Kim Jong Un: ಶತ್ರುಗಳಿಗೆ ಬಾಹ್ಯಾಕಾಶದ ಮೂಲಕವೇ ಸರ್ವಾಧಿಕಾರಿ ಸ್ಕೆಚ್? ಬೆಚ್ಚಿಬಿದ್ದ ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಷ್ಟುದಿನ ಮಿಸೈಲ್‌ಗಳ ಮೂಲಕ ತನ್ನ ಶತ್ರುಗಳಿಗೆ ಭಯ ಹುಟ್ಟಿಸಿ, ಹವಾ ಇಟ್ಟಿದ್ದ. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಶತ್ರುಗಳ ನಾಶಕ್ಕೆ ಪಣತೊಟ್ಟಿರುವ ಕಿಮ್ ಕಂಡು ದೊಡ್ಡಣ್ಣ ಅಮೆರಿಕವೂ ಸೇರಿ ದಕ್ಷಿಣ ಕೊರಿಯಾ & ಜಪಾನ್ ದೇಶದ ನಾಯಕರು ನಡುಗಿ ಹೋಗಿದ್ದಾರೆ. ಹಾಗಾದ್ರೆ ಈಗ ಕಿಮ್ ಜಾಂಗ್ ಉನ್ ಮಾಡಿರೋ ಆ ಘನಂದಾರಿ ಕೆಲಸ ಏನು?
ಉತ್ತರ ಕೊರಿಯಾ ಹೆಸರು ಕೇಳಿದ್ರೆ ಒಂದು ಹವಾ ಇದೆ, ಹುಚ್ಚು ಸರ್ವಾಧಿಕಾರಿ ಮಾಡುವ ಕೆಲಸಗಳ ಬಗ್ಗೆ ಭಯವೂ ಇದೆ. ಇಂತಿಪ್ಪ ಕಿಮ್ ಜಾಂಗ್ ಉನ್, ಕೆಲ ದಿನಗಳ ಹಿಂದಷ್ಟೇ ಉತ್ತರ ಕೊರಿಯಾದ ಮೊದಲನೆ ಉಪಗ್ರಹ ಉಡಾವಣೆ ಮಾಡಿದ್ದ. ಗೂಢಚಾರಕೆ ನಡೆಸುವ ಸಾಮರ್ಥ್ಯ ಇರುವ ಉಪಗ್ರಹದ ಮೂಲಕ, ಕಿಮ್ ಭಯ ಹುಟ್ಟಿಸಿದ್ದಾನೆ. ಇಷ್ಟು ಸಾಲದು ಎಂಬಂತೆ ಈಗ ಹೊಸ ಸುದ್ದಿಯೊಂದು ಸಿಕ್ಕಿದ್ದು, ಜಗತ್ತಿನ ಎದೆ ನಡುಗುವಂತೆ ಮಾಡಿದೆ.

ಅಮೆರಿಕ, ದ.ಕೊರಿಯಾ ಮೇಲೆ ಕಣ್ಣು?
ಮೊನ್ನೆ ಮೊನ್ನೆಯಷ್ಟೇ ಉತ್ತರ ಕೊರಿಯಾ ತನ್ನ ಮೊಟ್ಟ ಮೊದಲ ಗೂಢಚಾರಿ ಉಪಗ್ರಹ ಉಡಾವಣೆ ಮಾಡಿತ್ತು. ಇದೀಗ ಭೂಮಿ ಕಕ್ಷೆಯಲ್ಲಿ ಅದು ಸುತ್ತುತ್ತಿದ್ದು ಅಲ್ಲಿಂದಲೇ ತನ್ನ ಶತ್ರುಗಳ ಅಡಗುದಾಣ ನೋಡುತ್ತಿದ್ದಾನೆ ಎನ್ನಲಾಗಿದೆ. ಉತ್ತರ ಕೊರಿಯಾದ ಈ ಉಪಗ್ರಹ ಕಳುಹಿಸಿರುವ ಫೋಟೋಗಳನ್ನು ಈಗ ಕಿಮ್ ಜಾಂಗ್ ಉನ್ ಪರಿಶೀಲನೆ ಮಾಡಿದ್ದಾನಂತೆ. ಈ ಬಗ್ಗೆ ಆತಂಕ ಹಂಚಿಕೊಂಡಿರುವ ದಕ್ಷಿಣ ಕೊರಿಯಾ ಮತ್ತು ಜಪಾನ್, ಸರ್ವಾಧಿಕಾರಿ ನಡೆಗೆ ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಜಪಾನ್‌ನ ಸೇನಾ ನೆಲೆಗಳನ್ನ ಕದ್ದು ನೋಡಿದ್ದಾನಂತೆ ಕಿಮ್ ಜಾಂಗ್ ಉನ್.
ಸಮುದ್ರಕ್ಕೆ ಬಿದ್ದಿದ್ದ ಉಪಗ್ರಹ
ಮೇ 31 ರಂದು ಕಿಮ್ ಜಾಂಗ್ ಉನ್ ಮೊದಲ ಬಾರಿ ತನ್ನ ದೇಶದ ಗೂಢಚಾರ ಉಪಗ್ರಹ ಉಡಾವಣೆ ಮಾಡಿದ್ದ. ಆದರೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಅದು ಹಾಳಾಗಿ ಹೋಗಿತ್ತಂತೆ. ಉತ್ತರ ಕೊರಿಯಾ ತಂತ್ರಜ್ಞಾನದ ವಿಚಾರದಲ್ಲಿ ಅಷ್ಟೊಂದು ಮುಂದೆ ಇಲ್ಲ. ಹೀಗಾಗಿಯೇ 2ನೇ ಹಂತದಲ್ಲಿ ಇಂಜಿನ್ ಸಮಸ್ಯೆ ಕಾಣಿಸಿತ್ತು. ಅಂದು 'ಚೋಲಿಮಾ-1' ರಾಕೆಟ್ ತನ್ನ ಮೊದಲ ಹಂತದ ಹಾರಾಟವನ್ನ ಸುಲಭವಾಗಿ ಪೂರ್ಣಗೊಳಿಸಿ, 2ನೇ ಹಂತದಲ್ಲಿ ಇಂಜಿನ್ ಕೈಕೊಟ್ಟಿದ್ದ ಪರಿಣಾಮ ಸರ್ವಾಧಿಕಾರಿ ಲೆಕ್ಕಾಚಾರ ಉಲ್ಟಾ ಆಗಿ ಸಮುದ್ರಕ್ಕೆ ಬಿತ್ತು. ಈಗ ರಷ್ಯಾ ಕೊಟ್ಟ ಬೆಂಬಲ ಹಾಗೂ ತಂತ್ರಜ್ಞಾನದ ಫಲವಾಗಿ ಉತ್ತರ ಕೊರಿಯಾ ಗೆದ್ದು ಬೀಗಿದೆ.

ಬಾಹ್ಯಾಕಾಶದ ಮೂಲಕ ಅಟ್ಯಾಕ್?
ಈಗಿನ ಮಾಹಿತಿ ಪ್ರಕಾರ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಗೂಢಚಾರ ಉಪಗ್ರಹ ಬಳಸಿ, ತನ್ನ ಶತ್ರುಗಳನ್ನ ಹಣಿಯಲು ಮುಂದಾಗಿದ್ದಾನಂತೆ. ಹೀಗಾಗಿಯೆ ತಾನು ಲಾಂಚ್ ಮಾಡಿಸಿದ್ದ ಉಪಗ್ರಹದ ಫೋಟೋಗಳನ್ನ ಪರಿಶೀಲನೆ ಮಾಡುತ್ತಿದ್ದಾನೆ. ಹಾಗೆ ಇದನ್ನೆಲ್ಲಾ ಆಧರಿಸಿ ಭವಿಷ್ಯದಲ್ಲಿ ದಕ್ಷಿಣ ಕೊರಿಯಾ, ಜಪಾನ್ ಮತ್ತು ಉತ್ತರ ಕೊರಿಯಾ ಸಮೀಪವೇ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕಿಮ್ ಶತ್ರುಗಳಿಗೆ ಭಯ ಹುಟ್ಟಿದ್ದು, ಏನು ಮಾಡೋದು ಅಂತ ಚಡಪಡಿಕೆಯೂ ಶುರುವಾಗಿದೆ.
ಒಟ್ನಲ್ಲಿ ಕಿಮ್ ಜಾಂಗ್ ಉನ್ ತೊಡೆತಟ್ಟಿ ನಿಂತಿದ್ದಾನೆ. ತನ್ನ ಶತ್ರುಗಳಿಗೆ ಈ ಮೂಲಕವೇ ಪಾಠ ಕಲಿಸಲು ಸಜ್ಜಾಗಿದ್ದಾನೆ. ಉ.ಕೊರಿಯಾ ಉಪಗ್ರಹ ಉಡಾವಣೆ ಮಾಡಿದ ಮರುಕ್ಷಣ, ಶತ್ರುಗಳಿಗೆ ನೆಮ್ಮದಿ ಹಾಳಾಗಿ ಹೋಗಿತ್ತು. ಈಗ ನೋಡಿದರೆ ಉಪಗ್ರಹದ ಫೋಟೋಗಳನ್ನು ಸರ್ವಾಧಿಕಾರಿ ಪರಿಶೀಲನೆ ಮಾಡಿದ್ದಾನಂತೆ. ಮುಂದೆ ಇದನ್ನೆಲ್ಲಾ ಇಟ್ಟುಕೊಂಡು ಏನೇನ್ ಮಾಡ್ತಾನೋ ಅಂತಾ ಕಾದು ನೋಡಬೇಕಿದೆ. ಹೀಗಾಗಿ ಕಿಮ್‌ನ ಶತ್ರುಗಳ ಎದೆಯಲ್ಲಿ ಈಗ ಕ್ಷಣಕ್ಷಣಕ್ಕೂ ನಡುಕ ಶುರುವಾಗಿರುವುದು ಸುಳ್ಳಲ್ಲ.












Click it and Unblock the Notifications