ಪಾಕಿಸ್ತಾನ ಸೇರಿದಂತೆ 5 ದೇಶಗಳ ಪ್ರಜೆಗಳಿಗೆ ಕುವೈತ್ ಪ್ರವೇಶವಿಲ್ಲ

Posted By:
Subscribe to Oneindia Kannada

ಕುವೈತ್, ಫೆಬ್ರವರಿ 2: ಮುಸ್ಲಿಮರೇ ಹೆಚ್ಚಿರುವ ಏಳು ದೇಶಗಳ ಪ್ರಜೆಗಳಿಗೆ ಪ್ರವೇಶ ನಿರ್ಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿ ಒಂದು ವಾರ ಕೂಡ ಕಳೆದಿಲ್ಲ. ಇದೀಗ ಸಿರಿಯಾ, ಇರಾಕ್, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಇರಾನ್ ಪ್ರಜೆಗಳಿಗೆ ಇನ್ನು ಮುಂದೆ ವೀಸಾ ನೀಡುವುದಿಲ್ಲ ಎಂದು ಕುವೈತ್ ಹೇಳಿದೆ.

ಈ ದೇಶಗಳ ಪ್ರಜೆಗಳು ಕುವೈತ್ ವೀಸಾಗೆ ಅರ್ಜಿ ಹಾಕಬೇಡಿ ಎಂದು ಅಲ್ಲಿನ ಸರಕಾರ ಹೇಳಿದೆ. ಈ ದೇಶಗಳಿಂದ ಮುಸ್ಲಿಂ ಮೂಲಭೂತವಾದಿಗಳು ಕುವೈತ್ ನೊಳಗೆ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.['ಅಮೆರಿಕಕ್ಕೆ ಪ್ರವೇಶ ನಿರ್ಬಂಧ' ನಿಯಮದ ಎಫೆಕ್ಟ್- ಆಫ್ಟರ್ ಎಫೆಕ್ಟ್!]

Kuwait bans visa for 5 Muslim-majority countries, including Pakistan

ಟ್ರಂಪ್ ಆದೇಶಕ್ಕೆ ಮುಂಚೆಯೇ ಕುವೈತ್ ನೊಳಗೆ ಸಿರಿಯಾ ಪ್ರಜೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. 2011ರಲ್ಲೇ ಸಿರಿಯನ್ನರಿಗೆ ವೀಸಾ ನೀಡುವುದಿಲ್ಲ ಎಂಬ ನಿಯಮ ಹಾಕಿಕೊಂಡಿದೆ. ಉಗ್ರಗಾಮಿಗಳ ಗುಂಪೊಂದು ಶಿಯಾ ಮುಸ್ಲಿಮರ ಮಸೀದಿ ಮೇಲೆ 2015ರಲ್ಲಿ ದಾಳಿ ನಡೆಸಿ, 27 ಕುವೈತ್ ಪ್ರಜೆಗಳನ್ನು ಹತ್ಯೆ ಮಾಡಿತ್ತು.

ಗಲ್ಫ್ ಕೋ ಆಪರೇಷನ್ ಕೌನ್ಸಿಲ್ (ಜಿಸಿಸಿ) ನ ಸದಸ್ಯತ್ವ ಹೊಂದಿರುವ ಕುವೈತ್, ಜಿಸಿಸಿ ಮತ್ತು ಇರಾನ್ ಮಧ್ಯದ ತಿಕ್ಕಾಟದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಿಸಿದೆ. 1990ರ ನಂತರ ಜಿಸಿಸಿ ಸದಸ್ಯತ್ವ ರಾಷ್ಟ್ರಗಳ ರಕ್ಷಣೆಯನ್ನು ವಾಷಿಂಗ್ಟನ್ ನೋಡಿಕೊಳ್ಳುತ್ತಿದೆ. ಈಗ ಟ್ರಂಪ್ ಪಟ್ಟಿಯಲ್ಲಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪೈಕಿ ಕೆಲವುದರಲ್ಲಿ ಆರ್ಥಿಕ ಹಾಗೂ ಸೈನ್ಯಕ್ಕೆ ಸಂಬಂಧಿಸಿದ ಸಂಘರ್ಷಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kuwait has suspended the issuance of visas for nationals of Syria, Iraq, Pakistan, Afghanistan and Iran.
Please Wait while comments are loading...