ವಿಡಿಯೋ: ಭಜನೆ ಹಾಡಿ ಸುಷ್ಮಾ ಸ್ವರಾಜ್ ಮನಗೆದ್ದ ಕುವೈತ್ ಹಾಡುಗಾರ

ಕುವೈತ್‌, ಅಕ್ಟೋಬರ್ 31: ಮಹಾತ್ಮಾ ಗಾಂಧಿ ಅವರಿಗೆ ಪ್ರಿಯವಾಗಿದ್ದ ಭಜನೆಯನ್ನು ರಾಗವಾಗಿ ಹಾಡಿದ ಕುವೈತ್‌ ಹಾಡುಗಾರ ಸುಷ್ಮಾ ಸ್ವರಾಜ್ ಮನಗೆದ್ದಿದ್ದಾರೆ.

ಅರಬ್ ದೇಶದ ಪ್ರವಾಸದಲ್ಲಿರುವ ಸುಷ್ಮಾ ಸ್ವರಾಜ್ ಅವರು ಕುವೈತ್‌ನಲ್ಲಿ ಆಯೋಜಿಸಿದ್ದ ಭಾರತೀಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಅಲ್ಲಿನ ಸ್ಥಳೀಯ ಹಾಡುಗಾರ ಮುಬಾರಕ್ ಅಲ್ ರಶೀದ್ ಅವರು ಭಜನೆ ಹಾಡಿದರು.

ಮಹಾತ್ಮಾ ಗಾಂಧಿ ಅವರಿಗೆ ಬಹು ಪ್ರಿಯವಾದ ಭಜನೆಗಳಲ್ಲಿ ಒಂದಾಗಿರುವ 'ವೈಷ್ಣವ ಜನ ತೋ' ಭಜನೆಯಲ್ಲಿ ಹಾಡಿದರು. ಭಜನೆ ಪ್ರಾರಂಭಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಾಜರಿದ್ದವರು ಭಾರಿ ಕರತಾಡನ ಮಾಡಿದರು.

Kuwaiti singer sings bhajan in front of Sushma Swaraj

ಸುಷ್ಮಾ ಸ್ವರಾಜ್ ಅವರೂ ಸಹ ಆಸಕ್ತಿಯಿಂದ ಭಜನೆ ಕೇಳಿ ಕರತಾಡನ ಮಾಡಿದರು. ಭಜನೆ ಮುಗಿದ ಬಳಿ ಹಾಡುಗಾರ ಮುಬಾರಕ್-ಅಲ್-ರಶೀದ್ ಅವರ ಕೈಕುಲುಕಿ ಅಭಿನಂದಿಸಿದರು.

ಮುಬಾರಕ್ ಕಾರ್ಯಕ್ರಮದಲ್ಲಿ ಈ ಮುಂಚೆ ಹಾಡಿದ ಎರಡು ಹಾಡುಗಳಿಗಿಂತಲೂ ಈ ಭಜನೆ ಬಹಳ ಇಷ್ಟವಾಯಿತು. ಅವರು ಯಾವುದೇ ಪುಸ್ತಕದ ಸಹಾವಿಲ್ಲದೆ ಭಜನೆಯನ್ನು ಹಾಡಿದ್ದು ಖುಷಿ ಕೊಟ್ಟಿತು ಎಂದು ಸುಷ್ಮಾ ಸ್ವರಾಜ್ ಅವರು ಗಾಯಕ ಮುಬಾರಕ್ ಬೆನ್ನು ತಟ್ಟಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+