ಭಾರತ ಸೇರಿ 31 ದೇಶದವರು ಈ ದೇಶ ಪ್ರವೇಶಿಸುವಂತಿಲ್ಲ!

ಕುವೈತ್, ಆಗಸ್ಟ್ 02: ಕೊರೊನಾವೈರಸ್ ಸೋಂಕು ಹರಡದಂತೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಇಲ್ಲಿನ ಸರ್ಕಾರವು, ವಿಮಾನಯಾನವನ್ನು ಮತ್ತೆ ಆರಂಭಿಸಿದೆ. ಆದರೆ ಭಾರತ ಸೇರಿದಂತೆ 31 ದೇಶಗಳ ಪ್ರಯಾಣಿಕರು ಸದ್ಯ ಕುವೈತ್ ಪ್ರವೇಶಿಸುವಂತಿಲ್ಲ, ಆ ದೇಶಗಳಿಂದ ವಾಣಿಜ್ಯ ವಿಮಾನ ಇಲ್ಲಿ ಲ್ಯಾಂಡ್ ಆಗುವಂತಿಲ್ಲ ಎಂದು ಕಠಿಣ ಆದೇಶ ಹೊರಡಿಸಲಾಗಿದೆ.

Recommended Video

      ಗೃಹ ಮಂತ್ರಿಗೆ ಕೊರೋನ, ಯಾರನ್ನು ಬಿಡದ ಕೋರೋನ.!! | Oneindia Kannada

      ನಿರ್ಬಂಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಇರಾನ್, ಚೀನಾ, ಬ್ರೆಜಿಲ್, ಲೆಬನಾನ್, ಸ್ಪೇನ್, ಸಿಂಗಪುರ, ಈಜಿಪ್ಟ್ ಹಾಗೂ ಶ್ರೀಲಂಕಾ ಪ್ರಮುಖವಾಗಿವೆ. ಒಟ್ಟು 31 ದೇಶಗಳಿಂದ ಪ್ರಯಾಣಿಕರು, ಪ್ರವಾಸಿಗರು ಸದ್ಯ ಕುವೈತ್ ದೇಶಕ್ಕೆ ಬರುವಂತಿಲ್ಲ ಎಂದು ಕುವೈತ್ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಪ್ರಕಟಣೆ ಹೊರಡಿಸಿದೆ.

      ಕುವೈತ್ ನಲ್ಲಿ ಕೊವಿಡ್ 19 ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿದ್ದರು ನಿಯಂತ್ರಣದಲ್ಲಿದೆ. ಹೀಗಾಗಿ ಆರ್ಥಿಕ ಹಿತದೃಷ್ಟಿಯಿಂದ ಶನಿವಾರದಿಂದ ವಿಮಾನಯಾನವನ್ನು ಪುನಃ ಆರಂಭಿಸಲಾಯಿತು. ಕಳೆದ ಐದು ತಿಂಗಳಿನಿಂದ ವಾಣಿಜ್ಯ ಉದ್ದೇಶಿತ ವಿಮಾನಯಾನ ಸ್ಥಗಿತಗೊಳಿಸಲಾಗಿತ್ತು.

      Kuwait bans commercial flights from 31 countries including India over Covid-19

      ಕುವೈತ್ ನಲ್ಲಿ 67,911 ಕೊರೊನಾವೈರಸ್ ಸೋಂಕಿತ ಪ್ರಕರಣಗಳಿದ್ದು, 457 ಮಂದಿ ಮೃತಪಟ್ಟಿದ್ದಾರೆ. 59,213 ಮಂದಿ ಚೇತರಿಸಿಕೊಂಡಿದ್ದಾರೆ. 8,241 ಸಕ್ರಿಯ ಪ್ರಕರಣಗಳಿವೆ. 129 ಮಂದಿ ಮಾತ್ರ ವಿಷಮ ಪರಿಸ್ಥಿತಿಯಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+