ಲಡಾಖ್ ನಲ್ಲಿ ಉದ್ವಿಗ್ನತೆ: ಮುಖಾಮುಖಿಯಾದ ಭಾರತ-ಚೀನಾ ಸೇನೆ

ಲಡಾಖ್, ಸೆಪ್ಟೆಂಬರ್ 12: ಲಡಾಖ್ ನಲ್ಲಿ ಚೀನಾ ಮತ್ತು ಭಾರತೀಯ ಸೇನೆ ಮತ್ತೊಮ್ಮೆ ಮುಖಾಮುಖಿಯಾದ ಕಾರಣ ಉದ್ವಿಗ್ನತೆ ತಲೆದೋರಿದ ಘಟನೆ ಬುಧವಾರ ನಡೆದಿದೆ.

ಲಡಾಖ್ ನ ಪಾಂಗೋಂಗ್ ತ್ಸೋ ಸರೋವರದ ಉತ್ತರ ದಡದ ಬಳಿ ಉಭಯ ಸೇನೆಯ ಸಿಬ್ಬಂದಿ ಮುಖಾಮುಖಿಯಾಗುವ ಸಂದರ್ಭ ಎದುರಾಯಿತು. ಭಾರತ ತನ್ನ ಗಡಿಯಲ್ಲಿ ಸಮರಾಭ್ಯಾಸ ನಡೆಸುತ್ತಿದ್ದು, ಅದರಿಂದ ಆತಂಕಕ್ಕೊಳಗಾದ ಚೀನಾ ಪ್ರತ್ಯತ್ತರ ನೀಡಲು ತನ್ನ ಸಿಬ್ಬಂದಿಯನ್ನು ಗಡಿಯ ಬಳಿ ಕಳಿಸಿತ್ತು. ಈ ಸಂದರ್ಭದಲ್ಲಿ ಉಭಯ ಸೇನಾ ಸಿಬ್ಬಂದಿಯ ನಡುವೆ ಕೆಲ ಕಾಲ ಮಾತಿನ ಚಕಮಕಿಯೂ ನಡೆಯಿತು.

ಭಾರತೀಯ ಸೇನೆಯ ಮೌಂಟನ್ ಸ್ಟ್ರೈಕ್ ಕಾರ್ಪ್ಸ್ ಮತ್ತು ಭಾರತೀಯ ವಾಯುಸೇನೆ ಈ ಸ್ಥಳದಲ್ಲಿ ಜಂಟಿ ತರಬೇತಿ ನಡೆಸುಹತ್ತಿತ್ತು. ಭಾರತದ ಪೂರ್ವ ಭಾಗದಲ್ಲಿ ಯುದ್ಧ ಎದುರಿಸಲು ಸೈನಿಕರನ್ನು ಸಿದ್ಧಗೊಳಿಸಲಾಗುತ್ತಿದ್ದು, ಅಕ್ಟೋಬರ್ ನಂತರ ಅರುಣಾಚಲ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಿ ತರಬೇತಿ ನಡೆಸಲಾಗುತ್ತದೆ. ಅದರ ಪೂರ್ವ ತಯಾರಿ ಎಂಬಂತೆ ಗಡಿಯಲ್ಲಿ ಸೈನಿಕರು ತರಬೇತಿ ನಡೆಸುತ್ತಿದ್ದ ವೇಳೆ ಚೀನಾ ಸೈನಿಕರು ಮುಖಾಮುಖಿಯಾದರು.

Ladakh: Face-off Between India And China De-escalated Later

ಆದರೆ ತಪ್ಪುತಿಳಿವಳಿಕೆಯಿಂದ ಈ ಘಟನೆ ನಡೆದಿದ್ದು, ನಂತರ ನಡೆದ ನಿಯೋಗ ಮಟ್ಟದ ಮಾತುಕತೆಯಿಂದ ಪರಿಸ್ಥಿತಿ ತಣ್ಣಗಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+