'ಗ್ರೇಟ್ ಆಪರೇಶನ್'ಗಾಗಿ ಬಿಳಿ ಕುದುರೆ ಏರಿಬಂದ ಕಿಮ್ ಜಾಂಗ್ ಉನ್

ಸಿಯೋಲ್, ಅಕ್ಟೋಬರ್ 16: ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಬಿಳಿ ಕುದುರೆ ಏರಿ ಮಂಜಿನಿಂದ ಆವೃತವಾದ ಪರ್ವತದಲ್ಲಿ ಪ್ರಯಾಣಿಸುತ್ತಿರುವ ಚಿತ್ರವನ್ನು ಕೆಸಿಎನ್ ಎ ನ್ಯೂಸ್ ಏಜೆನ್ಸಿ ಬಿಡುಗಡೆ ಮಾಡಿದೆ.

ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಕಿಮ್ ಜಾಂಗ್ ಉನ್, ಈ ಸ್ಥಳಕ್ಕೆ ತೆರಳುವ ರೂಢಿ ಇರಿಸಿಕೊಂಡಿದ್ದರಿಂದ, ಯಾವುದೋ ಮಹತ್ವದ ನಿರ್ಣಯವನ್ನು ಸದ್ಯದಲ್ಲೇ ಹೊರಹಾಕಲಿದ್ದಾರೆ ಎಂಬ ನಿರೀಕ್ಷೆ ದಟ್ಟವಾಗಿದೆ.

ಮೌಂಟ್ ಪಾಯಿಕ್ಟು ಉತ್ತರ ಕೊರಿಯಾದ ರಾಜಮನೆತನವಾದ ಕಿಮ್ ವಂಶಕ್ಕೆ ಪವಿತ್ರ ಸ್ಥಳಗಳಲ್ಲೊಂದು. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಿಮ್ ವಂಶದ ನಾಯಕರು ಈ ಪರ್ವತಕ್ಕೆ ಪ್ರಯಾಣ ಮಾಡುತ್ತಿದ್ದರು.

Kim Jong Uns Horse Riding photo Goes Viral

ಇದೀಗ ಕುಮ್ ಜಾಂಗ್ ಉನ್ ಸಹ ಮೌಂಟ್ ಪಾಯುಕ್ಟುಗೆ ಪ್ರಯಾಣ ಬೆಳೆಸಿದ್ದು, ಕುತೂಹಲ ಕೆರಳಿಸಿದೆ. ತನ್ನ ಸಹಚರರೊಂದಿಗೆ ಈ ಪರ್ವತಕ್ಕೆ ತೆರಳಿರುವ ಕಿಮ್, ತನ್ನ ವಂಶದ ಅಧ್ಯಾತ್ಮಕ ನೆಲೆಗೆ ತೆರಳಿದ್ದರು.

ಇದೀಗ ಯಾವ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಕಿಮ್ ಜಾಂಗ್ ಉನ್ ಅಲ್ಲಿಗೆ ಪ್ರಯಾಣ ಬೆಳೆಸಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+