ಪ್ಯಾರಿಸ್: ಉಗ್ರವಾದ ಬೆಂಬಸುವ ವ್ಯಕ್ತಿಯಿಂದ ಯೋಧನಿಗೆ ಇರಿತ
ಪ್ಯಾರಿಸ್, ಸೆಪ್ಟೆಂಬರ್ 14: ಚಾಕು ಹಿಡಿದು ಅಲ್ಲಾ ಎಂದು ಕೂಗಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಯೋಧನೊಬ್ಬನನ್ನು ಇರಿದು ಪರಾರಿಯಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಸೆಂಟ್ರಲ್ ಚಾಟೆಲೆಟ್ ಮೆಟ್ರೋ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ. ಲಂಡನ್ ನ ಮೆಟ್ರೋ ರೈಲು ನಿಲ್ದಾಣದ ಸುರಂಗದಲ್ಲಿ ಶುಕ್ರವಾರ (ಸೆ. 16) ಸ್ಫೋಟಕವೊಂದು ಸಿಡಿದು 22 ಜನರು ಗಾಯಗೊಂಡಿರುವ ಸುದ್ದಿಯು ಎಲ್ಲರನ್ನೂ ಭಯಭೀತರನ್ನಾಗಿಸಿದೆ.

ಇದರ ಜತೆಯಲ್ಲೇ ಪ್ಯಾರಿಸ್ ನಲ್ಲಿ ಅಪರಿಚಿತನಿಂದ ಯೋಧನಿಗೆ ಚೂರಿ ಇರಿತವಾಗಿರುವುದು ಯೂರೋಪ್ ಖಂಡದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯ ಕರಾಳತೆಯನ್ನು ಜಗತ್ತಿಗೆ ಮತ್ತೊಮ್ಮೆ ಸಾರಿ ಹೇಳಿದೆ.
ಏತನ್ಮಧ್ಯೆ, ಆ ದಾಳಿಕೋರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಲಂಡನ್ ಪೊಲೀಸರು ತಿಳಿಸಿದ್ದಾರೆಂದು ಕೆಲ ಸುದ್ದಿ ವಾಹಿನಿಗಳು ವರದಿ ಮಾಡಿವೆ.












Click it and Unblock the Notifications