್ಜಿತ ರಾಷ್ಟ್ರದ ಆಡಳಿತದಲ್ಲಿ ಸೇನಾ ಮುಖ್ಯಸ್ಥರ ಸ್ಥಾನವು ಅತ್ಯಂತ ಪ್ರಭಾವಶಾಲಿ ಹಾಗೂ ಅಸಾಧಾರಣ ಪಾತ್ರವನ್ನು ವಹಿಸುತ್ತದೆ.

ಪಾಕಿಸ್ತಾನದ ಮುಖ್ಯ ಬೇಹುಗಾರರೂ ಆಗಿದ್ದ ಮುನೀರ್, ನಿರ್ಗಮಿತ ಜನರಲ್ ಕಮರ್ ಜಾವೇದ್ ಬಾಜ್ವಾರಿಂದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಅವರು ಮುಂದಿನ ಆರು ವರ್ಷಗಳ ಅವಧಿಯವರೆಗೂ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ, ನಂತರ ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಪಾಕ್‌ ಎಕ್ಸ್‌ಪೋದಲ್ಲಿ ಮಾರಕ ಅಸ್ತ್ರಗಳನ್ನು ಪ್ರದರ್ಶಿಸಿದ ಚೀನಾಪಾಕ್‌ ಎಕ್ಸ್‌ಪೋದಲ್ಲಿ ಮಾರಕ ಅಸ್ತ್ರಗಳನ್ನು ಪ್ರದರ್ಶಿಸಿದ ಚೀನಾ

ಅವರ ನೇಮಕಾತಿಯು ಮಿಲಿಟರಿ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಡುವಿನ ವಿವಾದದೊಂದಿಗೆ ಹೊಂದಾಣಿಕೆಯಾಗುತ್ತಿದೆ. ಏಕೆಂದರೆ ಇಮ್ರಾನ್ ಖಾನ್ ಇದೇ ವರ್ಷದ ಆರಂಭದಲ್ಲಿ ಅವರನ್ನು ಹೊರಹಾಕುವಲ್ಲಿ ಸೇನೆಯ ಪಾತ್ರವು ಪ್ರಮುಖವಾಗಿತ್ತು ಎಂದು ದೂಷಿಸಿದ್ದರುರೆ. "ಅರ್ಹತೆ, ಕಾನೂನು ಮತ್ತು ಸಂವಿಧಾನದ ಪ್ರಕಾರ ಈ ನೇಮಕವಾಗಿದೆ," ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸೇನೆಯದ್ದೇ ಪ್ರಮುಖ ಪಾತ್ರ

ಪಾಕಿಸ್ತಾನ ಸೇನೆಯು ಐತಿಹಾಸಿಕವಾಗಿ ದೇಶೀಯ ಮತ್ತು ವಿದೇಶಿ ರಾಜಕೀಯದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದೆ. ಇದರ ಮಧ್ಯೆ ಲೆಫ್ಟಿನೆಂಟ್ ಜನರಲ್ ಅಸೀಫ್ ಮುನೀರ್ ನೇಮಕಾತಿಯು ಪಾಕಿಸ್ತಾನದ ದುರ್ಬಲವಾದ ಪ್ರಜಾಪ್ರಭುತ್ವ, ನೆರೆಯ ಭಾರತ ಮತ್ತು ತಾಲಿಬಾನ್-ಆಡಳಿತದ ಅಫ್ಘಾನಿಸ್ತಾನದೊಂದಿಗಿನ ಅದರ ಸಂಬಂಧವನ್ನು ನಿರ್ಧರಿಸುತ್ತದೆ. ಅಲ್ಲದೇ ಚೀನಾ ಅಥವಾ ಯುನೈಟೆಡ್ ಸ್ಟೇಟ್ಸ್ ಕಡೆಗೆ ಅದರ ಪರಿಣಾಮವನ್ನು ಬೀರುತ್ತದೆ.

ರಾಜಕೀಯದಲ್ಲಿ ಪಾತ್ರ ವಹಿಸುವುದಿಲ್ಲ

ನಿರ್ಗಮಿತ ಸೇನಾ ಮುಖ್ಯಸ್ಥರಾದ ಬಜ್ವಾ, ಭವಿಷ್ಯದಲ್ಲಿ ರಾಷ್ಟ್ರೀಯ ರಾಜಕೀಯದಲ್ಲಿ ಸೇನೆಯು ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ ಎಂದು ಬುಧವಾರ ಹೇಳಿದರು. ಯುಎಸ್ ಬೆಂಬಲಿತ ಪಿತೂರಿ ತನ್ನ ಸರ್ಕಾರದ ಮೇಲಿದೆ ಎಂಬ ಖಾನ್ ಹೇಳಿಕೆಗಳನ್ನು "ನಕಲಿ ಮತ್ತು ಸುಳ್ಳು" ಎಂದು ತಿರಸ್ಕರಿಸಿದರು.

ರಾವಲ್ಪಿಂಡಿಯಲ್ಲಿ ಇಮ್ರಾನ್ ಖಾನ್ ಪ್ರತಿಭಟನೆ

ಸರ್ಕಾರದ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಈ ತಿಂಗಳ ಆರಂಭದಲ್ಲಿ ಬಂದೂಕಿನ ದಾಳಿಯಲ್ಲಿ ಗಾಯಗೊಂಡ ಇಮ್ರಾನ್ ಖಾನ್, ಮುಂಚಿನ ಚುನಾವಣೆಗಳಿಗೆ ಕರೆ ನೀಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಸೇನೆಯ ಪ್ರಧಾನ ಕಛೇರಿಯ ನೆಲೆಯಾದ ರಾವಲ್ಪಿಂಡಿಯಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಲು ಯೋಜಿಸಿದ್ದಾರೆ.

English summary
Lieutenant General Asim Munir appointed as Pakistan's New Army Chief. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X