Get Updates
Get notified of breaking news, exclusive insights, and must-see stories!

King Charles III: ಬ್ರಿಟನ್ ರಾಜ ಚಾರ್ಲ್ಸ್ 3ಗೆ ಕ್ಯಾನ್ಸರ್, ಸಾರ್ವಜನಿಕ ಭೇಟಿ ರದ್ದು

ಲಂಡನ್, ಫೆಬ್ರವರಿ 06: ಬ್ರಿಟನ್ ರಾಜ ಚಾರ್ಲ್ಸ್ -3 (King Charles III) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್‌ ಹ್ಯಾಮ್ ಅರಮನೆ ಫೆಬ್ರವರಿ 5 ರ ಸೋಮವಾರ ಅಧಿಕೃತವಾಗಿ ತಿಳಿಸಿದೆ. 75 ವರ್ಷದ ರಾಜ ಚಾರ್ಲ್ಸ್ -3 ಅವರಿಗೆ ಯಾವ ರೀತಿಯ ಕ್ಯಾನ್ಸರ್ ಇದೆ ಎಂದು ಮಾಹಿತಿ ನೀಡಿಲ್ಲ.

ಕ್ಯಾನ್ಸರ್‌ಗೆ ಒಳಗಾಗಿರುವ ಕಿಂಗ್ ಚಾರ್ಲ್ಸ್ III ಸಾರ್ವಜನಿಕ ಭೇಟಿಯನ್ನು ರಸ್ಸು ಮಾಡಿದ್ದಾರೆ. ಆದರೆ ರಾಜ್ಯ ವ್ಯವಹಾರವನ್ನು ಮುಂದುವರಿಸುತ್ತಾರೆ, ಇದರ ಜೊತೆಗೆ ರಾಷ್ಟ್ರದ ಮುಖ್ಯಸ್ಥನಾಗಿ ತನ್ನ ಸಾಂವಿಧಾನಿಕ ಪಾತ್ರಗಳನ್ನು ಯಾರಿಗೂ ಹಸ್ತಾಂತರಿಸುವುದಿಲ್ಲ ಎಂದು ಹೇಳಿದೆ.

King Charles III has diagnosed with a form of cancer, receiving treatment

ಕಳೆದ ತಿಂಗಳು ಕಿಂಗ್ ಚಾರ್ಲ್ಸ್ ಅವರನ್ನು ಲಂಡನ್ ಆಸ್ಪತ್ರೆಯಲ್ಲಿ ಮೂರು ದಿನಗಳು ಚಿಕಿತ್ಸೆ ನೀಡಲಾಗಿತ್ತು, ಈ ವೇಳೆ "ಪ್ರತ್ಯೇಕ ಕಾಳಜಿಯ ಸಮಸ್ಯೆಯಿದೆ" ಎಂದು ಅರಮನೆ ಹೇಳಿದೆ. ಜೊತೆಗೆ "ರೋಗನಿರ್ಣಯ ಪರೀಕ್ಷೆಗಳು ಕ್ಯಾನ್ಸರ್‌ನ ಒಂದು ರೂಪವನ್ನು ಗುರುತಿಸಿವೆ" ಎಂದು ಬಕಿಂಗ್‌ ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.

ಸಾರ್ವಜನಿಕ ಭೇಟಿ ರದ್ದು

ಕಿಂಗ್ ಚಾರ್ಲ್ಸ್ ತಮ್ಮ ನಿಯಮಿತ ಚಿಕಿತ್ಸೆಗಳ ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರ ಭೇಟಿಯ ಕರ್ತವ್ಯಗಳನ್ನು ಮುಂದೂಡಲು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ಆದರೆ, ಈ ಅವಧಿಯುದ್ದಕ್ಕೂ, ಅವರುಎಂದಿನಂತೆ ರಾಜ್ಯ ವ್ಯವಹಾರ ಮತ್ತು ಅಧಿಕೃತ ದಾಖಲೆಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತಾರೆ. ರಾಜನಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್‌ ಹ್ಯಾಮ್ ಅರಮನೆ ಮಾಹಿತಿ ನೀಡಿದೆ.

"ಕಿಂಗ್ ಚಾರ್ಲ್ಸ್ ಚಿಕಿತ್ಸೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾರ್ವಜನಿಕ ಕರ್ತವ್ಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಊಹಾಪೋಹಗಳನ್ನು ತಡೆಗಟ್ಟಲು ತನ್ನ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಇದನ್ನು ತಿಳಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಎಲ್ಲರಿಗೂ ಇದು ಸಾರ್ವಜನಿಕ ತಿಳುವಳಿಕೆಗೆ ಸಹಾಯ ಮಾಡುತ್ತದೆ" ಎಂದು ಅರಮನೆ ತಿಳಿಸಿದೆ.

King Charles III has diagnosed with a form of cancer, receiving treatment

ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದಾಗ ಚಾರ್ಲ್ಸ್ ರಾಜರಾಗಿ ಪದಗ್ರಹಣ ಮಾಡಿದ್ದರು. ಇನ್ನು, ಬ್ರಿಟನ್ ರಾಜನಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಹಲವಾರು ದೇಶಗಳ ನಾಯಕರು ಕಿಂಗ್ ಚಾರ್ಲ್ಸ್ III ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+